Vegetable Price Hike: ಕಳೆದ ವಾರಕ್ಕಿಂತಲೂ ತರಕಾರಿ ದರ ಗಣನೀಯ ಏರಿಕೆ, 200ರ ಗಡಿ ದಾಟುತ್ತಾ ಟೊಮ್ಯಾಟೊ!
ತರಕಾರಿಗಳ ದರದಲ್ಲಿ ಗಣನೀಯ ಏರಿಕೆ ಕಂಡಿದೆ. ಕಳೆದ ವಾರಕ್ಕಿಂತ ಕೆಜಿ ಗೆ 20ರಿಂದ 30 ದರ ಹೆಚ್ಚಳವಾಗಿದೆ. ಇದರ ನಡುವೆ ಮಾಂಸದ ದರವೂ ಏರಿಕೆ ಕಂಡಿದೆ.
ಬೆಂಗಳೂರು (ಜು.3): ಜೇಜು ಗಟ್ಟಿ ಇದ್ರೆ ಮಾತ್ರ ತರಕಾರಿ ಕೊಳ್ಳೋದಕ್ಕೆ ಆಲೋಚನೆ ಮಾಡಿ ಯಾಕಂದ್ರೆ ತರಕಾರಿಗಳ ದರದಲ್ಲಿ ಗಣನೀಯ ಏರಿಕೆ ಕಂಡಿದೆ. ಕಳೆದ ವಾರಕ್ಕಿಂತ ಕೆಜಿ ಗೆ 20ರಿಂದ 30 ದರ ಹೆಚ್ಚಳವಾಗಿದೆ. ಟಮೋಟೋ ರೇಟ್ ಕೇಳಿದ್ರೆ ಸದ್ಯಕ್ಕೆ ಟಮೋಟೋಬಾತ್ ಮಾಡೋದೇ ಬೇಡಪ್ಪ ಅನ್ನೋ ಸ್ಥಿತಿಗೆ ಬಂದಿದೆ. ಟೊಮೆಟೋ ದರ 100 ರ ಗಡಿ ದಾಟಿದೆ. ಇದೆಲ್ಲದರ ನಡುವೆ ಟಮೋಟೋ ರೇಟ್ ಗೆ ಟಕರ್ ಕೊಟ್ತಿದೆ ಬೀನ್ಸ್ ಬೆಲೆ. ರೇಸ್ ಗೆ ಬಿದ್ದವರಂತೆ ಬೆಲೆ ಏರಿಕೆಯಲ್ಲಿ ತಾ ಮುಂದು ನೀ ಮುಂದು ಎಂದು ಏರಿಕೆ ಕಾಣ್ತಿದೆ ಬೀನ್ಸ್ ಹಾಗೂ ಕ್ಯಾರೇಟ್ ರೇಟ್ ದರ. ಬೀನ್ಸ್ ಕೆಜಿ ಗೆ 120 ರೂಪಾಯಿ ಬೆಲೆ ಏರಿಸಿಕೊಂಡಿದೆ. 10 ದಿನದಿಂದ ಏರಿಕೆಯ ಕ್ರಮದಲ್ಲೇ ಸಾಗುತ್ತಿದೆ ಟಮೋಟೋ ಹಾಗೂ ತರಕಾರಿ ಬೆಲೆ. ಇದರ ನಡುವೆ ಮಾಂಸ ದರವೂ ಏರಿಕೆ ಕಂಡಿದೆ. ಮೀನುಗಾರಿಕೆಗೆ ನಿಷೇಧ ಇರುವ ಹಿನ್ನೆಲೆ ಇತರ ಮಾಂಸಗಳ ಬೆಲೆ ಗಣನೀಯ ಏರಿಕೆಯಾಗಿದೆ.
15 ದಿನದಲ್ಲಿ ಟೊಮೆಟೋ ಬೆಲೆ ಇಳಿಕೆ; ತೊಗರಿ ಬೇಳೆ ಬೆಲೆ ಕಡಿಮೆ ಮಾಡಲು ಹೆಚ್ಚು ಆಮದು: ಕೇಂದ್ರ ಸರ್ಕಾರ
ಗಗನಕ್ಕೇರಿದ ತರಕಾರಿ ಇಂದಿನ ಬೆಲೆಗಳು ಇಂತಿದೆ:
ಕೆಜಿ ಟಮೋಟೋ 110 ರೂಪಾಯಿ
ನಾಟಿ ಟಮೋಟೋ ಇಂದಿನ ದರ 110 ರೂಪಾಯಿ
ಜಾಮೂನ್ ಟಮೋಟೋ 105 ರೂಪಾಯಿ
ಬೀನ್ಸ್ - 120 ರೂಪಾಯಿ
ಬೀನ್ಸ್ ಕಾಳು-110 ರೂಪಾಯಿ
ಕ್ಯಾರೇಟ್ - 110 ರೂಪಾಯಿ
ಹಸಿ ಮೆಣಸಿನ ಕಾಯಿಬ- 170 ರೂಪಾಯಿ
ಹಸಿರು ಬಟಾಣಿ - 190 ರೂಪಾಯಿ
ಹಾಗಲ ಕಾಯಿ- 98 ರೂಪಾಯಿ
ಬದನೆಕಾಯಿ- 85 ರೂಪಾಯಿ
ಚಪ್ಪರದ ಅವರರ - 86 ರೂಪಾಯಿ
ಗೋರೆಕಾಯಿ - 80 ರೂಪಾಯಿ
ದಪ್ಪ ಮೆಣಸಿನಕಾಯಿ - 84 ರೂಪಾಯಿ
ಗೆಡ್ಡೆ ಕೋಸು - 90 ರೂಪಾಯಿ
ಸೋರೆ ಕಾಯಿ- 75 ರೂಪಾಯಿ
Gold Silver Price Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮತ್ತೆ ಇಳಿಕೆಯಾಯ್ತು ಬಂಗಾರದ ಬೆಲೆ
ಮಳೆ ಕಡಿಮೆಯಾಗಿ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲದ ಕಾರಣ ಉತ್ತರ ಪ್ರದೇಶ, ಮಹಾರಾಷ್ಟ್ರ ಒಳಗೊಂಡು ಹೊರರಾಜ್ಯದಿಂದ ಟೊಮ್ಯಾಟೋ, ಕ್ಯಾರೆಟ್ ಮೊದಲಾದ ಕಾಯಿಪಲ್ಯೆ ಖರೀದಿಸಲಾಗುತ್ತಿದೆ. ಹೀಗಾಗಿ ದರದಲ್ಲಿ ಏರಿಕೆಯಾಗಿದೆ.
ಮಾಂಸ ದರವೂ ಏರಿಕೆ: ಮಳೆಗಾಲವಾದ್ದರಿಂದ ಸಮುದ್ರದ ಅಲೆಗಳ ಅಬ್ಬರ ಜೋರಾಗಿರುತ್ತದೆ. ಜತೆಗೆ ಮೀನುಗಳ ಸಂತಾನೋತ್ಪತ್ತಿ ಸಂದರ್ಭವಾದ್ದರಿಂದ ಜೂನ್‌ನಿಂದ ಎರಡು ತಿಂಗಳು ಯಾಂತ್ರೀಕೃತ ಮೀನುಗಾರಿಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಮೀನುಗಳ ಲಭ್ಯತೆ ಕಡಿಮೆಯಾಗಿದ್ದು, ಚಿಕನ್, ಮಟನ್ ದರ ಕೂಡ ಏರಿಕೆಯಾಗಿದೆ. ಚಿಕನ್ ಕೆಜಿಗೆ 300, ಮಟನ್ .800 ಗೆ ತಲುಪಿದೆ.
200 ರ ಗಡಿ ದಾಟುತ್ತಾ ಟೊಮ್ಯಾಟೊ ಬೆಲೆ!
ಕೊಪ್ಪಳ ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ವ್ಯಾಪಾರದಲ್ಲಿಯೇ ಬಾರಿ ಬೆಲೆ ಇದೆ. ಒಂದು ಬಾಕ್ಸ್ ಟಮ್ಯಾಟೊಗೆ ಬರೋಬ್ಬರಿ 2900 ಬೆಲೆ ಇದೆ. ಕನಕಗಿರಿ ಮಾರುಕಟ್ಟೆಯಲ್ಲಿ ಒಂದು ಬಾಕ್ಸ್ ಟೊಮ್ಯಾಟೊ 2900 ರೂಪಾಯಿ ತಲುಪಿದೆ. 15 ಕೆಜಿ ಬ್ಯಾಕ್ಸ್ ಟೊಮ್ಯಾಟೊ ಗೆ ಬರೋಬ್ಬರಿ 2900 ರೂ ಬೆಲೆ ಕೊಟ್ಟು ದಲ್ಲಾಳಿಗಳು ಖರೀದಿ ಮಾಡ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿಯೇ ಗಗನಕ್ಕೆರುತ್ತಿರೋ ಟೊಮ್ಯಾಟೊ ಬೆಲೆ ಕೇಳಿ ಗ್ರಾಹಕರು ಶಾಕ್ ಆಗಿದ್ದಾರೆ. ಈ ಹಿಂದೆ ಬಾಕ್ಸ್ 2300 ರೂ ಬೆಲೆ ಇದ್ದ ಟೊಮ್ಯಾಟೊ 2900 ರೂ.ಗೆ ಜಿಗಿತ ಕಂಡಿದೆ.