ಜೊಮಾಟೋ ಮಾರುಕಟ್ಟೆ ಪಾಲು ಕಳೆದುಕೊಳ್ಳುತ್ತಿದೆ, ಉದ್ಯೋಗಿಗಳಿಗೆ ಜೊಮಾಟೋದಲ್ಲೇ ಆರ್ಡರ್ ಮಾಡಲು ಒತ್ತಾಯಿಸುತ್ತಿದೆ ಎಂಬ ಆರೋಪಗಳನ್ನು ಸಿಇಒ ದೀಪಿಂದರ್ ಗೋಯಲ್ ತಳ್ಳಿಹಾಕಿದ್ದಾರೆ. ರೆಡ್ಡಿಟ್ ಪೋಸ್ಟ್‌ನಲ್ಲಿನ ಆರೋಪಗಳು ಸುಳ್ಳು ಎಂದು ಎಕ್ಸ್(ಟ್ವಿಟ್ಟರ್)ನಲ್ಲಿ ಸ್ಪಷ್ಟಪಡಿಸಿದ್ದಾರೆ. ಆಯ್ಕೆಯ ಸ್ವಾತಂತ್ರ್ಯವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಆನ್‌ಲೈನ್ ಆಹಾರ ವಿತರಣಾ ಕಂಪನಿ ಜೊಮಾಟೋ ಸಿಇಒ ದೀಪಿಂದರ್ ಗೋಯಲ್ ಅವರು, ತಮ್ಮ ಕಂಪನಿಯು ಮಾರುಕಟ್ಟೆ ಪಾಲನ್ನು ಕಳೆದುಕೊಂಡು ಅವ್ಯವಸ್ಥೆಗೆ ಇಳಿದಿದೆ ಎಂಬ ರೆಡ್ಡಿಟ್ ಪೋಸ್ಟ್‌ನಲ್ಲಿ ಮಾಡಲಾದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಅವರು ತಮ್ಮ ಎಕ್ಸ್ (ಹಳೆಯ ಟ್ವಿಟ್ಟರ್) ನಲ್ಲಿ ರೆಡ್ಡಿಟ್ ಪೋಸ್ಟ್ ಅನ್ನು ಹಂಚಿಕೊಂಡು, ಈ ಆರೋಪಗಳನ್ನು ಸಂಪೂರ್ಣ ಸುಳ್ಳು ಎಂದಿದ್ದಾರೆ. ಜೊತೆಗೆ ಕಂಪನಿಯು ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುತ್ತಿಲ್ಲ ಎಂದು ಪುನರುಚ್ಚರಿಸಿದ್ದಾರೆ. "ಇದನ್ನು ಸ್ಪಷ್ಟಪಡಿಸುವುದು ಸಹ ಮುಜುಗರದ ಸಂಗತಿ - ಆದರೆ ಅನೇಕ ಜನರು ಕಳವಳದಿಂದ ನನ್ನನ್ನು ಕೇಳಿದ್ದರಿಂದ ಹಾಗೆ ಮಾಡುತ್ತಿದ್ದೇನೆ" ಎಂದು ಅವರು ಬರೆದಿದ್ದಾರೆ, ನಾವು ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುತ್ತಿಲ್ಲ, ಮತ್ತು ನಮ್ಮ ಉದ್ಯೋಗಿಗಳಿಗೆ ಜೊಮಾಟೋದಲ್ಲಿಯೇ ಆರ್ಡರ್ ಮಾಡಬೇಕು ಎಂದು ಒತ್ತಾಯಿಸುವುದಿಲ್ಲ. ಆಯ್ಕೆಯ ಸ್ವಾತಂತ್ರ್ಯವನ್ನು ನಾವು ಬಲವಾಗಿ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.

ಜೊಮೆಟೋ ಡೆಲಿವರಿ ಬಾಯ್ ಫುಡ್ ಡೆಲಿವರಿ ಕೊಡದೇ ಜೀವ ಬೆದರಿಕೆ ಹಾಕಿದ

ಓರ್ವ ಅನಾಮಧೇಯ ಜೊಮಾಟೋ ಉದ್ಯೋಗಿ ಕಂಪನಿಯು ಸ್ವಿಗ್ಗಿ ಮತ್ತು ಜೆಪ್ಟೋ ಕ್ಯಾಫೆ ಮುಂತಾದ ಪ್ರತಿಸ್ಪರ್ಧಿಗಳ ಎದುರು ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಿದ ನಂತರ ಈ ವಿವಾದ ಆರಂಭವಾಯಿತು. ಜೊಮಾಟೋದಲ್ಲಿನ ವಿಷಯಗಳು ಹಳಿ ತಪ್ಪುತ್ತಿರುವಂತೆ ತೋರುತ್ತಿದೆ. ಇತ್ತೀಚಿನ ಆಂತರಿಕ ಸಭೆಯಲ್ಲಿ ಈ ಬಗ್ಗೆ ಹೇಳಿಕೊಂಡಿದೆ ಎಂದು ಆ ಉದ್ಯೋಗಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಜೊಮಾಟೋ ಉದ್ಯೋಗಿಗಳಿಗೆ ತಿಂಗಳಿಗೆ ಕನಿಷ್ಠ ಏಳು ಬಾರಿ ಆರ್ಡರ್ ಮಾಡಬೇಕೆಂಬ ಒತ್ತಾಯವಿದೆ ಮತ್ತು ಸ್ಪರ್ಧಾತ್ಮಕ ಅಪ್ಲಿಕೇಶನ್‌ಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಇದರ ಪರಿಣಾಮವಾಗಿ ಉದ್ಯೋಗಿಗಳು ಭಯಭೀತರಾಗಿ ಅತೃಪ್ತರಾಗಿದ್ದಾರೆ ಎಂದು ಹೇಳಲಾಗಿದೆ.

ಇದೇ ವೇಳೆ ಜೋಮಾಟೋದ ಟಾಪ್ ಮ್ಯಾನೇಜ್‌ಮೆಂಟ್‌ನಲ್ಲಿ ಗೊಂದಲವಿದೆ . ಆಹಾರ ವಿತರಣಾ ವಿಭಾಗದ ಸಿಇಒ ರಾಕೇಶ್ ರಂಜನ್ ಅವರನ್ನು ಇದನ್ನು ಹೇಳಿದ ನಂತರ ಕೆಲವು ದಿನಗಳಲ್ಲಿ ಅವರನ್ನೇ ಬದಲಾವಣೆ ಮಾಡಿದ್ದಾರೆ. ಒಳ ಜಗಳ ನಡೆಯುತ್ತಿದೆ. ಕಂಪನಿಯ ಆಂತರಿಕ ಪರಿಸರ ಕೆಟ್ಟದಾಗಿದೆ. ಕಚೇರಿ ರಾಜಕೀಯ, ಸೂಕ್ಷ್ಮ ನಿರ್ವಹಣೆ ಮತ್ತು ನೌಕರರನ್ನು ಸಾರ್ವಜನಿಕವಾಗಿ ಕೆಳಮಟ್ಟಕ್ಕೆ ತರುವುದು ಸಾಮಾನ್ಯವಾಗಿದೆ ಎಂದು ಆರೋಪಿಸಲಾಗಿದೆ. ಜೊತೆಗೆ, ಪ್ಲಾಟ್‌ಫಾರ್ಮ್ ಶುಲ್ಕಗಳ ಮೂಲಕ ಮಾತ್ರ ಲಾಭ ಪಡೆಯುತ್ತಿದೆ ಎಂದು ಹೇಳಲಾಗಿದ್ದು, ದೀರ್ಘಾವಧಿಯ ಸುಸ್ಥಿರತೆಗೆ ಯಾರೂ ಕಾಳಜಿ ತೋರಿಸುತ್ತಿಲ್ಲ ಎಂದು ತಿಳಿಸಲಾಗಿದೆ.

ಸ್ವಿಗ್ಗಿ, ಝೊಮೆಟೋ, ಅಮೆಜಾನ್‌ಗೆ ಗಿಗ್‌ ತೆರಿಗೆ: ಸಚಿವ ಸಂಪುಟ ಒಪ್ಪಿಗೆ

ಪೋಸ್ಟ್‌ನಲ್ಲಿ, ಜೊಮಾಟೋ ವಿತರಣಾ ಸಹಯೋಗಿಗಳು ಕಡಿಮೆ ವೇತನ ಪಡೆದು ಹೆಚ್ಚು ಕೆಲಸ ಮಾಡುತ್ತಿದ್ದಾರೆ ಎಂದು ವಿಶೇಷವಾಗಿ ಹೈಲೈಟ್ ಮಾಡಲಾಗಿದೆ. ಇದರಿಂದ ಅನೇಕ ವಿತರಣಾ ಸವಾರರು ಜೊಮಾಟೋವನ್ನು ತೊರೆದು ಸ್ವಿಗ್ಗಿ ಮತ್ತು ಜೆಪ್ಟೋ ಜತೆ ಸೇರಿಕೊಳ್ಳುತ್ತಿದ್ದಾರೆ. ಗ್ರಾಹಕರು ನಿರಾಶರಾಗಿದ್ದಾರೆ, ಸವಾರರು ನಿರಾಶರಾಗಿದ್ದಾರೆ, ರೆಸ್ಟೋರೆಂಟ್ ಪಾಲುದಾರರು ನಿರಾಶರಾಗಿದ್ದಾರೆ. ಇದು ಒಂದು ವಿಷವರ್ತುಲವಾಗಿದೆ ಎಂದು ಆ ಪೋಸ್ಟ್ ಹೇಳುತ್ತದೆ. ಹೊರಗೆ ಜೊಮಾಟೋ ಬಣ್ಣ ಬೀರುವಂತೆ ಕಂಡರೂ, ಒಳಗೆ ತೀವ್ರ ಗೊಂದಲ ಮತ್ತು ಕುಸಿತ ಮುಂದುವರಿದಿದೆ ಎಂದು ಆರೋಪಿಸಲಾಗಿದೆ.

Scroll to load tweet…