ರಾಜಿ ಆಗಿಲ್ಲ, ಇನ್ನೆಂದೂ ಆತನ ಮನೆಗೆ ಕಾಲಿಡೋದಿಲ್ಲ: ರೇಮಂಡ್ ಗ್ರೂಪ್ ಚೇರ್ಮನ್ ಗೌತಮ್ ಬಗ್ಗೆ ತಂದೆ ಆಕ್ರೋಶ!
ಆಸ್ತಿಗಾಗಿ 9 ವರ್ಷ ತಂದೆಯನ್ನೇ ದೂರವಿಟ್ಟ ರೇಮಂಡ್ ಗ್ರೂಪ್‌ನ ಮಾಲೀಕ ಗೌತಮ್ ಸಿಂಘಾನಿಯಾಗೆ ಪತ್ನಿ ಕೈಕೊಟ್ಟು ಹೋದ ಬಳಿಕ ತಂದೆ ವಿಜಯಪಥ್ ಸಿಂಘಾನಿಯಾ ನೆನಪಾಗಿದ್ದರು. ಅವರ ಜೊತೆಗಿನ ವೈರಲ್ ಫೋಟೋದ ಬಗ್ಗೆ ಸ್ವತಃ ವಿಜಯಪಥ್ ಸಿಂಘಾನಿಯಾ ಮಾತನಾಡಿದ್ದಾರೆ.
ಮುಂಬೈ (ಮಾ.26): ವಿಜಯಪಥ್ ಸಿಂಘಾನಿಯಾ, ಇಂದು ದೇಶದ ಗಲ್ಲಿಗಲ್ಲಿಗಳಲ್ಲಿ ಕಾಣಸಿಗುವ ರೇಮಂಡ್ ಗ್ರೂಪ್‌ನ ಚೇರ್ಮನ್ ಆಗಿದ್ದಂಥವರು. 2015ರಲ್ಲಿ ಕಂಪನಿಯ ಎಲ್ಲಾ ಉಸ್ತುವಾರಿಯನ್ನು ಮಗ ಗೌತಮ್ ಸಿಂಘಾನಿಯಾ ಹೆಗಲಿಗೆ ಹಾಕಿ ನಿವೃತ್ತರಾಗಿದ್ದರು. ಆದರೆ, ಮಗ ಅಪ್ಪನನ್ನು ತನ್ನ ಮನೆಯಿಂದಲೇ ಹೊರಹಾಕಿದ್ದ. ಇತ್ತೀಚೆಗೆ ಮಗ ಗೌತಮ್ ಸಿಂಘಾನಿಯಾ ಹಾಗೂ ವಿಜಯಪಥ್ ಸಿಂಘಾನಿಯಾ ಒಂದಾಗಿ ಫೋಟೋಗೆ ಪೋಸ್ ನೀಡಿದ್ದರು. ಇದರ ಬೆನ್ನಲ್ಲಿಯೇ ರೇಮಂಡ್ ಗ್ರೂಪ್‌ನ ಅಪ್ಪ-ಮಗ ಒಂದಾಗಿದ್ದಾರೆ ಎನ್ನುವ ಸುದ್ದಿ ಹೊರಬಂದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯಪಥ್ ಸಿಂಘಾನಿಯಾ, ಮಗನೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಂಡಿಲ್ಲ. ಇನ್ನೆಂದೂ ಆತನ ಮನೆಗೆ ಕಾಲಿಡೋದಿಲ್ಲ ಎಂದ ಹೇಳಿದ್ದಾರೆ. ಕಳೆದ ವಾರ ಪ್ರಕಟವಾದ ಚಿತ್ರದಲ್ಲಿ ಗೌತಮ್ ಸಿಂಘಾನಿಯಾ ತನ್ನ ತಂದೆಯೊಂದಿಗೆ ಸಂಭ್ರಮದಿಂದಲೇ ಫೋಟೋಗೆ ಪೋಸ್ ನೀಡಿದ್ದರು. 'ಇಂದು ತಂದೆ ನಮ್ಮ ಮನೆಗೆ ಬಂದಿದ್ದು ಬಹಳ ಸಂತಸ ನೀಡಿತು. ಅವರ ಆಶೀರ್ವಾದವನ್ನು ನಾನು ಪಡೆದುಕೊಂಡೆ. ನಿಮಗೆ ಎಂದೆಂದಿಗೂ ಉತ್ತಮ ಆರೋಗ್ಯ ಸಿಗಲಿ ಪಪ್ಪಾ' ಎಂದು ಅವರು ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.
ಆದರೆ, ಈ ಫೋಟೋ ಕುರಿತಾಗಿ ಟಿವಿ ಚಾನೆಲ್‌ಗೆ ಪ್ರತಿಕ್ರಿಯೆ ನೀಡಿರುವ ವಿಜಯಪಥ್ ಸಿಂಘಾನಿಯಾ, ತಮ್ಮ ಜೊತೆಗಿನ ಫೋಟೋ ಕ್ಲಿಕ್ಕಿಸಿ ಮಾಧ್ಯಮಗಳಿಗೆ ಬಲವಾದ ಸಂದೇಶ ಕಳುಹಿಸುವ ಉದ್ದೇಶದಿಂದ ಮಗ ನನ್ನನ್ನು ಮನೆಗೆ ಆಹ್ವಾನಿಸಿದ್ದ ಎಂದು ಹೇಳಿದ್ದಾರೆ.
ಮಗನ ಅಸಿಸ್ಟೆಂಟ್ ಮಾರ್ಚ್ 20ರಂದು ನನಗೆ ಕರೆ ಮಾಡಿ, ಮನಗೆ ಬರುವಂತೆ ಹೇಳಿದ್ದ. ಆದರೆ, ಇದಕ್ಕೆ ನಾನು ನಿರಾಕರಿಸಿದ್ದ. ಈ ವೇಳೆ ಗೌತಮ್ ವಿಡಿಯೋ ಸ್ಕ್ರೀನ್‌ನಲ್ಲಿ ಬಂದು, ಮನೆಗೆ ಭೇಟಿ ನೀಡಿ ಕಾಫಿ ಕುಡಿದು ಹೋಗುವಂತೆ ಒತ್ತಾಯ ಮಾಡಿದ್ದ ಎಂದು ವಿಜಯಪಥ್ ಸಿಂಘಾನಿಯಾ ಹೇಳಿದ್ದಾರೆ. ಕೊನೆಗೆ ಆತನ ಒತ್ತಾಯಕ್ಕೆ ಮಣಿದು ಮನಗೆ ಹೋಗಲು ಒಪ್ಪಿದ್ದೆ ಎಂದು ತಿಳಿಸಿದ್ದಾರೆ. ಅದಾದ ಕೆಲವೇ ಹೊತ್ತಿನಲ್ಲಿ ನನಗೆ ಮೆಸೇಜ್‌ಗಳು ಬರಲು ಆರಂಭಿಸಿದ್ದವು. ನಾನು ಹಾಗೂ ಗೌತಮ್ ಜೊತೆಯಲ್ಲಿರುವ ಚಿತ್ರ ಇಂಟರ್ನೆಟ್‌ನಲ್ಲಿತ್ತು. ನಾವಿಬ್ಬರೂ ಒಂದಾಗಿದ್ದೇವೆ ಎನ್ನುವ ಅರ್ಥದಲ್ಲಿ ಪೋಸ್ಟ್ ಹಾಕಲಾಗಿತ್ತು. ಆದರೆ, ಇದು ಸಂಪೂರ್ಣ ಸುಳ್ಳು ಎಂದು ತಿಳಿಸಿದ್ದಾರೆ.
ಆತ ನೀಡಿದ್ದ ಆಹ್ವಾನವು, ಕಾಫಿಗಾಗಿ ಅಥವಾ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಆಗಿರಲಿಲ್ಲ ಎಂದು ತಿಳಿಸಿದ್ದಾರರೆ. ಅದರ ಹಿಂದಿನ "ನೈಜ ಉದ್ದೇಶ" ವನ್ನು ವಿಜಯಪಥ್ ಸಿಂಘಾನಿಯಾ ಅನುಮಾನಿಸಿದ್ದಾರೆ "10 ವರ್ಷಗಳಲ್ಲಿ ನಾನು ಮೊದಲ ಬಾರಿಗೆ ಜೆಕೆ ಹೌಸ್ ಅನ್ನು ಪ್ರವೇಶಿಸಿದ್ದೇನೆ. ಇನ್ನೆಂದೂ ನಾನು ಅತನ ಮನೆಗೆ ಕಾಲಿಡೋದಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.
ಆಸ್ತಿಗಾಗಿ 9ವರ್ಷ ಅಪ್ಪನನ್ನೇ ಬೀದಿಲಿಟ್ಟ ರೇಮಂಡ್ ಮುಖ್ಯಸ್ಥನಿಗೆ ಹೆಂಡತಿ ಬಿಟ್ಟು ಹೋದ ಮೇಲೆ ತಂದೆ ಬೇಕಾಯ್ತು!
85 ವರ್ಷದ ವಿಜಯಪಥ್ ಸಿಂಘಾನಿಯಾ, 2015ರಲ್ಲಿ ಇಡೀ ರೇಮಂಡ್ ಗ್ರೂಪ್‌ನ ಎಲ್ಲಾ ವ್ಯವಹಾರಗಳನ್ನು ಮಗ ಗೌತಮ್ ಸಿಂಘಾನಿಯಾ ಅವರ ಹೆಗಲಿಗೆ ಹಾಕಿ ಚೇರ್ಮನ್ ಸ್ಥಾನದಿಂದ ಕೆಳಗಿಳಿದಿದ್ದರು. ಇದಾದ ಬಳಿಕ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಇನ್ನಷ್ಟು ಹೆಚ್ಚಾಯಿತು. 2018ರಲ್ಲಿ ಗೌತಮ್ ಸಿಂಘಾನಿಯಾ ತನ್ನ ತಂದೆಯನ್ನೇ ರೇಮಂಡ್‌ನ ಚೇರ್ಮನ್ ಎಮಿರಿಟಸ್ ಸ್ಥಾನದಿಂದ ಹೊರಹಾಕಿದ್ದರು.
ಅಂಬಾನಿಗಿಂತಲೂ ಶ್ರೀಮಂತ ರೇಮಂಡ್ಸ್ ಒಡೆಯನನ್ನು ಹೊರದಬ್ಬಿದ ಮಗ, ಬಾಡಿಗೆ ಮನೆಯಲ್ಲಿದ್ದು ಈಗ ವಿಚ್ಛೇದಿತ ಸೊಸೆ ಪರ