ವೋಡಫೋನ್-ಐಡಿಯಾ ವಿಲೀನ: ಏರ್‌ಟೆಲ್ ನಂ 1 ಸ್ಥಾನಕ್ಕೆ ಕುತ್ತು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 31, Aug 2018, 6:16 PM IST
Vodafone completes merger with Idea, creates India's largest mobile operator
Highlights

ಐಡಿಯಾ-ವೋಡಾಫೋನ್ ವಿಲೀನ ಪ್ರಕ್ರಿಯೆ ಪೂರ್ಣ! ಐಡಿಯಾ-ವೋಡಾಫೋನ್ ಗೆ 408 ಮಿಲಿಯನ್ ಗ್ರಾಹಕರು! ಭಾರತದ ದೊಡ್ಡ ಟೆಲಿಕಾಂ ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆ! ಏರ್‌ಟೆಲ್ ನಂಬರ್ 1 ಸ್ಥಾನಕ್ಕೆ ಬಿತ್ತು ಕುತ್ತು

ನವದೆಹಲಿ(ಆ.31): ಐಡಿಯಾ ಸೆಲ್ಯುಲರ್ ಹಾಗೂ ವೋಡಫೋನ್ ಇಂಡಿಯಾ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಟ್ಟಾರೆ 408 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಭಾರತದ ದೊಡ್ಡ ಟೆಲಿಕಾಂ ಸೇವಾ ಪೂರೈಕೆ ಸಂಸ್ಥೆಯಾಗಿ ಹೊರಹೊಮ್ಮಿದೆ. 

ವೋಡಫೋನ್ ಐಡಿಯಾ ಲಿಮಿಟೆಡ್ ಎಂಬ ಹೆಸರಿನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸಂಸ್ಥೆಯಲ್ಲಿ 12 ನಿರ್ದೇಶಕರಿದ್ದು, ಕುಮಾರ್ ಮಂಗಲಂ ಬಿರ್ಲಾ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದು ಜಂಟಿ ಹೇಳಿಕೆ ತಿಳಿಸಿದೆ. 

ಭಾರತ ಆದಾಯ ಮಾರುಕಟ್ಟೆಯಲ್ಲಿ ಶೇ.32.2 ರಷ್ಟನ್ನು ಐಡಿಯಾ-ವೋಡಫೋನ್ ಹೊಂದಿರಲಿದ್ದು, 9 ಟೆಲಿಕಾಂ ಸಂಸ್ಥೆಗಳ ಪೈಕಿ ಅಗ್ರಸ್ಥಾನ ಹೊಂದಿರಲಿವೆ ಎಂದು ವೋಡಫೋನ್ ಐಡಿಯಾ ಲಿಮಿಟೆಡ್ ಹೇಳಿದೆ. ಪ್ರಸ್ತುತ ಭಾರ್ತಿ ಏರ್ಟೆಲ್ ನಂ.1 ಸ್ಥಾನದಲ್ಲಿದ್ದು ಈಗ ಆ ಸ್ಥಾನವನ್ನು ವೋಡಫೋನ್ ಐಡಿಯಾ ಲಿ. ಪಡೆದುಕೊಳ್ಳಲಿದೆ.

loader