Asianet Suvarna News Asianet Suvarna News

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬ್ಯಾಂಕ್ ಸ್ಲಿಪ್, ಇದೆಂಥಾ ಹೀಗ್ ಬರೆದಿದ್ದು?

ಸಾಮಾಜಿಕ ಜಾಲತಾಣದಲ್ಲಿ ಬ್ಯಾಂಕ್ ಸ್ಲಿಪ್ ಒಂದು ವೈರಲ್ ಆಗಿದೆ. ಸ್ಲಿಪ್ ಭರ್ತಿ ಮಾಡುವ ವೇಳೆ ವ್ಯಕ್ತಿ ಬರೆದ ವಿಷ್ಯ ನೋಡಿ ಜನರು ಬಿದ್ದು ಬಿದ್ದು ನಗ್ತಿದ್ದಾರೆ. ಅಂತದ್ದು ಏನಿದೆ ಅದ್ರಲ್ಲಿ ಎಂಬುದನ್ನು ನೀವೇ ನೋಡಿ.
 

Viral post of bank slip where cosumber write something absurd roo
Author
First Published Jul 11, 2023, 11:32 AM IST | Last Updated Jul 11, 2023, 11:32 AM IST

ಸಾಮಾಜಿಕ ಜಾಲತಾಣಗಳು ಜನರ ಮನರಂಜನೆ ಸ್ಥಳವಾಗಿದೆ. ಇದನ್ನು ನೋಡ್ತಾ ಇದ್ರೆ ಸಮಯ ಸರಿದಿದ್ದು ತಿಳಿಯೋದಿಲ್ಲ. ಜನರಿಗೆ ಅಗತ್ಯವಾದ ವಿಷ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಪ್ರಯತ್ನ ಕೂಡ ಸಾಕಷ್ಟು ನಡೆಯುತ್ತಿದೆ. ಸಾಮಾಜಿಕ ಜಾಲತಾಣದ ಮೂಲಕವೇ ಅನೇಕರು ಪ್ರಸಿದ್ಧಿಗೆ ಬರ್ತಿದ್ದಾರೆ. ಕೆಲ ಹೋಟೆಲ್, ಅಂಗಡಿಗಳು, ಕಲಾವಿದರು ಸಾಮಾಜಿಕ ಜಾಲತಾಣದ ಮೂಲಕವೇ ಹೆಸರು ಮಾಡ್ತಿದ್ದಾರೆ. ಜನರು ಸೋಶಿಯಲ್ ಮೀಡಿಯಾ ನೋಡಿಯೇ ಬಾಡಿಗೆ ಮನೆ, ಸ್ವಂತ ಮನೆ, ಜಮೀನು ಖರೀದಿ ಮಾಡ್ತಿದ್ದಾರೆ. 

ಸಾಮಾಜಿಕ ಜಾಲತಾಣ (Social Network ) ದಲ್ಲಿ ಗಂಭೀರ ಸಂಗತಿ ಮಾತ್ರವಲ್ಲ ಕೆಲವೊಂದು ವಿಚಿತ್ರವೆನ್ನಿಸುವ ಹಾಗೂ ತಮಾಷೆ ವಿಡಿಯೋಗಳು ಹಾಗೂ ವಿಷ್ಯಗಳು ವೈರಲ್ (Viral) ಆಗುತ್ತವೆ. ಜನರನ್ನು ಈ ವಿಡಿಯೋಗಳು ನಕ್ಕು ನಗಿಸುತ್ತಿವೆ. ಕೆಲ ಫೋಟೋ ಹಾಗೂ ವಿಡಿಯೋ (Video) ಗಳು ಕೆಟ್ಟ ಮೂಡ್ ಗಳನ್ನು ರಿಪ್ರೆಶ್ ಮಾಡುತ್ವೆ. 

ಅಂಬಾನಿಯ 15000 ಕೋಟಿ ಬೆಲೆಯ ಬಂಗಲೆ ಅಂಟಿಲಿಯಾ ಮಳೆಗೆ ಸೋರ್ತಿದ್ಯಾ?

ಎಷ್ಟೇ ವಿದ್ಯೆ ಕಲಿತಿರಲಿ ಕೆಲವರಿಗೆ ಬ್ಯಾಂಕ್ ಸೇರಿದಂತೆ ಹಣಕಾಸಿನ ವ್ಯವಹಾರದ ಬಗ್ಗೆ ಸರಿಯಾಗಿ ಜ್ಞಾನವಿರೋದಿಲ್ಲ. ಬ್ಯಾಂಕ್ ಅಥವಾ ಬೇರೆ ಯಾವುದೇ ಕಂಪನಿಗೆ ಹೋದ್ರೂ ಚೆಕ್ ಬರೆಯೋದ್ರಿಂದ ಹಿಡಿದು ಫಾರ್ಮ್ ತುಂಬುವವರೆಗೆ ಯಾವುದೂ ಸರಿಯಾಗಿ ಅರ್ಥವಾಗೋದಿಲ್ಲ. ಬ್ಯಾಂಕ್ ನಲ್ಲಿ ಕೂಡ ಹಣ ಪಾವತಿ ಅಥವಾ ಹಣ ವಿತ್ ಡ್ರಾ ವೇಳೆ ಸ್ಲಿಪ್ ತುಂಬಬೇಕು. ಸ್ಲಿಪ್ ತುಂಬುವಾಗ ಕೆಲ ಗೊಂದಲಗಳಿರುತ್ತವೆ. ಈಗ ಎಲ್ಲ ಬ್ಯಾಂಕ್ ಗಳೂ ಆಯಾ ರಾಜ್ಯದ ಭಾಷೆಯಲ್ಲೇ ಸ್ಲಿಪ್ ನೀಡುತ್ತವೆ. ಆದ್ರೂ ಜನರಿಗೆ ಗೊಂದಲವಿರುತ್ತದೆ. ಎಲ್ಲಿ ಏನು ತುಂಬಬೇಕೆಂದು ಬ್ಯಾಂಕ್ ಸಿಬ್ಬಂದಿಯನ್ನು ಕೇಳಿ ಭರ್ತಿ ಮಾಡೋರಿದ್ದಾರೆ. ವ್ಯಕ್ತಿಯೊಬ್ಬ ಬ್ಯಾಂಕ್ ಸ್ಲಿಪ್ ನಲ್ಲಿ ಬರೆದಿರುವ ವಿಷ್ಯ ಈಗ ವೈರಲ್ ಆಗಿದೆ. ಅದನ್ನು ನೋಡಿದ ಜನರು ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್ ನಲ್ಲಿ @NationFirst78 ಎಂಬ ಬಳಕೆದಾರ ಫೋಟೋ ಹಂಚಿಕೊಂಡಿದ್ದಾನೆ. ಇದು ಹಳೆಯ ಫೋಟೋ ಆದ್ರೂ ಈಗ್ಲೂ ವೈರಲ್ ಆಗ್ತಾನೆ ಇದೆ. ಪೋಸ್ಟ್ ನಲ್ಲಿ ಬ್ಯಾಂಕ್ ಠೇವಣಿ ಸ್ಲಿಪ್ ಫೋಟೋ ನಿಮಗೆ ಕಾಣಿಸುತ್ತದೆ. ಅದು ಹಿಂದಿಯಲ್ಲಿದೆ. ಖಾತೆದಾರ ಠೇವಣಿ ಮಾಡಲು ಅಗತ್ಯವಿರುವ ಎಲ್ಲ ಮಾಹಿತಿಯನ್ನು ಫಾರ್ಮ್ ನಲ್ಲಿ ಭರ್ತಿ ಮಾಡಿದ್ದಾರೆ. ಆದ್ರೆ ಮೊತ್ತದ ಜಾಗದಲ್ಲಿ ಮಾತ್ರ ತನ್ನ ರಾಶಿಯನ್ನು ಬರೆದಿದ್ದಾನೆ. ಮೊತ್ತ ಅಥವಾ ಅಮೌಂಟ್ ಗೆ ಹಿಂದಿಯಲ್ಲಿ ರಾಶಿ ಎನ್ನಲಾಗುತ್ತದೆ. ಸ್ಲಿಪ್ ನಲ್ಲಿ ಕೂಡ ರಾಶಿ ಎಂದು ಬರೆಯಲಾಗಿದೆ. ಆ ವ್ಯಕ್ತಿ ರಾಶಿ ಪಕ್ಕದಲ್ಲಿ ತನ್ನ ರಾಶಿ ಹೆಸರನ್ನು ಬರೆದಿದ್ದಾನೆ. ನೀವು ಮೊತ್ತದ ಜಾಗದಲ್ಲಿ ತುಲಾ ಎಂಬುದನ್ನು ನೋಡ್ಬಹುದು. 

ಟೊಮೆಟೋ ಬೆಲೆ ಬಗ್ಗೆ ತಲೆಕೆಡಿಸ್ಕೋಬೇಡಿ, ಮನೆಯಲ್ಲೇ ಬೆಳೆಯೋದು ತುಂಬಾ ಈಝಿ

ಮೊರಾದಾಬಾದ್‌ನ ಬ್ಯಾಂಕ್ ಶಾಖೆಯಲ್ಲಿ ಈ ಘಟನೆ ನಡೆದಿದೆ. ವೈರಲ್ ಆದ ಚಿತ್ರವನ್ನು ನೋಡಿದ ಜನರು ಖುಷಿಪಟ್ಟು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ವ್ಯಕ್ತಿಗೆ ರಾಶಿ ಅರ್ಥ ತಿಳಿದಿತ್ತೋ ಇಲ್ವೋ ಗೊತ್ತಿಲ್ಲ. ವ್ಯಕ್ತಿ ತಮಾಷೆಗೆ ಅಲ್ಲಿ ತುಲಾ ಅಂತಾ ನಮೂದಿಸಿದ್ದಾರಾ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಆದ್ರೆ ಆತ ರಾಶಿ ಮುಂದೆ ತುಲಾ ಎಂದು ಬರೆದ ಸ್ಲಿಪ್ ಮಾತ್ರ ವೈರಲ್ ಆಗ್ತಿದೆ. ಎಂತಹ ಅದ್ಭುತ ಜನರು, @singhkhushboo61 ಅವರಿಗೆ ಸಮರ್ಪಿಸಲಾಗಿದೆ (ತುಲಾ) ಎಂದು ಬರೆದು, ಇಮೊಜಿ ಹಾಕಿದ್ದಾರೆ ಟ್ವಿಟರ್ ಖಾತೆದಾರ. ಟ್ವಿಟರ್ ಬಳಕೆದಾರರೊಬ್ಬರು ರಾಶಿ ಎನ್ನುವ ಜಾಗದಲ್ಲಿ ಬ್ಯಾಂಕ್ ಧನರಾಶಿ ಎಂದು ಬರೆದಿದ್ದರೆ ವ್ಯಕ್ತಿಗೆ ಅರ್ಥವಾಗ್ತಾಯಿತ್ತು ಎಂದು ಕಮೆಂಟ್ ಮಾಡಿದ್ದಾರೆ. ರಾಶಿ ಮುಂದೆ ತುಲಾ ಬರೆದಿದ್ದಾರೆಂದು ಖುಷಿಪಡಿ. ನನ್ನ ಸ್ನೇಹಿತ ಕನ್ಯ ಎಂದು ಬರೆದಿದ್ದ ಎಂದು ಮತ್ತೊಬ್ಬ ಕಮೆಂಟ್ ಮಾಡಿದ್ದಾನೆ. 
 

Latest Videos
Follow Us:
Download App:
  • android
  • ios