ಚೀನಾವನ್ನು ಹಿಂದಿಕ್ಕಿರುವ ಭಾರತ, ಸಾವರಿನ್‌ ವೆಲ್ತ್‌ ಫಂಡ್‌ಗಳ (ಸರ್ಕಾರಿ ಬಾಂಡ್‌) ಹೂಡಿಕೆಗೆ ವಿಶ್ವದಲ್ಲೇ ಅತ್ಯಂತ ಪ್ರಶಸ್ತ ಸ್ಥಳ ಎನ್ನಿಸಿಕೊಂಡಿದೆ ಎಂದು ‘ಇನ್ವೆಸ್ಕೋ ಗ್ಲೋಬಲ್‌ ಸಾವರಿನ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ ವರದಿ ಹೇಳಿದೆ.

ನವದೆಹಲಿ: ಚೀನಾವನ್ನು ಹಿಂದಿಕ್ಕಿರುವ ಭಾರತ, ಸಾವರಿನ್‌ ವೆಲ್ತ್‌ ಫಂಡ್‌ಗಳ (ಸರ್ಕಾರಿ ಬಾಂಡ್‌) ಹೂಡಿಕೆಗೆ ವಿಶ್ವದಲ್ಲೇ ಅತ್ಯಂತ ಪ್ರಶಸ್ತ ಸ್ಥಳ ಎನ್ನಿಸಿಕೊಂಡಿದೆ ಎಂದು ‘ಇನ್ವೆಸ್ಕೋ ಗ್ಲೋಬಲ್‌ ಸಾವರಿನ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ ವರದಿ ಹೇಳಿದೆ. ಭಾರತದಲ್ಲಿ ರಾಜಕೀಯ ಸ್ಥಿರತೆ ಇದೆ. ಅತ್ಯಂತ ತ್ವರಿತ ವಿತ್ತೀಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಹೀಗಾಗಿ ಭಾರತವು ಹೂಡಿಕೆದಾರರ ಅಚ್ಚುಮೆಚ್ಚಿನ ತಾಣವಾಗಿದೆ ಎಂದು ಅದು ಬಣ್ಣಿಸಿದೆ.

142 ಪ್ರಮಖ ಬಂಡವಾಳ ಹೂಡಿಕೆ ಅಧಿಕಾರಿಗಳು ಹಾಗೂ 57 ಸೆಂಟ್ರಲ್‌ ಬ್ಯಾಂಕ್‌ಗಳ ಮತ್ತು 85 ಸಾವರಿನ್‌ ವೆಲ್ತ್‌ ಫಂಡ್‌ಗಳ ವಿವಿಧ ವಿತ್ತೀಯ ತಜ್ಞರನ್ನು ಸಂದರ್ಶಿಸಿ ಅಧ್ಯಯನ ನಡೆಸಲಾಗಿದೆ. ಅಧ್ಯಯನಕ್ಕೆ ಒಳಪಟ್ಟಸಂಸ್ಥೆಗಳು 21 ಲಕ್ಷ ಕೋಟಿ ಡಾಲರ್‌ ಮೌಲ್ಯದ ಆಸ್ತಿ ನಿರ್ವಹಣೆ ಮಾಡುತ್ತವೆ. ಭಾರತ ಇಂದು ರಾಜಕೀಯ ಸ್ಥಿರತೆ ಹೊಂದಿದ್ದು ವ್ಯಾಪಾರಕ್ಕೆ ಪ್ರಶಸ್ತ ಸ್ಥಳವಾಗಿದೆ. ದೇಶ-ವಿದೇಶಗಳ ಹೂಡಿಕೆದಾರರಿಗೆ ಇಂದು ಭಾರತದಲ್ಲಿ ಹೂಡಿಕೆ ಸ್ನೆಹಿ ವಾತಾವರಣವಿದೆ. ಉದ್ಭವಿಸುತ್ತಿರುವ ಆಕರ್ಷಕ ಮಾರುಕಟ್ಟೆಗಳಲ್ಲಿ ಇಂದು ಚೀನಾವನ್ನು ಭಾರತ ಹಿಂದಿಕ್ಕಿದೆ. ಮೆಕ್ಸಿಕೋ ಹಾಗೂ ಬ್ರೆಜಿಲ್‌ನಂತೆ ಹೂಡಿಕೆಗಳಿಂದ ಭಾರತಕ್ಕೂ ಉತ್ತಮ ಲಾಭವಾಗುತ್ತಿದೆ. ಕಾರ್ಪೋರೆಟ್‌ ಹಾಗೂ ಸರ್ಕಾರಿ ಹೂಡಿಕೆಗಳಿಂದ ಹೂಡಿಕೆದಾರರಿಗೆ ಉತ್ತಮ ಲಾಭವಾಗುತ್ತಿದೆ ಎಂದಿದೆ.

ಮೋದಿ ದೂರದೃಷ್ಟಿ ಫಲ ಭಾರತದ ಆರ್ಥಿಕತೆಯಲ್ಲಿ ಕಾಣುತ್ತಿದೆ: ರಷ್ಯಾ ಅಧ್ಯಕ್ಷ

ದೇಶದ ಆರ್ಥಿಕ ಬೆಳವಣಿಗೆ ದರ ವಿಶ್ವದಲ್ಲೇ ಉತ್ತಮ: ಭಾರತದ ಆರ್ಥಿಕತೆಗೆ ಮತ್ತೆ ವಿಶ್ವಬ್ಯಾಂಕ್‌ ಶಹಭಾಷ್