Asianet Suvarna News Asianet Suvarna News

ಆರ್ಥಿಕ ಸಮೀಕ್ಷೆ ಬಹಿರಂಗ: ಅಭಿವೃದ್ಧಿ ಮೋದಿ ಸರ್ಕಾರದ ಅಂಗ!

2019-20ರ ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆ ಬಹಿರಂಗ| ಲೋಕಸಭೆಯಲ್ಲಿ ಆರ್ಥಿಕ ಸಮೀಕ್ಷೆ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ| ಮುಂದಿನ ಹಣಕಾಸು ವರ್ಷದಲ್ಲಿ ಶೇ. 6ರಿಂದ ಶೇ. 6.5ರಷ್ಟು ಆರ್ಥಿಕ ಪ್ರಗತಿಯ ಗುರಿ| ಪ್ರಸ್ತುತ ಹಣಕಾಸು ಬೆಳವಣಿಗೆ ಶೇ.5ಕ್ಕೆ ಸಿಮೀತ| ಹಣಕಾಸು ಪ್ರಗತಿ ಪುನರುಜ್ಜೀವಗೊಳಿಸಲು ಕ್ರಮಗಳನ್ನು ಸೂಚಿಸಿದ ಸಮೀಕ್ಷೆ| ಸಮೀಕ್ಷೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರ  ಸುಧಾರಣಾ ಕ್ರಮಗಳ ಉಲ್ಲೇಖ| 

Union Government Releases Lavender Economic Survey
Author
Bengaluru, First Published Jan 31, 2020, 4:01 PM IST
  • Facebook
  • Twitter
  • Whatsapp

ನವದೆಹಲಿ(ಜ.31): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 2019-20 ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದದ್ದಾರೆ.

ಏಪ್ರಿಲ್ 1ರಿಂದ ಆರಂಭವಾಗುವ ಮುಂದಿನ ವರ್ಷದ ಹಣಕಾಸು ವರ್ಷದಲ್ಲಿ ಶೇ. 6ರಿಂದ ಶೇ. 6.5ರಷ್ಟು ಆರ್ಥಿಕ ಪ್ರಗತಿಯಾಗಬಹುದು ಎಂದು ಸರ್ಕಾರ ಅಂದಾಜಿಸಿದೆ.

ಪ್ರಸ್ತುತ ಹಣಕಾಸು ಬೆಳವಣಿಗೆಯನ್ನು ಶೇ. 5ಕ್ಕೆ ಎಂದು ಸಮೀಕ್ಷೆ ಅಂದಾಜಿಸಿದ್ದು, ಹಣಕಾಸು ಪ್ರಗತಿ ಪುನರುಜ್ಜೀವಗೊಳಿಸಲು ಪ್ರಸಕ್ತ ಹಣಕಾಸಿನ ಕೊರತೆಯ ಗುರಿಯನ್ನು ಸಡಿಲಿಸಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದೆ.

ದೇಶದಲ್ಲಿ ತೆರಿಗೆ ಸಂಗ್ರಹ, ಆದಾಯ ಹೆಚ್ಚಳ, ಭಾರೀ ಹೂಡಿಕೆ, ಉದ್ಯಮಗಳಿಂದ ದೇಶದ ಸಂಪತ್ತು ಹೆಚ್ಚಿಸಿ ಜಿಡಿಪಿ ಪ್ರಗತಿಗೆ ಕಾರಣರಾಗುವವರನ್ನು ಗೌರವಿಸಬೇಕು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಉದ್ಯೋಗ ಸೃಷ್ಟಿ ಸೇರಿದಂತೆ ದೇಶದ ಆರ್ಥಿಕ ಬೆಳವಣಿಗೆಗೆ ಉತ್ಪಾದನೆ ವಲಯದಲ್ಲಿ ಹೆಚ್ಚಳ ಮಾಡಲು ಜಗತ್ತಿನ ಮುಂದೆ ಭಾರತೀಯರ ಒಗ್ಗಟ್ಟು ಪ್ರದರ್ಶಸುವ ತುರ್ತು ಅಗತ್ಯತೆ ಇದೆ ಎಂದು ವಿತ್ತ ಸಚಿವೆ ಹೇಳಿದರು. 

ಬಂದರುಗಳಲ್ಲಿ ರೆಡ್ ಟೇಪ್ ಗಳನ್ನು ತೆಗೆದುಹಾಕುವ ಮೂಲಕ ರಫ್ತು ಪ್ರಮಾಣವನ್ನು ಹೆಚ್ಚಿಸಬೇಕು. ಸ್ಟಾರ್ಟ್ ಆಫ್ ಬ್ಯುಸಿನೆಸ್ ಪ್ರಕ್ರಿಯೆ ಸುಗಮಗೊಳಿಸುವುದು, ಆಸ್ತಿ ದಾಖಲಾತಿ, ತೆರಿಗೆ ಪಾವತಿ ಮತ್ತು ಒಪ್ಪಂದಗಳನ್ನು ಜಾರಿಗೊಳಿಸುವ ಮೂಲಕ ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸುವ ಅವಶ್ಯಕತೆ ಇದೆ ಎಂದು ಸಮೀಕ್ಷೆ ಅಂದಾಜಿಸಿದೆ.

ಬಜೆಟ್‌ನಿಂದ ಯಾರಿಗೆ ಏನು ಬೇಕು? ವಿತ್ತ ಮಂತ್ರಿಯಿಂದ ಜಾದೂ ನಿರೀಕ್ಷೆ!

ಸಾರ್ವಜನಿಕ ವಲಯ ಬ್ಯಾಂಕ್’ಗಳಲ್ಲಿ ಆಡಳಿತ ವಿಧಾನ ಸುಧಾರಣೆ, ನಂಬಿಕೆ ವಿಶ್ವಾಸಾರ್ಹತೆ ಹೆಚ್ಚಿಸಲು ಹೆಚ್ಚೆಚ್ಚು ಮಾಹಿತಿ ಬಹಿರಂಗ ಮುಂತಾದ ಕ್ರಮಗಳನ್ನು ಸಮೀಕ್ಷೆ ಸೂಚಿಸಿದೆ.

ಇನ್ನು ಅಗತ್ಯದ ವಸ್ತುಗಳಾದ ಈರುಳ್ಳಿ ಸೇರಿದಂತೆ ಕೆಲ ವಸ್ತುಗಳ ಬೆಲೆ ಏರಿಕೆ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಲ್ಯಾವೆಂಡರ್(ನೇರಳೆ)ಬಣ್ಣದಲ್ಲಿ ಸಮೀಕ್ಷೆಯನ್ನು ಅಚ್ಚು ಮಾಡಲಾಗಿದ್ದು, ಹಣಕಾಸು ಕೊರತೆಯನ್ನು ಸಡಿಲಗೊಳಿಸುವಂತಹ ಕ್ರಮಗಳನ್ನು ಸೂಚಿಸಿದೆ. ಸರ್ಕಾರದ ವೆಚ್ಚ ಮತ್ತು ತೆರಿಗೆ ಕಡಿತಗಳು ಆರ್ಥಿಕ ಕುಸಿತದ ಸಂದರ್ಭದಲ್ಲಿ ಪ್ರತಿಕ್ರಮಗಳನ್ನು ಸಮೀಕ್ಷೆಯಲ್ಲಿ ಸೂಚಿಸಲಾಗಿದೆ. 

ಆರ್ಥಿಕ ಸಮೀಕ್ಷೆ ವಾರ್ಷಿಕ ದಾಖಲೆಯಾಗಿದ್ದು, ಕೇಂದ್ರ ಸರ್ಕಾರ ಬಜೆಟ್’ಗೂ  ಮುನ್ನ ಸದನದಲ್ಲಿ ಮಂಡಿಸುತ್ತದೆ. ಹಿಂದಿನ ವರ್ಷ ದೇಶದ ಅರ್ಥ ವ್ಯವಸ್ಥೆಯ ಪರಾಮರ್ಶೆ ಇದಾಗಿರುತ್ತದೆ. ಅಲ್ಪ ಅವಧಿಯಿಂದ ಮಧ್ಯಮ ಅವಧಿಯ ಭವಿಷ್ಯಕ್ಕಾಗಿ ನೀತಿ ನಿಯಮವನ್ನು ಒದಗಿಸುತ್ತದೆ.

ಜನವರಿ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios