Asianet Suvarna News Asianet Suvarna News

ಆಸ್ಪತ್ರೆ, ಪಾರ್ಟಿ ಹಾಲ್‌ಗಳಲ್ಲಿ ಕ್ಯಾಶ್‌ ಬಳಸಿದ್ದೀರಾ..? ನಿಮ್ಮ ಮೇಲೂ ಕಣ್ಣಿಡುತ್ತೆ ಐಟಿ ಇಲಾಖೆ..!

ಆಸ್ಪತ್ರೆ, ಪಾರ್ಟಿ ಹಾಲ್‌ ಮುಂತಾದ ಕಡೆ ಹೆಚ್ಚು ನಗದು ಹಣ ಬಳಸಿದರೆ ಅಂತಹವರ ಮೇಲೂ ಐಟಿ ಇಲಾಖೆ ಕಣ್ಣಿಡಲು ನಿರ್ಧಾರ ಮಾಡಿದೆ. 

used cash in hospitals party halls income tax department will target you ash
Author
Bangalore, First Published Aug 20, 2022, 9:24 PM IST

ನಗದು (Cash) ವಹಿವಾಟುಗಳನ್ನು ಪತ್ತೆಹಚ್ಚುವ ದೃಷ್ಟಿಯಿಂದ ಆದಾಯ ತೆರಿಗೆ ಇಲಾಖೆಯು ಆಸ್ಪತ್ರೆಗಳು (Hospitals) (ಹಲವಾರು ರೋಗಿಗಳಿಂದ ಪ್ಯಾನ್ (Pan Card) ಸಂಗ್ರಹಿಸದ ಕಾರಣ), ಔತಣಕೂಟ ಹಾಲ್‌ಗಳು (Banquet Halls) ಮತ್ತು ಕೆಲವು ವೃತ್ತಿಪರರ (Professionals) ಮೇಲೆ ಕಣ್ಣಿಟ್ಟಿದೆ. ಇದಕ್ಕೆ ಕಾರಣ ಇತ್ತೀಚೆಗೆ ಉಕ್ಕಿನ ಬಾರ್‌ ತಯಾರಕರು ಸೇರಿ ಉದ್ಯಮಿಗಳ ಮೇಲೆ ಮುಂಬೈ, ಔರಂಗಾಬಾದ್, ನಾಸಿಕ್ ಮತ್ತು ಜಲ್ನಾದಲ್ಲಿ ಐಟಿ, ಇಡಿ ದಾಳಿ ನಡೆದಾಗ ಅಪಾರ ಪ್ರಮಾಣದ ನಗದು ಮತ್ತು ಆಭರಣಗಳು ಸಂಗ್ರಹವಾಗಿತ್ತು. ಹಾಗೂ, ಆಳ್ವಾರ್‌, ಕೋಟಾ ಮತ್ತು ಜಲ್ನಾದಂತಹ ಸಣ್ಣ ಪಟ್ಟಣಗಳಲ್ಲಿ ದೊಡ್ಡ ಪ್ರಮಾಣದ ನಗದು ವಸೂಲಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ದೇಶದ ಹಲವಾರು ಸಣ್ಣ ಪಟ್ಟಣಗಳಲ್ಲಿ, ಐಟಿ ಇಲಾಖೆಯು (Income Tax Department) ಕಡಿಮೆ ಹೆಜ್ಜೆ ಗುರುತನ್ನು ಹೊಂದಿದ್ದು, ಇದು ತಪ್ಪಿಸಿಕೊಳ್ಳುವವರಿಗೆ ಧೈರ್ಯ ತುಂಬಿದೆ. ಹಾಗೂ, ಅವರು ತೆರಿಗೆದಾರರ ಕಣ್ಗಾವಲನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ನಂಬುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆ, ಪ್ರಸಕ್ತ ಹಣಕಾಸು ವರ್ಷದಲ್ಲಿ, ನಗದು ವಹಿವಾಟುಗಳಿಗೆ ವಿಶೇಷ ಒತ್ತು ನೀಡಲಾಗಿದೆ ಮತ್ತು ಇನ್ನೂ ನಗದು ರೂಪದಲ್ಲಿ ನಡೆಯುತ್ತಿರುವ ಮತ್ತು ಸ್ಕ್ಯಾನರ್ ಅಡಿಯಲ್ಲಿರುವ ವಹಿವಾಟುಗಳ ಬಗ್ಗೆ ಕಣ್ಗಾವಲಿಡಲಾಗಿದೆ ಎಂದು ಅವರು ಹೇಳಿದ್ದಾರೆ. 

ಮಹಾರಾಷ್ಟ್ರದಲ್ಲಿ ಐಟಿ ರೇಡ್‌: 56 ಕೋಟಿ ರೂ. ನಗದು, 32 ಕೆಜಿ ಬಂಗಾರ ಸೇರಿ 390 ಕೋಟಿ ರೂ. ಮೌಲ್ಯದ ಆಸ್ತಿ ಸೀಜ್‌

ಆಸ್ಪತ್ರೆಗಳ ವಿಚಾರದಲ್ಲಿ, ಪ್ಯಾನ್‌ ನಂಬರ್‌ ಸಂಗ್ರಹದ ಬಗ್ಗೆ ಕಾನೂನು ಕಡ್ಡಾಯಗೊಳಿಸಿದ್ದರೂ ಪ್ಯಾನ್ ಅನ್ನು ಸಂಗ್ರಹಿಸದ ಹಲವಾರು ನಿದರ್ಶನಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆ ಐಟಿ ಇಲಾಖೆಯು ಅದಕ್ಕಾಗಿ ಒತ್ತಾಯಿಸುತ್ತಿದ್ದು ಮತ್ತು ಇದನ್ನು ತಪ್ಪುವ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲು ಯೋಜಿಸುತ್ತಿದೆ. ಈ ಹಿನ್ನೆಲೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಮೊತ್ತವನ್ನು ಪಾವತಿಸಿದ ರೋಗಿಗಳನ್ನು ಪತ್ತೆಹಚ್ಚಲು ಆರೋಗ್ಯ ಸೇವಾ ಪೂರೈಕೆದಾರರ ಬಳಿ ಲಭ್ಯವಿರುವ ಡೇಟಾವನ್ನು ಬಳಸುತ್ತಿದೆ. ಆದರೆ, ಆಸ್ಪತ್ರೆಗಳು ಮಾತ್ರ, ರೋಗಿಗಳು ಆಗಾಗ್ಗೆ ತುರ್ತು ವಿಭಾಗಕ್ಕೆ ಬರುವುದರಿಂದ ಪ್ಯಾನ್ ಸಂಗ್ರಹಿಸಲು ಯಾವಾಗಲೂ ಸಾಧ್ಯವಿಲ್ಲ ಎಂದು ವಾದ ಮಾಡುತ್ತಿವೆ.
ಅದೇ ರೀತಿ, ಇತ್ತೀಚಿನ ತಿಂಗಳುಗಳಲ್ಲಿ ಕೆಲವು ಬ್ಯಾಂಕ್ವೆಟ್ ಹಾಲ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಅವರು ಕೆಲ ವಹಿವಾಟುಗಳನ್ನು ತಮ್ಮ ಲೆಕ್ಕದ ಪುಸ್ತಕಗಳಲ್ಲಿ ಬರೆದಿಡುವುದಿಲ್ಲ ಎಂದೂ ಐಟಿ ಇಲಾಖೆ ಹೇಳಿದೆ. ಇನ್ನೊಂದೆಡೆ, ಹೈ-ಎಂಡ್ ವಾಚ್‌ಗಳಂತಹ ಕೆಲವು ವಿಭಾಗಗಳಲ್ಲಿ, ಚಿಲ್ಲರೆ ವ್ಯಾಪಾರಿಗಳು ಖರೀದಿದಾರರ ವಿವರವಾದ ಪಟ್ಟಿಯನ್ನು ಮತ್ತು ಅವರ ವಿವರಗಳನ್ನು ನಿರ್ವಹಿಸುತ್ತಾರೆ ಎಂದು ತೆರಿಗೆ ಇಲಾಖೆ ಕಂಡುಕೊಂಡಿದೆ.

ಈ ಮಧ್ಯೆ, ಕೆಲವು ವೃತ್ತಿಪರರು ಸಹ ಐಟಿ ಇಲಾಖೆಯ ಕಣ್ಗಾವಲಿನಲ್ಲಿದ್ದು, ಅವರ ವಿರುದ್ಧ  ಪೂರಕ ಪುರಾವೆಗಳಿರುದ್ದರೆ ತೆರಿಗೆ ಅಧಿಕಾರಿಗಳು ಅವರ ವಿಚಾರಣೆ ಅಥವಾ ರೇಡ್‌ ಮಾಡುತ್ತಿದ್ದಾರೆ ಎಂದೂ ಅಧಿಕಾರಿಗಳು ಹೇಳಿದ್ದಾರೆ. ಉದಾಹರಣೆಗೆ, ಇತ್ತೀಚಿನ ತಿಂಗಳುಗಳಲ್ಲಿ ಕೆಲವು ವಾಸ್ತುಶಿಲ್ಪಿಗಳ ವಿರುದ್ಧ ಕೆಲವು ಕ್ರಮಗಳು ನಡೆದಿದ್ದು, ಆದರೆ ಎಲ್ಲಾ ವೃತ್ತಿಪರರನ್ನು ತನಿಖೆ ನಡೆಸಲಾಗುತ್ತದೆ ಎಂದರ್ಥವಲ್ಲ ಎಂದೂ ಐಟಿ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. 

IT Raids Micro Labs: ಡೋಲೊ 650 ಮಾತ್ರೆ ತಯಾರಕ ಸಂಸ್ಥೆ ಮೇಲೆ IT ದಾಳಿ

ಒಟ್ಟಾರೆ,  ತೆರಿಗೆ ಇಲಾಖೆಯು ತನ್ನ ಬಳಿ ವಿವರವಾದ ಡೇಟಾ ಲಭ್ಯವಿದೆ ಎಂದು ಹೇಳಿಕೊಂಡಿದ್ದು, ಅದನ್ನು ಪರಿಶೀಲನೆ ಮಾಡುತ್ತಿದೆ. ಉದಾಹರಣೆಗೆ, ವಾರ್ಷಿಕ ಮಾಹಿತಿ ಹೇಳಿಕೆಯಿಂದ ಹೆಚ್ಚಿನ ಪ್ರಮಾಣದ ಮಾಹಿತಿ ಸಿಗುತ್ತಿದೆ. ಅದನ್ನು ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ಆ ಡೇಟಾ ರಿಟರ್ನ್ಸ್‌ನಲ್ಲಿ ಪ್ರತಿಬಿಂಬಿಸದಿದ್ದಲ್ಲಿ ಅದನ್ನು ವಿಶ್ಲೇಷಣೆ ಮಾಡಲಾಗುತ್ತಿದೆ. ಅಲ್ಲದೆ, ಜಿಎಸ್‌ಟಿಯೊಂದಿಗೆ ಲಿಂಕ್‌ ಮಾಡಿದರೆ ಆದಾಯ ತೆರಿಗೆದಾರರು ಶುದ್ಧವಾಗಲು ಅಥವಾ ಕಾನೂನು ಕ್ರಮವನ್ನು ಎದುರಿಸಲು ಕಾರಣವಾಗುತ್ತದೆ ಎಂದೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿಕೊಂಡಿದ್ದಾರೆ. 

Follow Us:
Download App:
  • android
  • ios