Asianet Suvarna News Asianet Suvarna News

ಮಹಾರಾಷ್ಟ್ರದಲ್ಲಿ ಐಟಿ ರೇಡ್‌: 56 ಕೋಟಿ ರೂ. ನಗದು, 32 ಕೆಜಿ ಬಂಗಾರ ಸೇರಿ 390 ಕೋಟಿ ರೂ. ಮೌಲ್ಯದ ಆಸ್ತಿ ಸೀಜ್‌

ಐಟಿ ಇಲಾಖೆ ಮಹಾರಾಷ್ಟ್ರದಲ್ಲಿ ಉದ್ಯಮಿಗಳಿಗೆ ಸೇರಿದ ಹಲವು ಪ್ರದೇಶದಲ್ಲಿ ಐಟಿ ರೇಡ್‌ ನಡೆಸಿದ್ದು, ಈವರೆಗೆ 56 ಕೋಟಿ ರೂ. ನಗದು ಹಾಗೂ 14 ಕೋಟಿ ರೂ. ಮೌಲ್ಯದ ಒಡವೆಯನ್ನು ಸೀಜ್‌ ಮಾಡಲಾಗಿದೆ ಎಂದು ವರದಿಯಾಗಿದೆ. 

income tax department seizes 56 crore worth cash and 32 kg gold during it raid in maharashtra jalna ash
Author
Bangalore, First Published Aug 11, 2022, 1:13 PM IST

ಆದಾಯ ತೆರಿಗೆ ಇಲಾಖೆ (Income Tax Department) ಭರ್ಜರಿ ಬೇಟೆಯನ್ನೇ ನಡೆಸಿದೆ. ಮಹಾರಾಷ್ಟ್ರದ ಜಲ್ನಾದಲ್ಲಿ (Jalna) ಉದ್ಯಮಿ ಗುಂಪುಗಳಿಗೆ ಸೇರಿದ ಪ್ರದೇಶಗಳಲ್ಲಿ ಕಂತೆ ಕಂತೆ ನೋಟು, ಕೆಜಿಗಟ್ಟಲೆ ಬಂಗಾರ, ಬೇನಾಮಿ ಆಸ್ತಿಯನ್ನು(Benami Property)  ಪತ್ತೆಹಚ್ಚಿದ್ದಾರೆ. ಒಟ್ಟಾರೆ ಎಲ್ಲ ಆಸ್ತಿಯನ್ನು ಐಟಿ ಇಲಾಖೆ ಸೀಜ್‌ ಮಾಡಿದ್ದು, ಉದ್ಯಮಿ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದೆ. 

ಮಹಾರಾಷ್ಟ್ರ ಮೂಲದ ಉದ್ಯಮಿಗಳ ಗುಂಪಿನ ಮೇಲೆ ಐಟಿ ಇಲಾಖೆ ರೇಡ್‌ (IT raid) ಮಾಡಿದ್ದು, ಈ ವೇಳೆ 56 ಕೋಟಿ ರೂ. ನಗದು ಹಾಗೂ 14 ಕೋಟಿ ರೂ. ಮೌಲ್ಯದ ಒಡವೆಯನ್ನು (Jewellery) ಸೀಜ್‌ ಮಾಡಲಾಗಿದೆ ಎಂದು ಗುರುವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ, ಒಟ್ಟಾರೆ 390 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಐಟಿ ಇಲಾಖೆ ಸೀಜ್‌ ಮಾಡಿದೆ ಎಂದೂ ವರದಿಯಾಗಿದೆ. ಈ ಸಂಬಂಧ ಐಎಎನ್‌ಎಸ್‌ ಸುದ್ದಿ ಮಾಧ್ಯಮ ವರದಿ ಮಾಡಿದ್ದು, ಕಂತೆ ಕಂತೆ ನೋಟು ಎಣಿಸುತ್ತಿರುವ ವಿಡಿಯೋವನ್ನೂ ಸಹ ಅವರು ಹಂಚಿಕೊಂಡಿದ್ದಾರೆ. 

IT Raids Micro Labs: ಡೋಲೊ 650 ಮಾತ್ರೆ ತಯಾರಕ ಸಂಸ್ಥೆ ಮೇಲೆ IT ದಾಳಿ


 ಈ ಉದ್ಯಮಿಗಳು ಸ್ಟೀಲ್‌ (Steel) ಹಾಗೂ ರಿಯಲ್‌ ಎಸ್ಟೇಟ್‌ (Real Estate) ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು ಎಂದೂ ತಿಳಿದುಬಂದಿದೆ. ಕಳೆದ ವಾರ ಆರಂಭವಾದ ಈ ರೇಡ್‌ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದಿದೆ. ಆ ಉದ್ಯಮಿಗಳು ತೆರಿಗೆ ವಂಚಿಸಿದ್ದಾರೆ ಎಂಬ ಸುಳಿವಿನ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದೂ ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.

Hero MotoCorp: ಹೀರೋ ಕಂಪನಿ ₹1000 ಕೋಟಿ ಬೋಗಸ್‌ ಲೆಕ್ಕ: ಐಟಿHero MotoCorp: ಹೀರೋ ಕಂಪನಿ ₹1000 ಕೋಟಿ ಬೋಗಸ್‌ ಲೆಕ್ಕ: ಐಟಿ 

ಈವರೆಗೆ 56 ಕೋಟಿ ರೂ. ನಗದು, 32 ಕೆಜಿ ಚಿನ್ನ, ಮುತ್ತು, ವಜ್ರ ಹಾಗೂ ಆಸ್ತಿ ಪತ್ರ, ಬೇನಾಮಿ ಆಸ್ತಿಯನ್ನು ಸೀಜ್‌ ಮಾಡಲಾಗಿದೆ ಎಂದು ಐಟಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗಸ್ಟ್‌ 1 ರಿಂದ 8ರವರೆಗೆ ಐಟಿ ಇಲಾಖೆ ರೇಡ್‌ ಮಾಡಿದ ವೇಳೆ ಈ ಎಲ್ಲ ಆಸ್ತಿ, ಕಂತೆ ಕಂತೆ ನೋಟು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಇನ್ನು, ಕಂತೆ ಕಂತೆ ನೋಟು ಎಣಿಸಿ ಅಧಿಕಾರಿಗಳು ಸುಸ್ತಾಗಿದ್ದು, ವಶಪಡಿಸಿಕೊಂಡ ನೋಟುಗಳನ್ನು ಎಣಿಸಲು ಅವರಿಗೆ 13 ಗಂಟೆ ಬೇಕಾಯಿತು ಎಂದೂ ಹೇಳಲಾಗಿದೆ. ಅಲ್ಲದೆ, ದಾಖಲೆಗಳು, ಡಿಜಿಟಲ್‌ ಡೇಟಾವನ್ನು ಸಹ ಐಟಿ ರೇಡ್‌ ವೇಳೆ ಸೀಜ್‌ ಮಾಡಲಾಗಿದೆ ಎಂದೂ ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ. 

Follow Us:
Download App:
  • android
  • ios