3 ಇನ್ಸೂರೆನ್ಸ್ ಕಂಪನಿಗಳು ಒಂದಾಗುತ್ತಿವೆ: ನೀವು ಮಾಡಬೇಕಿರುವುದು ಬಹಳಷ್ಟಿದೆ!

ಒಂದಾಗಲಿವೆ ಪ್ರಮುಖ ಮೂರು ಇನ್ಸೂರೆನ್ಸ್ ಕಂಪನಿಗಳು| ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ಇನ್ಸೂರೆನ್ಸ್ ಕಂಪನಿಗಳು ವಿಲೀನ| ನ್ಯಾಶನಲ್ ಇನ್ಸೂರೆನ್ಸ್, ಓರಿಯೆಂಟಲ್ ಇನ್ಸೂರೆನ್ಸ್, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್| ಪ್ರಮುಖ ಇನ್ಸೂರೆನ್ಸ್ ಕಂಪನಿಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ| ‘ಮೂರು ಕಂಪನಿಗಳ ಆರ್ಥಿಕ ಸ್ಥಿತಿ ಸುಧಾರಿಸಲು ವಿಲೀನ ಪ್ರಕ್ರಿಯೆ ಅನಿವಾರ್ಯ’| ಮುಂದಿನ ಏಪ್ರಿಲ್ ತಿಂಗಳಿನಿಂದ ಒಂದೇ ಬೃಹತ್ ಸಂಸ್ಥೆ ಅಸ್ತಿತ್ವಕ್ಕೆ| 

Union Govt To Merge 3 Major Insurance Companies Soon

ನವದೆಹಲಿ(ನ.26): ಮಹತ್ವದ ಬೆಳವಣಿಗೆಯೊಂದರಲ್ಲಿ ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ಇನ್ಸೂರೆನ್ಸ್ ಕಂಪನಿಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.

ನ್ಯಾಶನಲ್ ಇನ್ಸೂರೆನ್ಸ್, ಓರಿಯೆಂಟಲ್ ಇನ್ಸೂರೆನ್ಸ್, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಗಳನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ದೇಶದಲ್ಲಿ ಒಂದೇ ಬೃಹತ್ ಜೀವ ವಿಮಾ ರಹಿತ ಇನ್ಸೂರೆನ್ಸ್ ಸಂಸ್ಥೆಯನ್ನು ಸ್ಥಾಪಿಸುವುದು ಕೇಂದ್ರ ಸರ್ಕಾರದ ಉದ್ದೇಶ ಎಂದು ಹೇಳಲಾಗಿದೆ.

ಗಮನಿಸಿ..ನವೆಂಬರ್ 30 ರಿಂದ LICಯ ಈ ಪಾಲಿಸಿಗಳು ಬಂದ್!

ಮೂರು ಕಂಪನಿಗಳ ಆರ್ಥಿಕ ಸ್ಥಿತಿ ಸುಧಾರಿಸಲು ವಿಲೀನ ಪ್ರಕ್ರಿಯೆ ಅನಿವಾರ್ಯ ಎಂದು ತಿಳಿಸಿರುವ ಕೇಂದ್ರ ಸರ್ಕಾರ, ವಿಲೀನ ಪ್ರಕ್ರಿಯೆ ಸದೃಢ ಮ್ತತು ಬೃಹತ್ ಇನ್ಸೂರೆನ್ಸ್ ಸಂಸ್ಥೆಯ ಉಗಮಕ್ಕೆ ಕಾರಣವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದೆ.

ದೇಶದ ಇನ್ಸೂರೆನ್ಸ್ ನಿಯಂತ್ರಕ ಕಣ್ಗಾವಲು ಸಂಸ್ಥೆ IRDAI, ಈ ಮೂರು ಕಂಪನಿಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ ಎಂದು ವರದಿ ನೀಡಿತ್ತು.

2019-20ರ ಹಣಕಾಸು ವರ್ಷದ ಅವಧಿಯಲ್ಲಿ ಯುನೈಟೆಟ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯೊಂದೇ ಸುಮಾರು 2,200 ಕೋಟಿ ರೂ. ನಷ್ಟ ಅನುಭವಿಸಿತ್ತು.

ಅಲ್ಲದೇ 2019-20ರ ಹಣಕಾಸು ವರ್ಷದ ಅವಧಿಯಲ್ಲಿ ಓರಿಯೆಂಟಲ್ ಇನ್ಸೂರೆನ್ಸ್ ಕಂಪನಿ ಬರೋಬ್ಬರಿ 142 ಕೋಟಿ ರೂ. ಮಷ್ಟ ಅನುಭವಿಸಿತ್ತು.

ಬ್ಯಾಂಕ್‌ ಆಯ್ತು, ಈಗ ಸರ್ಕಾರಿ ವಿಮಾ ಕಂಪನಿಗಳ ವಿಲೀನ?

ಈಗಾಗಲೇ ಮೂರು ಕಂಪನಿಗಳಿಗೆ ಆರ್ಥಿಕ ಸಹಾಯ ಘೋಷಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನಷ್ಟದಲ್ಲಿರುವ ಇನ್ಸೂರೆನ್ಸ್ ಕಂಪನಿಗಳ ನೆರವಿಗೆ ಧಾವಿಸಿದ್ದಾರೆ.

ವಿಲೀನ ಪ್ರಕ್ರಿಯೆ ಯಾವಾಗ?:

ಕೇಂದ್ರ ಸರ್ಕಾರದ ಮಾಹಿತಿ ಮೂಲಗಳ ಪ್ರಕಾರ ಮುಂದಿನ ತಿಂಗಳ ಅಂತ್ಯದಲ್ಲಿ ವಿಲೀನ ಪ್ರಕ್ರಿಯೆ ಪೂರ್ಣಗೊಂಡು, ಮುಂದಿನ ಏಪ್ರಿಲ್ ತಿಂಗಳಿನಿಂದ ಒಂದೇ ಬೃಹತ್ ಸಂಸ್ಥೆ ಅಸ್ತಿತ್ವಕ್ಕೆ ಬರಲಿದೆ.

ನಿಮಗೊಂದು ಬಂಪರ್ ಸುದ್ದಿ: ಥರ್ಡ್‌ ಪಾರ್ಟಿ ವಿಮೆ ಈ ವರ್ಷ ಏರಿಕೆ ಇಲ್ಲ!

ನವೆಂಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Latest Videos
Follow Us:
Download App:
  • android
  • ios