ಸಂಸತ್ ಸಮಿತಿ ಮುಂದೆ ಹಾಜರಾದ ಆರ್‌ಬಿಐ ಗರ್ವನರ್! ನೋಟು ನಿಷೇಧ, ಎನ್‌ಪಿಎ ಕುರಿತಂತೆ ವಿವರಣೆ ನೀಡಿದ ಉರ್ಜಿತ್ ಪಟೇಲ್! ಕೇಂದ್ರ-ಆರ್‌ಬಿಐ ತಿಕ್ಕಾಟದ ಬಳಿಕ ಸಂಸತ್ ಸಮಿತಿ ಮುಂದೆ ಉರ್ಜಿತ್! ಡಾ. ಸಿಂಗ್ ಸದಸ್ಯ , ವೀರಪ್ಪ ಮೊಯ್ಲಿ ಅಧ್ಯಕ್ಷರಾಗಿರುವ ಸಮಿತಿ
ನವದೆಹಲಿ(ನ.27): ನೋಟು ನಿಷೇಧ, ಎನ್‌ಪಿಎ ಕುರಿತಂತೆ ವಿವರಣೆ ನೀಡಲು ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್, ಸಂಸತ್ ಸಮಿತಿ ಎದುರು ಹಾಜರಾಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನ.12 ರಂದೇ ಉರ್ಜಿತ್ ಪಟೇಲ್ ಸಂಸತ್ ಸಮಿತಿ ಎದುರು ಹಾಜರಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರ-ಆರ್‌ಬಿಐ ನೊಂದಿಗಿನ ತಿಕ್ಕಾಟದ ನಂತರ ಇಂದು ಸಂಸತ್ ಸಮಿತಿ ಎದುರು ಅವರು ಹಾಜರಾಗಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಈ ಸಮಿತಿಯ ಸದಸ್ಯರಾಗಿದ್ದು, ಮಾಜಿ ಕೇಂದ್ರ ಸಚಿವ ವೀರಪ್ಪ ಮೋಯ್ಲಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.
