‘ಕನ್ನಡಪ್ರಭ’, ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನಿಂದ ‘ಇಂಡ್‌ ವೇಲ್ಸ್‌’ ಕಂಪನಿಯ ಸಹಯೋಗದಲ್ಲಿ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಆಯೋಜಿಸಿದ್ದ ಎರಡು ದಿನದ ‘ಕನೆಕ್ಟ್ ಕರ್ನಾಟಕ’ ಎ ಮೆಗಾ ಮ್ಯಾನ್ಯುಫ್ಯಾಕ್ಚರರ್ಸ್‌ ಆ್ಯಂಡ್‌ ಫ್ರಾಂಚೈಸಿ ಎಕ್ಸ್‌ಪೋ’ಗೆ ಭಾನುವಾರ ವಿದ್ಯುಕ್ತ ತೆರೆ ಬಿದ್ದಿದ್ದು ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರು (ನ.14): ‘ಕನ್ನಡಪ್ರಭ’, ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನಿಂದ ‘ಇಂಡ್‌ ವೇಲ್ಸ್‌’ ಕಂಪನಿಯ ಸಹಯೋಗದಲ್ಲಿ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಆಯೋಜಿಸಿದ್ದ ಎರಡು ದಿನದ ‘ಕನೆಕ್ಟ್ ಕರ್ನಾಟಕ’ ಎ ಮೆಗಾ ಮ್ಯಾನ್ಯುಫ್ಯಾಕ್ಚರರ್ಸ್‌ ಆ್ಯಂಡ್‌ ಫ್ರಾಂಚೈಸಿ ಎಕ್ಸ್‌ಪೋ’ಗೆ ಭಾನುವಾರ ವಿದ್ಯುಕ್ತ ತೆರೆ ಬಿದ್ದಿದ್ದು ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನೂರಾರು ಪ್ರತಿಷ್ಠಿತ ಕಂಪನಿಗಳ ಫ್ರಾಂಚೈಸಿ, ಡೀಲರ್‌ಶಿಪ್‌ ಪಡೆಯಲು ಆಸಕ್ತರಿಗೆ ಅನುಕೂಲವಾಗುವಂತೆ ಉತ್ಪಾದಕರು ಮತ್ತು ಮಾರಾಟಗಾರರನ್ನು ಒಂದೇ ವೇದಿಕೆಯಡಿ ತರಲು ನ.12 ಮತ್ತು 13 ರಂದು ಆಯೋಜಿಸಿದ್ದ ‘ಕನೆಕ್ಟ್ ಕರ್ನಾಟಕ’ ಎಕ್ಸ್‌ಪೋಗೆ ಎರಡು ದಿನವೂ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲದೆ ನೆರೆಯ ಸೀಮಾಂಧ್ರ, ತೆಲಂಗಾಣ, ತಮಿಳುನಾಡು, ಕೇರಳದಿಂದಲೂ ವಿತರಕರು ಆಗಮಿಸಿದ್ದು ವಿಶೇಷವಾಗಿತ್ತು.

Bengaluru: ಕನೆಕ್ಟ್ ಕರ್ನಾಟಕ ಎಕ್ಸ್‌ಪೋಗೆ ಚಾಲನೆ ನೀಡಿದ ಸಚಿವ ಅಶ್ವತ್ಥ್‌

‘ಅತಿಯಾಸ್‌’ ಎಲೆಕ್ಟ್ರಿಕ್‌ ಬೈಕ್‌ನವರು ಐವರು ಡಿಸ್ಟ್ರಿಬ್ಯೂಟರ್‌ ನೇಮಿಸಿದರೆ, ಎನ್‌.ಕೆ.ವಲ್ಡ್‌ರ್‍ನಿಂದ ಸೀಮಾಂಧ್ರ, ತೆಲಂಗಾಣ ಸೇರಿದಂತೆ ಆರು ಡಿಸ್ಟ್ರಿಬ್ಯೂಟರ್‌ಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಯಿತು. ಪ್ರತಿ ಮಳಿಗೆಯಲ್ಲೂ ನೂರಾರು ಜನರು ಉತ್ಪನ್ನಗಳ ಬಗ್ಗೆ ವಿವರಣೆ ಪಡೆದಿದ್ದಾರೆ. ಸಾರ್ವಜನಿಕರಿಂದ ಪೂರಕ ಸ್ಪಂದನೆ ವ್ಯಕ್ತವಾಗಿದ್ದು ಮುಂದಿನ ಎಕ್ಸ್‌ಪೋ ಎಲ್ಲಿ ನಡೆಯುವುದೋ ಎಂದು ಕಾತರದಿಂದ ನೋಡುತ್ತಿದ್ದೇವೆ ಎಂದು ತಯಾರಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶನಿವಾರ ಬೆಳಿಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಎಕ್ಸ್‌ಪೋಗೆ ಚಾಲನೆ ನೀಡಿದ್ದರು. ಇಂಡಸ್‌ ತ್ರಿಪಲ್‌ ಫೈವ್‌ ಡಿ ಟಿಎಂಟಿ, ಸ್ಪಶ್‌ರ್‍ ಮಸಾಲಾ, ಕೆಎಂಎಫ್‌ ನಂದಿನಿ, ಭಾಗ್ಯಲಕ್ಷ್ಮೇ ಟ್ರೇಡರ್ಸ್‌, ಅಮೃತ್‌ ಬಿಂದು, ಸುಭಾಸ್‌ ಇವಿಎಸ್‌, ಟ್ಯಾಲಿ, ಮೈ ಬಿಲ್‌ ಬುಕ್‌, ದೀಪಂ ಆಯಿಲ್‌, ಇಂದಿರಾ ಫುಡ್‌್ಸ ಸೇರಿದಂತೆ ನೂರಾರು ಕಂಪನಿಗಳು ಎಕ್ಸ್‌ಪೋದಲ್ಲಿ ಭಾಗವಹಿಸಿದ್ದವು. ಭಾನುವಾರ ಸಂಜೆ ಏರ್ಪಡಿಸಿದ್ದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲ ಕಂಪನಿಗಳಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಇಬ್ಬರಿಗೆ ಇವಿ ಬೈಕ್‌ ಬಹುಮಾನ: ಎಕ್ಸ್‌ಪೋಗೆ ಆಗಮಿಸುವವರು ಪ್ರವೇಶ ದ್ವಾರದಲ್ಲೇ ನೋಂದಣಿ ಮಾಡಿಸಿಕೊಂಡಿದ್ದರು. ಈ ನೋಂದಣಿಗಳ ಲಕ್ಕಿ ಡಿಪ್‌ ಎತ್ತಿದ್ದು ಕಾರ್ತಿಕ್‌ ಮತ್ತು ಮಲ್ಲಯ್ಯ ವಸ್ತ್ರದ್‌ ಎಂಬುವರು ವಿಜೇತರಾಗಿ ಎಲೆಕ್ಟ್ರಿಕ್‌ ಬೈಕ್‌ ತಮ್ಮದಾಗಿಸಿಕೊಂಡರು.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಬ್ಬರಲ್ಲಿ ಒಬ್ಬರಿಗೆ ಮಧುಮೇಹ: ಸಮೀಕ್ಷೆ

ಗಮನ ಸೆಳೆದ ಎಲೆಕ್ಟ್ರಿಕ್‌ ವಾಹನಗಳು: ಎಕ್ಸ್‌ಪೋದಲ್ಲಿ ಬೈಕ್‌, ಸ್ಕೂಟರ್‌, ಆಟೋ ಸೇರಿದಂತೆ ಹಲವು ನಮೂನೆಯ ಎಲೆಕ್ಟ್ರಿಕ್‌ ವಾಹನಗಳು ಜನರ ಗಮನ ಸೆಳೆದವು. ಜಯನಗರ 5 ನೇ ಬ್ಲಾಕ್‌ನ ಎಲೆಕ್ಟ್ರಿಕ್‌ ವಾಹನಗಳ ಮಾರಾಟ ಮಳಿಗೆ ‘ಅತಿಯಾಸ್‌’, ಮೈಸೂರು ರಸ್ತೆಯ ಹಳೆ ಗುಡ್ಡದಹಳ್ಳಿಯ ಎಲೆಕ್ಟ್ರಿಕ್‌ ವಾಹನಗಳ ಮಾರಾಟ ಮಳಿಗೆ ‘ಸುಭಾಸ್‌ ಆಟೋಮೇಟಿವ್‌’ ಪ್ರಮುಖ ಆಕರ್ಷಣೆಯಾಗಿದ್ದವು. ಇನ್ನುಳಿದಂತೆ ಚಿಕ್ಕಲ್ಲಸಂದ್ರದ ಗಣೇಶ್‌ ಫುಡ್‌ ಪ್ರಾಡಕ್ಟ್ನಿಂದ ಬಾಯರ್ಸ್‌ ಕಾಫಿ, ಬನಶಂಕರಿ ಮೊದಲನೇ ಹಂತದ ಮಿಹರಾಸ್‌ ಸಮೂಹದ ‘ಗೆಟ್‌ ಕಾಫಿ’, ಹೊಸಕೋಟೆಯ ಏಕರಾಜಪುರದ ನ್ಯಾಚುರೋ ಫುಡ್‌ ಆ್ಯಂಡ್‌ ಫ್ರಟ್‌ ಪ್ರಾಡಕ್ಟ್ಸ್‌, ಮೇಲುಕೋಟೆಯ ಅಯ್ಯಂಗಾರ್‌ ಪುಳಿಯೊಗರೆ, ದಾವಣಗೆರೆಯ ಶಶಿ ಸೋಫ್ಸ್‌ ಸೇರಿದಂತೆ ಹಲವು ಉತ್ಪನ್ನಗಳು ಜನರ ಗಮನ ಸೆಳೆದವು.