ಗಮನಿಸಿ..ನವೆಂಬರ್ 30 ರಿಂದ LICಯ ಈ ಪಾಲಿಸಿಗಳು ಬಂದ್!
ಹೊಸ ನಿಯಮಗಳಿಗೆ ಅನುಗುಣವಾಗಿ ಎಲ್ ಐಸಿಯಲ್ಲಿ ಮಹತ್ವದ ಬದಲಾವಣೆ/ 24ಕ್ಕೂ ಅಧಿಕ ಪಾಲಿಸಿಗಳಿಗೆ ತೀಲಾಂಜಲಿ ನೀಡಲು ಎಲ್ ಐಸಿ ಆಲೋಚನೆ/ ಹಾಗಾದರೆ ಮುಂದೇನು?
ನವದೆಹಲಿ[ನ. 09] ನೀವು ಭಾರತೀಯ ಜೀವ ವಿಮಾ ನಿಗಮ[ಎಲ್ ಐಸಿ] ಯ ಗ್ರಾಹಕರೇ ಹಾಗಾದರೆ ಈ ಸುದ್ದಿಯನ್ನು ಖಂಡಿತ ಓದಲೇಬೇಕು. ಸುಮಾರು 24ಕ್ಕೂ ಅಧಿಕ ಪಾಲಿಸಿಗಳಿಗೆ ಎಲ್ ಐಸಿ ತೀಲಾಂಜಲಿ ನೀಡಲು ಮುಂದಾಗಿದೆ. ನವೆಂಬರ್ 30 ರಿಂದ ಈ ಪಾಲಿಸಿಗಳು ಚಾಲ್ತಿಯಲ್ಲಿ ಇರುವುದಿಲ್ಲ.
ಎರಡು ಡಜನ್ ಇಂಡಿವಿಜುವಲ್ ಪಾಲಿಸಿ ಮತ್ತು ಎಂಟು ಗ್ರೂಪ್ ಇನ್ಶೂರೆನ್ಸ್ ನಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಜೀವನ್ ಆನಂದ್, ಜೀವನ್ ಉಮಂಗ್, ಜೀವನ್ ಲಕ್ಷ, ಜೀವನ್ ಲಾಭ, ಸೇರಿದಂತೆ ಅನೇಕ ಪಾಲಿಸಿಗಳನ್ನು ಮಾಡಿಫೈ ಮಾಡಲಿದ್ದೇವೆ ಎಂದು ಎಲ್ ಐಸಿ ಹಣಕಾಸು ವಿಭಾಗದ ಎಂ.ಆರ್.ಕುಮಾರ್ ತಿಳಿಸಿದ್ದಾರೆ.
ಎಲ್ ಐಸಿ ಮುಳುಗಿ ಹೋಯ್ತಂತೆ.. ಹೌದಾ?
ಹೊಸ ವಿಮಾ ನಿಯಮಗಳಿಗೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಯೂ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಲಿದೆ. ಕೇವಲ ಎಲ್ಐಸಿ ಒಂದೇ ಅಲ್ಲ , ಐಆರ್ ಡಿಎಐ ನಿಯಮಗಳಿಗೆ ಅನುಗುಣವಾಗಿ ಉಳಿದ ಕಂಪನಿಗಳು ಕೆಲ ಬದಲಾವಣೆ ಮಾಡಿಕೊಳ್ಳಲಿವೆ. ಈಗಿರುವ ವರದಿಗಳ ಪ್ರಕಾರ ಸುಮಾರು 80 ವಿಭಿನ್ನ ಪಾಲಿಸಿಗಳು ಬದಲಾವಣೆ ಹೊಂದಲಿವೆ.
ನವೆಂಬರ್ 30 ರೊಳಗೆ ಪಾಲಿಸಿ ಬಂದ್ ಆಗಲಿದೆ ಅಥವಾ ಬದಲಾವಣೆಯಾಗಲಿದೆ ಎಂಬುದು ಒಂದು ಸುದ್ದಿ? ಹಾಗಾದರೆ ಮುಂದೇನು ಮಾಡಬೇಕು ಎಂಬುದಕ್ಕೆ ಸದ್ಯದ ಮಟ್ಟಿಗೆ ಉತ್ತರ ಇಲ್ಲ. ನೀವು ಯಾವ ಪಾಲಿಸಿ ಹೊಂದಿದ್ದೀರಿ ಎಂಬ ಆಧಾರದಲ್ಲಿ ಒಮ್ಮ ನಿಮ್ಮ ಏಜೆಂಟರನ್ನು ಸಂಪರ್ಕಿಸುವುದು ಒಳಿತು.