Asianet Suvarna News Asianet Suvarna News

ಕರ್ನಾಟಕದಲ್ಲಿ ಅಮೆರಿಕದ ಬ್ಯಾಟರಿ ಕಂಪನಿ ಉತ್ಪಾದನಾ ಘಟಕ ಸ್ಥಾಪನೆ, 8,000 ಕೋಟಿ ರೂ ಹೂಡಿಕೆ!

ಕರ್ನಾಟಕದಲ್ಲಿ ಮತ್ತೊಂದು ಅತೀ ದೊಡ್ಡ ಕಂಪನಿ ಆರಂಭಗೊಳ್ಳುತ್ತಿದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹಾಗೂ ಮಾರಾಟದಲ್ಲೂ ಗಣನೀಯ ಏರಿಕೆಯಾಗಲಿದೆ. ಕಾರಣ ಐಬಿಸಿ ಕಂಪನಿ ಕರ್ನಾಟಕದಲ್ಲಿ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸುತ್ತಿದೆ. ಇದಕ್ಕಾಗಿ 8,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದು, ಕನಿಷ್ಠ ಭಾರಿ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ.
 

US Based IBC company sign Mou with Karnataka Govt to set up rs 8000 crore lithium ion battery manufacture unit ckm
Author
First Published Aug 3, 2023, 6:12 PM IST

ಬೆಂಗಳೂರು(ಆ.03) ಅಂತಾರಾಷ್ಟ್ರೀಯ ಬ್ಯಾಟರಿ ಕಂಪನಿ(IBC) ಕರ್ನಾಟಕದಲ್ಲಿ ಅತೀ ದೊಡ್ಡ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸುತ್ತಿದೆ. ಇದಕ್ಕಾಗಿ ಐಬಿಸಿ ಕಂಪನಿ ಬರೋಬ್ಬರಿ 8,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಪರಿಣಾಮ ಕರ್ನಾಟಕದಲ್ಲಿನ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಹಾಗೂ ಮಾರಾಟದಲ್ಲಿ ವೇಗ ಪಡೆದುಕೊಳ್ಳಲಿದೆ. ಎಲೆಕ್ಟ್ರಿಕ್ ವಾಹನದಲ್ಲಿ ಬಳಕೆ ಮಾಡುವ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದನೆ ರಾಜ್ಯವನ್ನು ಎಲೆಕ್ಟ್ರಾನಿಕ್ ಹಬ್ ಮಾಡಲಿದೆ.

ಸಚಿವ ಎಂಬಿ ಪಾಟೀಲ್ ಹಾಗೂ ಐಬಿಸಿ ಕಂಪನಿ ಅಧಿಕಾರಿಗಳು ಮಹತ್ವದ MoU ಸಹಿ ಮಾಡಿದ್ದಾರೆ. ಮರುಬಳಕೆ ಲಿಥಿಯಂ ಐಯಾನ್ ಬ್ಯಾಟರಿ ಘಟಕಕ್ಕೆ ಬೆಂಗಳೂರಿನ ಹೊರವಲಯದಲ್ಲಿ 100 ಎಕರೆ ಭೂಮಿ ನೀಡಲಾಗುತ್ತದೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ. ಜೂನ್ ತಿಂಗಳಿನಿಂದ ಈ ಕುರಿತು ಹಲವು ಸುತ್ತಿನ ಮಾತುಕತೆಗಳು ನಡೆದಿದೆ. ಇದೀಗ ಅಂತಿಮ ರೂಪ ಸಿಕ್ಕಿದೆ ಎಂದಿದ್ದಾರೆ.

 

ಕರ್ನಾಟಕದಲ್ಲಿ ಐಫೋನ್ ಉತ್ಪಾದನಾ ಘಟಕ, ಫಾಕ್ಸ್‌ಕಾನ್‌ಗೆ 100 ಏಕರೆ ಭೂಮಿ ನೀಡಿದ ಸರ್ಕಾರ!

ಇದು ಕರ್ನಾಟಕದ ಎರಡನೇ ಲಿಥಿಯಂ ಐಯಾನ್ ಬ್ಯಾಟರಿಯಾಗಿದೆ.ರಾಜ್ಯದಲ್ಲಿ ಉದ್ಯೋಗ ಅವಕಾಶನ್ನೂ ಸೃಷ್ಟಿಸಲಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹಾಗೂ ಮಾರಾಟದಲ್ಲೂ ಈ ಘಟಕ ಸಹಕಾರಿಯಾಗಿದೆ. ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ವಾಹನ ಲಭ್ಯವಾಗುವಂತೆ ಮಾಡಲು ಬ್ಯಾಟರಿ ಘಟಕ ನೆರವಾಗಲಿದೆ. 

ಇತ್ತೀಚೆಗೆ ಫಾಕ್ಸ್‌ಕಾನ್ ಕಂಪನಿ ಮತ್ತೆರೆಡು ಯೋಜನೆಗಳಿಗೆ ಸಹಿ ಹಾಕಿದೆ. ಉದ್ದೇಶಿತ ಎರಡು ಯೋಜನೆಗಳಿಗೆ 5000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಈ ಕುರಿತ ಒಪ್ಪಂದಕ್ಕೂ ಸಹಿ ಹಾಕಿದೆ.  ಈ ಯೋಜನೆಗಳಿಂದ 13,000 ಉದ್ಯೋಗಾವಕಾಶಗಳನ್ನು ನಿರೀಕ್ಷಿಸಲಾಗಿದೆ. ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಫೋನ್‌ ಎನ್‌ಕ್ಲೋಸರ್‌ ಉತ್ಪಾದನಾ ಘಟಕ ಸ್ಥಾಪನೆ ಹಾಗೂ ಸೆಮಿಕಾನ್‌ ಉಪಕರಣಗಳ ಯೋಜನೆ ಜಾರಿ ಸಂಬಂಧ ತಮ್ಮನ್ನೂ ಒಳಗೊಂಡು ಕರ್ನಾಟಕ ಸರ್ಕಾರದ ವಿವಿಧ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಫಾಕ್ಸ್‌ಕಾನ್‌ ಅಧ್ಯಕ್ಷ ಯಂಗ್‌ ಲಿಯು ಉದ್ದೇಶಿತ ಹೂಡಿಕೆ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಗಿದೆ ಎಂದು ಎಂಬಿ ಪಾಟೀಲ್ ಹೇಳಿದ್ದರು.   

 

ಹೂಡಿಕೆಗೆ ಭಾರತವೇ ನಂ.1 ಪ್ರಶಸ್ತ ಸ್ಥಳ: ಚೀನಾವನ್ನು ಹಿಂದಿಕ್ಕಿದ ಭಾರತ

ಈ ಎರಡೂ ಒಪ್ಪಂದಗಳು, ಈ ಮೊದಲು ಮಾಡಿಕೊಂಡಿದ್ದ 14 ಸಾವಿರ ಕೋಟಿ ಮೊತ್ತದ ಆ್ಯಪಲ್‌ ಫೋನ್‌ ತಯಾರಿಕಾ ಘಟಕಕ್ಕೆ ಹೊರತಾದವಾಗಿವೆ. ಇದಕ್ಕೂ ದೊಡ್ಡಬಳ್ಳಾಪುರ ಸಮೀಪ ಭೂಮಿ ನೀಡಲಾಗುತ್ತದೆ. ಫಾಕ್ಸ್‌ಕಾನ್‌ ಮತ್ತು ಕರ್ನಾಟಕ ಸರ್ಕಾರದ ನಡುವಿನ ಈ ಒಪ್ಪಂದವು ತಂತ್ರಜ್ಞಾನದ ಪ್ರಗತಿ ಮತ್ತು ರಾಜ್ಯದ ಒಟ್ಟಾರೆ ಸಾಮಾಜಿಕ- ಆರ್ಥಿಕ ಬೆಳವಣಿಗೆಯಲ್ಲಿ ಗಮನಾರ್ಹ ಬದಲಾವಣೆ ತರಲಿದೆ. ಮುಖ್ಯವಾಗಿ ಸಾವಿರಾರು ಯುವಕರಿಗೆ ಉದ್ಯೋಗ ದೊರೆಯುತ್ತದೆ ಎಂದು ಹೇಳಿದರು. 

Follow Us:
Download App:
  • android
  • ios