Bengaluru India Nano: ಕೆಲವೇ ವರ್ಷಗಳಲ್ಲಿ ಬೆಂಗ್ಳೂರಿನ ಚಿತ್ರಣವೇ ಬದಲು: ಆರ್‌ಸಿ
* ಬೆಂಗಳೂರಿಗೆ ಮೂಲ ಸೌಕರ್ಯ ಕಲ್ಪಿಸಲು ಸಿಎಂ ಕಾರ್ಯೋನ್ಮುಖ
* ನೂತನ ಆವಿಷ್ಕಾರಗಳಿಗೆ ಆದ್ಯತೆ ನೀಡಲಿರುವ ಕೇಂದ್ರ ಸರ್ಕಾರ
* ಬೆಂಗ್ಳೂರನ್ನು ನ್ಯಾನೋ ತಂತ್ರಜ್ಞಾನದ ತೊಟ್ಟಿಲಾಗಿಸಲು ಕ್ರಮ
ಬೆಂಗಳೂರು(ಮಾ.08): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭವಿಷ್ಯದಲ್ಲಿ ಬೆಂಗಳೂರಿನ(Bengaluru) ಚಿತ್ರಣ ಬದಲಿಸಲಿದ್ದು, ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್(Rajeev Chandrasekhar) ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಇಂಡಿಯಾ ಗ್ಲೋಬಲ್ ಫೋರಂ(IGF) ನಿಂದ ಏರ್ಪಡಿಸಿದ್ದ ಉದ್ಯಮಿಗಳ ಜೊತೆಗಿನ ಸಂವಾದದಲ್ಲಿ ಅವರು ಮಾತನಾಡಿದರು. ಸಂಚಾರ ದಟ್ಟಣೆ, ಉತ್ತಮ ರಸ್ತೆ ಕೊರತೆ, ತ್ಯಾಜ್ಯ ನಿರ್ವಹಣೆ ಮತ್ತಿತರ ಸಮಸ್ಯೆಗಳನ್ನು ಮೊದಲಿನಿಂದಲೂ ಬೆಂಗಳೂರಿಗರು ಎದುರಿಸುತ್ತಾ ಬಂದಿದ್ದೇವೆ. ಬಸವರಾಜ ಬೊಮ್ಮಾಯಿ ಅವರು ಹೊಸ ದೃಷ್ಟಿಕೋನ ಹೊಂದಿದ್ದು, ನಗರಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲಿದ್ದಾರೆ. ಕೆಲ ವರ್ಷಗಳಲ್ಲಿ ಬೆಂಗಳೂರಿನ ಚಿತ್ರಣವೇ ಬದಲಾಗಲಿದೆ ಎಂದು ಅಭಿಪ್ರಾಯಪಟ್ಟರು.
‘ಸೆಮಿಕಂಡಕ್ಟರ್ ಕ್ಷೇತ್ರದ ಲಾಭ ಪಡೆಯಲು 2 ಶತಕೋಟಿ ಡಾಲರ್ ಹೂಡಿಕೆ ಅಗತ್ಯ’
ನೂತನ ಆವಿಷ್ಕಾರಗಳಿಗೆ ಕೇಂದ್ರ ಸರ್ಕಾರ(Central Government) ಆದ್ಯತೆ ನೀಡಲಿದೆ. ಆದ್ದರಿಂದ ಕೃಷಿ ವಲಯದಲ್ಲೂ ಬಹಳಷ್ಟುಸಂಶೋಧನೆ ನಡೆಯುತ್ತಿದ್ದು, ತಾಂತ್ರಿಕತೆ ಬಳಕೆಯಾಗುತ್ತಿದೆ. ಭವಿಷ್ಯದಲ್ಲಿ ದೇಶೀಯ ಸಂಶೋಧನೆಗಳು ಇನ್ನೂ ಅಧಿಕ ಪ್ರಮಾಣದಲ್ಲಿ ನಡೆಯಲಿದ್ದು, ವಿಶ್ವಕ್ಕೆ ಭಾರತದ ಕೊಡುಗೆ ಗಣನೀಯವಾಗಿ ಹೆಚ್ಚಲಿದೆ ಎಂದು ತಿಳಿಸಿದರು.
ಕೋವಿಡ್(Covid-19) ಬಳಿಕ ಮಹಿಳೆಯರು (Startup) ಸ್ಥಾಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಸಂಘಗಳ ಮೂಲಕ ಹೆಚ್ಚು ವಹಿವಾಟು ಆರಂಭಿಸಿದ್ದಾರೆ. ಕೇಂದ್ರ ಸರ್ಕಾರವೂ ಮಹಿಳಾ ಸ್ವಸಹಾಯ ಸಂಘಗಳಿಗೆ ಪೂರಕವಾಗಿ ನಿಯಮಗಳನ್ನು ರೂಪಿಸುತ್ತಿದೆ ಎಂದು ಹೇಳಿದರು.
ಬೆಂಗ್ಳೂರನ್ನು ನ್ಯಾನೋ ತಂತ್ರಜ್ಞಾನದ ತೊಟ್ಟಿಲಾಗಿಸಲು ಕ್ರಮ
ಸಂಶೋಧನೆಯಿಂದ ಜನರ ಜೀವನಮಟ್ಟ ಸುಧಾರಿಸುವುದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಕನಸಾಗಿದೆ. ಅದಕ್ಕಾಗಿ ನ್ಯಾನೋ ಯೂರಿಯಾ ರಸಗೊಬ್ಬರ ತಯಾರಿಸಿದ್ದು, ಇದು ಮುಂಬರುವ ದಿನಗಳಲ್ಲಿ ರೈತರ ಬದುಕನ್ನು ಹಸನಾಗಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಬಣ್ಣಿಸಿದರು.
ಹೋಟೆಲ್‌ವೊಂದರಲ್ಲಿ ಸೋಮವಾರ ಏರ್ಪಡಿಸಿದ್ದ 3 ದಿನಗಳ ಕಾಲ ನಡೆಯುವ ‘ಬೆಂಗಳೂರು-ಇಂಡಿಯಾ ನ್ಯಾನೋ’(Bengaluru India Nano) ಸಮಾವೇಶಕ್ಕೆ ಚಾಲನೆ ನೀಡಿದ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರ(Farmers) ಆದಾಯ ಹೆಚ್ಚಳಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ನ್ಯಾನೋ ಯೂರಿಯಾ ಹೊರತರಲಾಗಿದೆ. ಪರೀಕ್ಷಾ ಹಂತದಲ್ಲಿ ಯಶಸ್ವಿಯಾಗಿದ್ದು, ರೈತರಿಗೆ ಹಣ ಉಳಿತಾಯವಾಗುವುದರ ಜೊತೆಗೆ ಅಧಿಕ ಇಳುವರಿ ಬರುತ್ತದೆ ಎಂದರು.
ನ್ಯಾನೋ ತೊಟ್ಟಿಲಾಗಲಿ:
ಬೆಂಗಳೂರು ನಗರವು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ನಗರವನ್ನು ನ್ಯಾನೋ ತಂತ್ರಜ್ಞಾನದ ತೊಟ್ಟಿಲು ಮಾಡಬೇಕು. ಇದಕ್ಕಾಗಿ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದ್ದು, ಅಗತ್ಯ ನೀತಿಗಳನ್ನು ರೂಪಿಸಲಾಗುವುದು. ಇಂತಹ ಅದ್ಭುತ ಕಾರ್ಯಕ್ರಮಕ್ಕೆ ಡೈನಾಮಿಕ್ ಲೀಡರ್ ಅಶ್ವತ್ಥ ನಾರಾಯಣ ಅವರು ಮುಂದಾಳತ್ವ ವಹಿಸಿದ್ದು ಸಂತಸ ತಂದಿದೆ ಎಂದು ಪ್ರಶಂಸಿಸಿದರು.
Defamation Case: ಕೇಂದ್ರ ಸಚಿವ ಆರ್‌ಸಿ ವಿರುದ್ಧದ ಮಾನನಷ್ಟ ಕೇಸ್ ವಜಾ
ಕೇಂದ್ರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ಸಮಾವೇಶದ ಹಿನ್ನೆಲೆಯಲ್ಲಿ ಮುದ್ರಿತ ಧ್ವನಿ ಸಂದೇಶ ಕಳುಹಿಸಿದ್ದು, ‘ನ್ಯಾನೋ ತಂತ್ರಜ್ಞಾನವು ಡಿಜಿಟಲ್ ಆರ್ಥಿಕತೆಯನ್ನು ಪ್ರೋತ್ಸಾಹಿಸುತ್ತದೆ. ಮುಂದಿನ ದಿನಗಳಲ್ಲಿ ಅಗಾಧ ಉದ್ಯೋಗ ಸೃಷ್ಟಿಯಾಗಲಿವೆ. ಕೇಂದ್ರ ಸರ್ಕಾರವೂ ನ್ಯಾನೋ ತಂತ್ರಜ್ಞಾನಕ್ಕೆ ಆದ್ಯತೆ ನೀಡುತ್ತಿದೆ’ ಎಂದು ತಿಳಿಸಿದರು.
ತಂಜಾವೂರಿನ ಶಾಸ್ತ್ರ ವೈಜ್ಞಾನಿಕ ಅಧ್ಯಯನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎಸ್. ಸ್ವಾಮಿನಾಥನ್ ಅವರಿಗೆ ‘ಸಿಎನ್‌ಆರ್ ರಾವ್ ವಿಜ್ಞಾನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ವಿಜ್ಞಾನಿ ಡಾ. ಸಿ.ಎನ್.ಆರ್.ರಾವ್ ಅವರು ವರ್ಚುಯಲ… ರೂಪದಲ್ಲಿ ಭಾಗವಹಿಸಿದ್ದರು. ಸಚಿವ ಡಾ.ಸಿ.ಎನ್‌ಅಶ್ವತ್ಥ ನಾರಾಯಣ, ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್ ಮುಖ್ಯಸ್ಥ ಪ್ರೊ. ನವಕಾಂತ ಭಟ್, ಸಮ್ಮೇಳನದ ಕಾರ್ಯಕಾರಿ ಸಮಿತಿ ಮುಖ್ಯಸ್ಥ ಪ್ರೊ. ಅಜಯಕುಮಾರ್ ಸೂದ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಮತ್ತಿತರರು ಹಾಜರಿದ್ದರು.