Asianet Suvarna News Asianet Suvarna News

ಸೂಪರ್ ಮಾರ್ಕೆಟ್ ನಲ್ಲಿ ಕ್ರೆಡಿಟ್ ಕಾರ್ಡ್ ಬಳಸುವಾಗ ಮೈಯೆಲ್ಲ ಕಣ್ಣಾಗಿರಲಿ; ಸ್ವಲ್ಪ ಯಾಮಾರಿದ್ರೂ ಬೀಳುತ್ತೆ ಬರೆ!

ಇಂದು ಬಹುತೇಕರು ಎಲ್ಲ ಕಡೆ ಖರೀದಿ ಬಳಿಕ ಕ್ರೆಡಿಟ್ ಕಾರ್ಡ್ ಮೂಲಕವೇ ಪಾವತಿ ಮಾಡುತ್ತಾರೆ. ಅದರಲ್ಲೂ ಸೂಪರ್ ಮಾರ್ಕೆಟ್ ಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕವೇ ಹೆಚ್ಚಾಗಿ ಪಾವತಿ ಮಾಡಲಾಗುತ್ತದೆ. ಆದರೆ, ಸೂಪರ್ ಮಾರುಕಟ್ಟೆಯಲ್ಲಿ ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರ ವಹಿಸೋದು ಅಗತ್ಯ. ಇಲ್ಲವಾದ್ರೆ ಖಾತೆಗೆ ಕನ್ನ ಬೀಳೋದು ಗ್ಯಾರಂಟಿ. 
 

Using credit cards in supermarkets Keep an out for these warning signs anu
Author
First Published Aug 12, 2023, 6:09 PM IST

Business Desk:ಇಂದು ಕ್ರೆಡಿಟ್ ಕಾರ್ಡ್ ಬಹುತೇಕರಿಗೆ ಅತ್ಯಂತ ಮಹತ್ವದ ಹಣಕಾಸಿನ ಸಾಧನವಾಗಿದೆ. ನಗದುರಹಿತವಾಗಿ ವ್ಯವಹಾರ ನಡೆಸಲು ಇದು ಅನುಕೂಲ ಕಲ್ಪಿಸಿದೆ. ಕಿಸೆಯಲ್ಲಿ ಕಾಸಿಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಇದೆ ಎಂಬ ಧೈರ್ಯ ಬಯಸಿದ್ದನ್ನು ಖರೀದಿಸುವ ಸಾಮರ್ಥ್ಯ ನೀಡಿದೆ. ಅಲ್ಲದೆ, ಎಲ್ಲಿಗೆ ಹೋಗಬೇಕಾದರೂ ನಗದನ್ನು ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆಯನ್ನು ಇದು ತಪ್ಪಿಸಿದೆ. ಹೀಗಾಗಿ ದಿನಸಿ ಸಾಮಾನುಗಳಿಂದ ಹಿಡಿದು ಪ್ರತಿಯೊಂದರ ಖರೀದಿಗೂ ಕ್ರೆಡಿಟ್ ಕಾರ್ಡ್ ಬಳಸೋರ ಸಂಖ್ಯೆ ಹೆಚ್ಚಿದೆ. ಸಣ್ಣ ಪುಟ್ಟ ಕಿರಾಣಿ ಅಂಗಡಿಗಳಿಂದ ಹಿಡಿದು ದೊಡ್ಡ ಸೂಪರ್ ಮಾರ್ಕೆಟ್ ಗಳ ತನಕ ಇಂದು ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿ ಹಣ ಪಾವತಿಸುವ ವ್ಯವಸ್ಥೆ ಇದೆ. ಅದರಲ್ಲೂ ತಿಂಗಳಿಗೂ ಅಥವಾ ವಾರಕ್ಕೊಮ್ಮೆಯೂ ಸೂಪರ್ ಮಾರ್ಕೆಟ್ ಗೆ ತೆರಳಿ ಮನೆಗೆ ಅಗತ್ಯವಾದ ಸಾಮಗ್ರಿಗಳನ್ನು ಖರೀದಿಸಿದ ಬಳಿಕ ಬಹುತೇಕರು ಕ್ರೆಡಿಟ್ ಕಾರ್ಡ್ ಮೂಲಕವೇ ಪಾವತಿ ಮಾಡುತ್ತಾರೆ. ಇಂಥ ಸಂದರ್ಭಗಳಲ್ಲಿ ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸೋದು ಅಗತ್ಯ. 

ಸೂಪರ್ ಮಾರ್ಕೆಟ್ ನಲ್ಲಿ ಕ್ರೆಡಿಟ್ ಕಾರ್ಡ್ ಬಳಕೆಗೆ ಇಲ್ಲಿದೆ ಟಿಪ್ಸ್:
1.ನಿಮ್ಮ ಕ್ರೆಡಿಟ್ ಕಾರ್ಡ್ ಸುರಕ್ಷಿತವಾಗಿಟ್ಟುಕೊಳ್ಳಿ: ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಪರ್ಸ್ ನಲ್ಲಿ ಜೋಪಾನವಾಗಿಟ್ಟುಕೊಳ್ಳಿ. ಸೂಪರ್ ಮಾರ್ಕೆಟ್ ನಲ್ಲಿ ಬಿಲ್ ಪಾವತಿಸಿದ ಬಳಿಕ ಕೂಡ ಮರಳಿ ನಿಮ್ಮ ಪರ್ಸ್ ನಲ್ಲಿಡಿ. ಇತ್ತೀಚಿನ ದಿನಗಳಲ್ಲಿ ಕಾಂಟ್ಯಾಕ್ಟ್ ಲೆಸ್ ಕ್ರೆಡಿಟ್ ಕಾರ್ಡ್ ಅಥವಾ 'wifi' ಚಿಹ್ನೆ ಹೊಂದಿರುವ ಕಾರ್ಡ್ ಗಳನ್ನು ಬಹುತೇಕರು ಬಳಸುತ್ತಾರೆ. ಈ ಕಾರ್ಡ್ ಗಳನ್ನು ಕಾರ್ಡ್ ರೀಡರ್ ಬಳಿ ಹಿಡಿದರೆ ಸಾಕು ಪಾವತಿಯಾಗುತ್ತದೆ. ಸವೈಪ್ ಮಾಡೋದು ಅಥವಾ ಡಿಪ್ ಮಾಡುವ ಅಗತ್ಯವಿಲ್ಲ. ಹಾಗೆಯೇ ಪಿನ್ ನಮೂದಿಸಬೇಕಾಗಿಯೂ ಇಲ್ಲ. ಹೀಗಾಗಿ ಇಂಥ ಕ್ರೆಡಿಟ್ ಕಾರ್ಡ್ ಅನ್ನು ಆದಷ್ಟು ಜೋಪಾನ ಮಾಡೋದು ಅಗತ್ಯ.

ಕ್ರೆಡಿಟ್ ಕಾರ್ಡ್ ಬಳಸಿ ಗೂಗಲ್ ಪೇ ಮೂಲಕ ಪಾವತಿ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

2.ವೈಯಕ್ತಿಕ ಮಾಹಿತಿಗಳನ್ನು ಸುರಕ್ಷಿತವಾಗಿಡಿ: ವಹಿವಾಟಿನ ಸಮಯದಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ನೀಡಿ, ಪಿನ್ ನಮೂದಿಸಿ. ಒಂದು ವೇಳೆ ನಿಮ್ಮ ಬಳಿ  ಕಾಂಟ್ಯಾಕ್ಟ್ ಲೆಸ್ ಕ್ರೆಡಿಟ್ ಕಾರ್ಡ್ಇದ್ರೆ ಪಿನ್ ಕೂಡ ಅಗತ್ಯವಿಲ್ಲ. ಈ ಸಮಯದಲ್ಲಿ ಉಳಿದ ಯಾವುದೇ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.

3. ಸ್ಕಿಮ್ಮಿಂಗ್ ಸಾಧನಗಳ ಬಗ್ಗೆ ಎಚ್ಚರ: ಸೂಪರ್ ಮಾರುಕಟ್ಟೆಗಳಲ್ಲಿ ಕ್ರೆಡಿಟ್ ಕಾರ್ಡ್ ಸ್ಕಿಮ್ಮಿಂಗ್ ಸಾಧನಗಳನ್ನು ಬಳಸುತ್ತಿರುವ ಬಗ್ಗೆ ವರದಿಗಳಾಗಿವೆ. ಈ ಸಾಧನಗಳು ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಪಿಒಎಸ್ ಟರ್ಮಿನಲ್ ಅಥವಾ ಎಟಿಎಂಗಳಲ್ಲಿ ಸ್ವೈಪ್ ಮಾಡಿದ ತಕ್ಷಣ ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸುತ್ತವೆ. ಹೀಗಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸುವ ಮುನ್ನ ಇಂಥ ಸಾಧನಗಳಿವೆಯೇ ಎಂಬುದನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ.

4.ಪಾವತಿ ಸ್ವೀಕೃತಿಗಳನ್ನು ಎಸೆಯುವಾಗ ಎಚ್ಚರ: ಸೂಪರ್ ಮಾರುಕಟ್ಟೆಗಳಲ್ಲಿ ಬಿಲ್ ಪಾವತಿಸಿದ ಬಳಿಕ ನಿಮಗೆ ನೀಡುವ ಸ್ವೀಕೃತಿ (receipt) ಎಸೆಯುವ ಮುನ್ನ ಎಚ್ಚರ ವಹಿಸಿ. ಇದರಲ್ಲಿ ನಿಮ್ಮ ಪಾವತಿ ವಿಧಾನಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿಯಿರುತ್ತದೆ. ಕೆಲವೊಮ್ಮೆ ಶಾಪಿಂಗ್ ಸ್ವೀಕೃತಿಗಳು ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಕೂಡ ಒಳಗೊಂಡಿರುತ್ತವೆ. ಕೆಲವೊಮ್ಮೆ ಇವುಗಳಲ್ಲಿ ನಿಮ್ಮ ಕಾರ್ಡ್ ಸಂಖ್ಯೆ ಪೂರ್ಣ ಪ್ರಮಾಣದಲ್ಲಿ ನಮೂದಿಸಲ್ಪಟ್ಟಿರುತ್ತದೆ. ಹೀಗಾಗಿ ವಂಚನೆ ತಪ್ಪಿಸಲು ಈ ಸ್ವೀಕೃತಿಗಳನ್ನು ಎಸೆಯುವ ಮುನ್ನ ಹರಿಯೋದು ಉತ್ತಮ.

Indian Bank: ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಕ್ರೆಡಿಟ್ ಕಾರ್ಡ್ ತೂಗುಗತ್ತಿ

5.ಮುಕ್ತ ಅಥವಾ ಸಾರ್ವಜನಿಕ ವೈಫೈ ಬಳಸಬೇಡಿ: ಮುಕ್ತ ಅಥವಾ ಸಾರ್ವಜನಿಕ ವೈಫೈ ನೆಟ್ ವರ್ಕ್ ಗಳು ಅಸುರಕ್ಷಿತ. ಹೀಗಾಗಿ ವೈಫೈ ನೆಟ್ ವರ್ಕ್ ಗಳ ಲ್ಲಿ ಕ್ರೆಡಿಟ್ ಕಾರ್ಡ್ ವಹಿವಾಟುಗಳನ್ನು ನಡೆಸಬಾರದು. ಅದರ ಬದಲಿಗೆ ನಿಮ್ಮ ಸೆಲ್ಯೂಲರ್ ಡೇಟಾ ಅಥವಾ ನಂಬಿಕಾರ್ಹ ಖಾಸಗಿ ನೆಟ್ ವರ್ಕ್ ಬಳಸಿ.

Follow Us:
Download App:
  • android
  • ios