15 ದಿನದಲ್ಲಿ ಟೊಮೆಟೋ ಬೆಲೆ ಇಳಿಕೆ; ತೊಗರಿ ಬೇಳೆ ಬೆಲೆ ಕಡಿಮೆ ಮಾಡಲು ಹೆಚ್ಚು ಆಮದು: ಕೇಂದ್ರ ಸರ್ಕಾರ
ಟೊಮೆಟೋ ಉತ್ಪಾದನೆ ಹೆಚ್ಚಳಗೊಂಡಿದ್ದು, ಮುಂದಿನ 15 ದಿನಗಳಲ್ಲಿ ಬೆಲೆ ಇಳಿಕೆಯಾಗಲು ಆರಂಭವಾಗುತ್ತದೆ. 1 ತಿಂಗಳಲ್ಲಿ ಬೆಲೆ ಸ್ಥಿಮಿತಕ್ಕೆ ಬರಲಿದೆ ಎಂದು ಅವರು ಹೇಳಿದ್ದಾರೆ.
ನವದೆಹಲಿ (ಜುಲೈ 1, 2023): ಭಾರಿ ಬೆಲೆ ಏರಿಕೆ ಕಂಡಿರುವ ಟೊಮೆಟೋ ಮತ್ತು ತೊಗರಿ ಬೇಳೆ ಬೆಲೆಯನ್ನು ಇಳಿಕೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಟೊಮೆಟೋ ಉತ್ಪಾದನೆ ಹಾಗೂ ಪೂರೈಕೆ ಹೆಚ್ಚಳಗೊಂಡಿದ್ದು, 15 ದಿನದಲ್ಲಿ ಬೆಲೆ ಇಳಿಕೆ ಆರಂಭವಾಗಲಿದೆ. ಹೆಚ್ಚುವರಿಯಾಗಿ 12 ಲಕ್ಷ ಟನ್ ತೊಗರಿ ಬೇಳೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಗ್ರಾಹಕ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಹೇಳಿದ್ದಾರೆ.
ಪ್ರತಿ ವರ್ಷವೂ ಈ ಅವಧಿಯಲ್ಲಿ ಟೊಮೆಟೋ ಬೆಲೆ ಏರಿಕೆಯಾಗುತ್ತದೆ. ಕೃಷಿ ಋತುಮಾನವನ್ನು ಅಲವಂಬಿಸಿರುವುದರಿಂದ, ಟೊಮೆಟೋವನ್ನು ಹೆಚ್ಚಿನ ಕಾಲ ಸಂಗ್ರಹಿಸಲು ಸಾಧ್ಯವಿಲ್ಲದ ಕಾರಣ ಈ ಬದಲಾವಣೆ ಅನಿವಾರ್ಯವಾಗಿದೆ. ಇದೀಗ ಟೊಮೆಟೋ ಉತ್ಪಾದನೆ ಹೆಚ್ಚಳಗೊಂಡಿದ್ದು, ಮುಂದಿನ 15 ದಿನಗಳಲ್ಲಿ ಬೆಲೆ ಇಳಿಕೆಯಾಗಲು ಆರಂಭವಾಗುತ್ತದೆ. 1 ತಿಂಗಳಲ್ಲಿ ಬೆಲೆ ಸ್ಥಿಮಿತಕ್ಕೆ ಬರಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ದೇಶದ ಬಹುತೇಕ ರಾಜ್ಯಗಳಲ್ಲಿ ಟೊಮೆಟೋ 100 ರೂ.ಗೆ ಜಂಪ್: ಬೆಲೆ ಏರಿಕೆ ತಡೆಯಲು ಸರ್ಕಾರದಿಂದ ‘ಟೊಮೆಟೋ ಗ್ರಾಂಡ್ ಚಾಲೆಂಜ್’
ಅದೇ ರೀತಿ ಕೇಜಿಗೆ 180 ರೂ. ತಲುಪಿರುವ ತೊಗರಿ ಬೇಳೆ ಬೆಲೆಯನ್ನು ಇಳಿಕೆ ಮಾಡಲು ಕಳೆದ ವರ್ಷಕ್ಕಿಂತ ಹೆಚ್ಚುವರಿಯಾಗಿ ಶೇ. 35ರಷ್ಟು ತೊಗರಿ ಬೇಳೆ ಆಮದು ಮಾಡಿಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ. ಪ್ರತಿವರ್ಷ ನಾವು ಸುಮಾರು 45 ಟನ್‌ನಷ್ಟು ತೊಗರಿ ಬೇಳೆಯನ್ನು ಬಳಕೆ ಮಾಡುತ್ತೇವೆ. ಈ ಬಾರಿ ಹೆಚ್ಚುವರಿಯಾಗಿ 12 ಟನ್ ಬೇಳೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಪೂರೈಕೆ ಹೆಚ್ಚಳವಾಗುವುದರಿಂದ ಬೆಲೆ ಇಳಿಕೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಬೆಲೆ ಏರಿಕೆ ತಡೆಯಲು ಸರ್ಕಾರದಿಂದ ‘ಟೊಮೆಟೋ ಗ್ರಾಂಡ್ ಚಾಲೆಂಜ್’
ಟೊಮೆಟೋ ಬೆಲೆಯಲ್ಲಿ ದಿಢೀರ್ ಏರಿಕೆ ಮತ್ತು ಇಳಿಕೆಯನ್ನು ತಡೆಗಟ್ಟಲು ವಿನೂತನ ಯೋಜನೆಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ‘ಟೊಮೆಟೋ ಗ್ರೇಟ್ ಚಾಲೆಂಜ್’ ಅನ್ನು ಸರ್ಕಾರ ಆರಂಭಿಸಲಿದೆ ಎಂದು ಕೇಂದ್ರ ಗ್ರಾಹಕ ಸಚಿವಾಲಯ ಮಂಗಳವಾರ ಹೇಳಿದೆ. ಈ ಯೋಜನೆಯ ಮೂಲಕ ಟೊಮೆಟೋ ಉತ್ಪಾದನೆಯ ಹೆಚ್ಚಳ, ಸಂಸ್ಕರಣೆ ಮತ್ತು ಸಂಗ್ರಹಣೆಗೆ ಸೇರಿದಂತೆ ಹಲವು ಅಭಿಪ್ರಾಯಗಳನ್ನು ಜನರಿಂದ ಸಂಗ್ರಹ ಮಾಡಲಾಗುತ್ತದೆ.
ಇದನ್ನೂ ಓದಿ: Good News: ಬೇಳೆ ಕಾಳುಗಳ ಬೆಲೆ ತಗ್ಗಿಸಲು ಮುಂದಾದ ಕೇಂದ್ರ ಸರ್ಕಾರ
‘ನಾವು ಈ ವಾರ ಟೊಮೆಟೋ ಗ್ರಾಂಡ್ ಚಾಲೆಂಜ್ ಅನ್ನು ಆರಂಭ ಮಾಡಲಿದ್ದೇವೆ. ಈ ಮೂಲಕ ನಾವು ಸೃಜನಾತ್ಮಕ ಅಭಿಪ್ರಾಯಗಳು, ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಇದನ್ನೇ ನಾವು ಈರುಳ್ಳಿ ಬೆಲೆ ಹೆಚ್ಚಳವಾದಾಗಲೂ ಕೈಗೊಂಡಿದ್ದೆವು. ಈ ವೇಳೆ ನಾವು 600ಕ್ಕೂ ಹೆಚ್ಚು ಅಭಿಪ್ರಾಯಗಳನ್ನು ಪಡೆದುಕೊಂಡಿದ್ದು, ಅದರಲ್ಲಿ 13 ಅಭಿಪ್ರಾಯಗಳನ್ನು ತಜ್ಞರೊಂದಿಗೆ ಚರ್ಚಿಸುತ್ತಿದೇವೆ ಎಂದು ಗ್ರಾಹಕ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಗಗನಕ್ಕೇರಿದ ತರಕಾರಿ ಬೆಲೆ ಏರಿಕೆ, ಗ್ರಾಹಕರ ಜೇಬಿಗೆ ಕತ್ತರಿ! ಯಾವುದಕ್ಕೆ ಎಷ್ಟು ಬೆಲೆ