ನವದೆಹಲಿ(ಜ.22): ಚೀನಾದ ಆಟಿಕೆಗಳ ಗುಣಮಟ್ಟ ಕಳಪೆಯಾಗಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮೇಡ್ ಇನ್ ಚೀನಾ ಆಟಿಕೆಗಳಿಗೆ ಕೇಂದ್ರ ಸರ್ಕಾರ ಅಧಿಕ ತೆರಿಗೆ ವಿಧಿಸಲು ಮುಂದಾಗಿದೆ.

ಚೀನಾ ಆಟಿಕೆಗಳ ಆಮದಿನಿಂದ ಸ್ವದೇಶಿ ಆಟಿಕೆ ತಯಾರಕರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಅಲ್ಲದೇ ಚೀನಾ ಆಟಿಕೆ ವಸ್ತುಗಳು ಗುಣಮಟ್ಟದಲ್ಲಿ ಅತ್ಯಂತ ಕಳಪೆಯಾಗಿವೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. 

ಏಕಾಏಕಿ 29 ವರ್ಷಗಳಷ್ಟು ಹಿಂದಕ್ಕೆ ಹೋದ ಚೀನಾ: ಡ್ರ್ಯಾಗನ್ ತಾಕತ್ತು ಇಷ್ಟೇನಾ?

ಭಾರತದ ಆಟಿಕೆ ಉತ್ಪಾದಕರು ಕೂಡ ಚೀನಾದ ಆಟಿಕೆಗಳ ಆಮದು ಕುರಿತು ಅಪಸ್ವರ ಎತ್ತಿದ್ದು, ದೇಶೀಯ ಮಾರುಕಟ್ಟೆಗೆ ಹೊಡೆತ ಬಿದ್ದಿದೆ ಎಂದು ಸರ್ಕಾರದ ಮುಂದೆ ಅಳಲು ತೋಡಿಕೊಂಡಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆ, ಸಂಪೂರ್ಣ ನಿಷೇಧ ಸಾಧ್ಯವಿಲ್ಲದಿದ್ದರೂ ಅಧಿಕ ತೆರಿಗೆ ವಿಧಿಸುವ ಕುರಿತು ಚಿಂತಿಸಲಾಗುವುದು ಎಂದು ಭರವಸೆ ನೀಡಿದೆ.

ಭಾರತ-ಚೀನಾ ನಡುವೆ ಹೊಸ ಯುಗ ಆರಂಭ: ಮೋದಿ ಅಭಿಮತ!

ಭಾರತದಲ್ಲಿ ಮಾರಾಟವಾಗುವ ಶೇ. 85ರಷ್ಟು ಆಟಿಕೆಗಳು ಆಮದು ಆಟಿಕೆಗಳಾಗಿದ್ದು, ಇದರಲ್ಲಿ ಶೇ.75ರಷ್ಟು ಚೀನಾದಿಂದಲೇ ಆಮದಾಗುತ್ತವೆ. ಇದರಿಂದ ಸ್ವದೇಶಿ ನಿರ್ಮಿತ ಆಟಿಕೆ ವಸ್ತುಗಳ ಮಾರಾಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.

 ಕೇಂದ್ರ ಸರ್ಕಾರ ಹಾಗೂ ಭಾರತೀಯ ಗುಣಮಟ್ಟ ಮಂಡಳಿ ನಡೆಸಿದ ಅಧ್ಯಯನ ಪ್ರಕಾರ,  ಚೀನಾದ ಬಹುತೇಕ ಆಟಿಕೆಗಳು ಭಾರತದ ಸುರಕ್ಷತೆ ಮಾನದಂಡದಲ್ಲಿ ವಿಫಲವಾಗಿವೆ. ಅಲ್ಲದೇ ಇವು ಮಕ್ಕಳ ಆರೋಗ್ಯಕ್ಕೂ ಹಾನಿಕರ ಎಂದು ವರದಿ ತಿಳಿಸಿದೆ.

ಕಿವಿಯಲ್ಲಿ ಮೋದಿ ಹೇಳಿದ್ದು: ಇದನ್ನೇ ಅಲ್ಲವೇ ನಾವೆಲ್ಲಾ ಬಯಸಿದ್ದು?

ಜನವರಿ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ