ಅಂಬಾನಿಗಿಂತಲೂ ಶ್ರೀಮಂತ ರೇಮಂಡ್ಸ್ ಒಡೆಯನನ್ನು ಹೊರದಬ್ಬಿದ ಮಗ, ಬಾಡಿಗೆ ಮನೆಯಲ್ಲಿದ್ದು ಈಗ ವಿಚ್ಛೇದಿತ ಸೊಸೆ ಪರ
ಈ ಹಿಂದೆ ಅಂಬಾನಿಗಿಂತಲೂ ಶ್ರೀಮಂತ ವ್ಯಕ್ತಿಯಾಗಿದ್ದ ರೇಮಂಡ್ಸ್ ಮಾಜಿ ಅಧ್ಯಕ್ಷ ಇಂದು ಬೀದಿಗೆ ಬಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಗ ಅಂದು ಆಸ್ತಿಗಾಗಿ ಹೊರದಬ್ಬಿ ಇಂದು ಮಗನೇ ಸಂಕಷ್ಟದಲ್ಲಿದ್ದು ಸೊಸೆಯಿಂದ ದೂರವಾಗಿದ್ದಾನೆ. ಈಗ ಮಾವ ಸೊಸೆ ಪರ ನಿಂತಿದ್ದಾರೆ. ಯಾರು ಈ ವ್ಯಕ್ತಿ ಇಲ್ಲಿದೆ ಇಂಟ್ರಸ್ಟಿಂಗ್ ವಿಚಾರ. ತಾನೊಂದು ಬಗೆದರೆ ದೈವವೂ ಇನ್ನೊಂದು ಬಗೆಯುತ್ತದೆ ಎಂಬುದಕ್ಕೆ ಈ ಕಥೆ ಉತ್ತಮ ಉದಾಹರಣೆಯಾಗಿದೆ.
ಈ ಹಿಂದೆ ಅಂಬಾನಿಗಿಂತಲೂ ಶ್ರೀಮಂತ ವ್ಯಕ್ತಿಯಾಗಿದ್ದ ರೇಮಂಡ್ಸ್ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ಇಂದು ಬೀದಿಗೆ ಬಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಗ ಅಂದು ಆಸ್ತಿಗಾಗಿ ಹೊರದಬ್ಬಿ ಇಂದು ಮಗನೇ ಸಂಕಷ್ಟದಲ್ಲಿದ್ದು ಸೊಸೆಯಿಂದ ದೂರವಾಗಿದ್ದಾನೆ. ಈಗ ಮಾವ ಸೊಸೆ ಪರ ನಿಂತಿದ್ದಾರೆ.
ರೇಮಂಡ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಪತ್ನಿ ನವಾಜ್ ಮೋದಿಯೊಂದಿಗೆ ವಿಚ್ಛೇದನವನ್ನು ಘೋಷಿಸಿದ ನಂತರ ಅವರ ರೇಮಂಡ್ಸ್ ಕಂಪೆನಿ ಮತ್ತು ಸಿಂಘಾನಿಯಾ ಕುಟುಂಬವು ಸುದ್ದಿಯಲ್ಲಿದೆ.
ವಿಚ್ಛೇದನದ ಇತ್ಯರ್ಥದ ಭಾಗವಾಗಿ, ಮಾಜಿ ಪತ್ನಿ ನವಾಜ್ ಮೋದಿ ಅವರು ಸಿಂಘಾನಿಯಾ ಅವರ 11,660 ಕೋಟಿ ರೂಪಾಯಿ ಆಸ್ತಿಯಲ್ಲಿ 75 ಪ್ರತಿಶತಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದೀಗ, ಗೌತಮ್ ಸಿಂಘಾನಿಯಾ ಅವರ ತಂದೆ ಮತ್ತು ರೇಮಂಡ್‌ನ ಮಾಜಿ ಎಂಡಿ ವಿಜಯಪತ್ ಸಿಂಘಾನಿಯಾ ಅವರ ಸ್ವಂತ ಮಗ ಗೌತಮ್ ಬದಲಿಗೆ ಸೊಸೆ ನವಾಜ್ ಬೆಂಬಲಕ್ಕೆ ಬಂದಿದ್ದಾರೆ.
85 ವರ್ಷದ ವಯಸ್ಸಿನ ವಿಜಯಪತ್ ಸಿಂಘಾನಿಯಾ ಸಂದರ್ಶನವೊಂದರಲ್ಲಿ, "ನನಗೆ ತಿಳಿದಿರುವಂತೆ ಹಿಂದೂ ವಿವಾಹ ಕಾಯಿದೆಯಡಿಯಲ್ಲಿ, 50% ರಷ್ಟು ಗಂಡನ ಆಸ್ತಿಯು ಸ್ವಯಂಚಾಲಿತವಾಗಿ ವಿಚ್ಚೇಧಿತ ಪತ್ನಿಗೆ ಹೋಗುತ್ತದೆ. ತುಂಬಾ ಸರಳವಾಗಿ ವಕೀಲರು ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಅದನ್ನು ಪಡೆಯಬಹುದು.
ಅವಳ್ಯಾಕೆ 75% ಗಾಗಿ ಹೋರಾಡುತ್ತಿದ್ದಾಳೆ? ಗೌತಮ್ ಎಂದಿಗೂ ಬಿಟ್ಟುಕೊಡುವುದಿಲ್ಲ ಏಕೆಂದರೆ ಅವನ ಧ್ಯೇಯವೆಂದರೆ ಎಲ್ಲರನ್ನೂ ಖರೀದಿಸುವುದು ಮತ್ತು ಎಲ್ಲವನ್ನೂ ಖರೀದಿಸುವುದು. ಅದನ್ನೇ ಅವನು ನನ್ನೊಂದಿಗೂ ಮಾಡಿದನು. ಅವನೊಂದಿಗೆ ಹೋರಾಡಲು ನನ್ನ ಬಳಿ ಅಂತಹ ಹಣವಿರಲಿಲ್ಲ. ಈ ರೀತಿಯ ಜಗಳದಿಂದ ಅವಳು ಹೆಚ್ಚು ಪಡೆಯುತ್ತಾಳೆ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.
ವಿಜಯಪತ್ ಸಿಂಘಾನಿಯಾ, ಒಂದು ಕಾಲದಲ್ಲಿ ಇಡೀ ರೇಮಂಡ್ ಸಾಮ್ರಾಜ್ಯವನ್ನು ನಡೆಸುತ್ತಿದ್ದರು. ಆ ಸಮಯದಲ್ಲಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಆದರೆ ಇಂದು ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
ವಿಜಯ್‌ಪತ್ ಆಗಲೇ ರೇಮಂಡ್ ಗ್ರೂಪ್‌ನ ಮಾಲೀಕರಾಗಿದ್ದಾಗ ಅಂಬಾನಿ ತುಂಬಾ ಚಿಕ್ಕವರಾಗಿದ್ದ ಕಾರಣ ಅವರು ಒಮ್ಮೆ ಮುಕೇಶ್ ಅಂಬಾನಿಗಿಂತಲೂ ಶ್ರೀಮಂತರಾಗಿದ್ದರು. ಆದರೆ, ಅವರ ಮಗ ಅವರನ್ನು ಮನೆಯಿಂದ ಹೊರಹಾಕಿದಾಗ ಅವರ ಭವಿಷ್ಯವು ಬೀದಿಗೆ ಬಂತು. ವಿಜಯಪತ್ ಸಿಂಘಾನಿಯಾ ಜೀವನ ನಿರ್ವಹಣೆಗೆ ಹರಸಾಹಸ ಪಡುತ್ತಿದ್ದು, ಸಭ್ಯ ಜೀವನ ನಡೆಸಲು ಪರದಾಡುತ್ತಿದ್ದಾರೆ.
ಸಿಂಘಾನಿಯಾ ತನ್ನ ಎಲ್ಲಾ ಕಂಪನಿಯ ಷೇರುಗಳನ್ನು ಗೌತಮ್ ಹೆಸರಿನಲ್ಲಿ ಬರೆದಾಗ ಮಗಾ ಉಲ್ಟಾ ಹೊಡೆದು ಈ ಸಮಸ್ಯೆ ಪ್ರಾರಂಭವಾಯಿತು ಮತ್ತು ಅಂದಿನಿಂದ ಅವರ ಸಂಬಂಧ ಸರಿಯಿಲ್ಲ. ಒಂದು ಜಮೀನಿನ ವಿಷಯಕ್ಕಾಗಿ ದ್ವೇಷ ಬೆಳೆದು, ಗೌತಮ್ ಅವರು ವಿಜಯಪತ್ ಸಿಂಘಾನಿಯಾ ಅವರನ್ನು ಸ್ವಂತ ಮನೆಯಿಂದ ಹೊರದಬ್ಬಿದರು. ಈಗ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾರೆ.