ಮತ್ತೊಂದು ಸೂಪರ್ ಓವರ್ ಗೆಲುವು, ಸಂಪುಟ ವಿಸ್ತರಣೆಗೆ ಕೇಂದ್ರಕ್ಕಿಲ್ಲ ಒಲವು; ಜ.31ರ ಟಾಪ್ 10 ಸುದ್ದಿ!
ಕ್ರಿಕೆಟ್ ಇತಿಹಾಸದಲ್ಲೇ ಮೊದಲು. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 3ನೇ ಪಂದ್ಯದ ಬಳಿಕ 4ನೇ ಟಿ20 ಪಂದ್ಯವೂ ಸೂಪರ್ ಓವರ್‌ನಲ್ಲಿ ಅಂತ್ಯವಾಗಿದೆ. ಮತ್ತೆ ಸೂಪರ್ ಓವರ್‌ನಲ್ಲಿ ಗೆದ್ದ ಭಾರತ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಇತ್ತ ಸಚಿವ ಸಂಪುಟಕ್ಕಾಗಿ ದೆಹಲಿಗೆ ತೆರಳಿರುವ ಸಿಎಂ ಯಡಿಯೂರಪ್ಪ ಅದೆಷ್ಟೇ ಅಲೆದಾಡಿದರೂ ಕೇಂದ್ರ ನಾಯಕರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಬಜೆಟ್ ಕುತೂಹಲ ಬೆನ್ನಲ್ಲೇ, 2019-20 ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗಿದೆ. ಕಿಚ್ಚ ಸುದೀಪ್ ಸಿನಿ ಜರ್ನಿ, ಸಿದ್ದರಾಮಯ್ಯ ಪತ್ರ ಸೇರಿದಂತೆ ಜನವರಿ 31ರ ಟಾಪ್ 10 ಸುದ್ದಿ.
ಮತ್ತೆ ಸೂಪರ್ ಓವರ್ ಗೆದ್ದ ಟೀಂ ಇಂಡಿಯಾ
ಟೀಂ ಇಂಡಿಯಾ ಮತ್ತೊಮ್ಮೆ ಸೂಪರ್ ಓವರ್‌ನಲ್ಲಿ ಗೆಲುವಿನ ನಗೆ ಬೀರಿದೆ. ನಾಲ್ಕನೇ ಟಿ20 ಪಂದ್ಯವೂ ಟೈನಲ್ಲಿ ಅಂತ್ಯವಾಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. 14 ರನ್‌ಗಳ ಗುರಿಯನ್ನು ಟೀಂ ಇಂಡಿಯಾ ಇನ್ನೊಂದು ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.
3 ವರ್ಷದ ಬಾಲಕಿ ರೇಪ್ ಮಾಡಿದಾತಗೆ ಫೆ. 29ಕ್ಕೆ ಗಲ್ಲು
ನಿರ್ಭಯಾ ಅತ್ಯಾಚಾರಿಗಳು ಗಲ್ಲು ಶಿಕ್ಷೆ ಎದುರು ನೋಡುತ್ತಿರುವ ಸಂದರ್ಭದಲ್ಲೇ, ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ 22 ವರ್ಷದ ದೋಷಿಯೊಬ್ಬನಿಗೆ ಗುಜರಾತಿನ ಸೂರತ್‌ನ ಕೋರ್ಟ್‌ವೊಂದು ಡೆತ್ ವಾರೆಂಟ್ ಜಾರಿ ಮಾಡಿದೆ.
'ನಿರ್ಭಯಾಳನ್ನು ನನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ಈ ಲವ್ ಯೂ ನಿರ್ಭಯಾ'
ನೇಣಿಗೇರುವ ಸಮಯ ಹತ್ತಿರ ಬಂದರೂ ಅತ್ಯಾಚಾರಿಗೆ ಕೊಂಚವೂ ಪಶ್ಚಾತ್ತಾಪವಿಲ್ಲ. ಕಾರಾಗೃಹದಲ್ಲಿ ಚಿತ್ರ, ಡೈರಿ ಬರೆದಿದ್ದಾನೆ ನಿರ್ಭಯಾ ಅತ್ಯಾಚಾರಿ. ' ನಿರ್ಭಯಾಳನ್ನು ನನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ಈ ಲವ್ ಯೂ ನಿರ್ಭಯಾ' ಎಂದು ಯುವತಿ ಚಿತ್ರ ಬರೆದಿದ್ದಾನೆ ಅತ್ಯಾಚಾರಿ ವಿನಯ್ ಶರ್ಮಾ.
ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದ ಸಿದ್ದರಾಮಯ್ಯ
ನೆರೆ ಹಾಗೂ ಬರದಿಂದ ನಲುಗಿರುವ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು. ಪ್ರಸ್ತುತ ಬೆಂಬಲ ವ್ಯಾಪ್ತಿಗೆ ತಂದಿರುವ ಬೆಳೆಗಳಲ್ಲದೆ ಕಡಲೆ, ಗೋಧಿ, ಸೂರ್ಯಕಾಂತಿ, ಹೆಸರು, ಹತ್ತಿ, ಉದ್ದು, ಕುಸುಬೆ ಮತ್ತಿತರ ಬೆಳೆಗಳನ್ನೂ ಬೆಂಬಲ ಬೆಲ ವ್ಯಾಪ್ತಿಗೆ ತರಬೇಕು ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕ್ಯಾಬಿನೆಟ್ ಕ್ಲೈಮಾಕ್ಸ್, ಸಚಿವ ಸಂಪುಟ ಇಂದೇ ಫಿಕ್ಸ್!
ಕರ್ನಾಟಕ ಕ್ಯಾಬಿನೆಟ್ ವಿಚಾರ ಸದ್ಯಕ್ಕೆಂತೂ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಸಿಎಂ ಯಡಿಯೂರಪ್ಪ ದೆಹಲಿಯಲ್ಲೆ ಕುಳಿತುಕೊಂಡಿದ್ದಾರೆ. ಆದರೆ ಯಾವುದಕ್ಕೂ ಉತ್ತರ ಸಿಗುತ್ತಿಲ್ಲ. 17 ಜನ ಶಾಸಕರು ರಾಜೀನಾಮೆ ಕೊಟ್ಟು ದೋಸ್ತಿ ಸರ್ಕಾರ ಉರುಳಿಸಿ ಒಗ್ಗಟ್ಟು ಪ್ರದರ್ಶನ ಮಾಡಿದ್ದರು. ಆದರೆ ಈಗ ಪರಿಸ್ಥಿತಿಯೇ ಬದಲಾಗಿದೆ. ಹಾಗಾದರೆ ಏನಾಗುತ್ತಿದೆ.
10 ವರ್ಷಗಳ ಬಳಿಕ ಕೊನೆಗೂ ಉದ್ಘಾಟನಾ ಭಾಗ್ಯ ಕಂಡ ಪಂಪ್‌ವೆಲ್ ಫ್ಲೈಓವರ್!
ಹತ್ತು ವರ್ಷದ ನಂತರ ಮಂಗಳೂರಿನ ಪಂಪ್‌ವೆಲ್ ಫ್ಲೈಓವರ್‌ಗೆ ಉದ್ಘಾಟನಾ ಭಾಗ್ಯ ಸಿಕ್ಕಿದೆ. ಸಂಸದ ನಳೀನ್ ಕುಮಾರ್ ಕಟೀಲು ಫ್ಲೈಓವರನ್ನು ಉದ್ಘಾಟಿಸಿದ್ದಾರೆ. ಕೇರಳದ ಚೆಂಡೆ, ಕೀಲು, ಕುದುರೆ ತಂಡಗಳ ಮೆರವಣಿಗೆ ಉದ್ಘಾಟನೆಗೆ ಇನ್ನಷ್ಟು ಮೆರಗು ತಂದಿತ್ತು.
25 ವರ್ಷದಲ್ಲಿ 49 ಚಿತ್ರಗಳು; ಕಿಚ್ಚ ಸುದೀಪ್ ಸಿನಿ ಜರ್ನಿ!
ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿ ಜರ್ನಿಗೆ ಇಂದು 25ವರ್ಷದ ಸಂಭ್ರಮ. ಸ್ಪರ್ಶ ಚಿತ್ರದ ಮೂಲಕ ನಾಯಕ ನಟನಾಗಿ ಮಿಂಚಿದ ಬಾದ್ ಶಾ ಕೋಟಿಗೆ ಒಬ್ಬ. ಕಿಚ್ಚ ಜೀವನ 10 ಇಂಟ್ರೆಸ್ಟಿಂಗ್ ವಿಚಾರಗಳು ನೀವು ನೋಡಲೇಬೇಕು.
ಏಕಾಏಕಿ ಮೊಬೈಲ್ ಬ್ಲಾಸ್ಟ್: ಬೆಚ್ಚಿಬಿದ್ದ ಅಂಗಡಿ ಮಾಲೀಕ!
ರಿಪೇರಿಗಾಗಿ ತಂದಿದ್ದ ಲೆನೊವೊ ಕಂಪನಿಯ ಮೊಬೈಲ್ ವೊಂದು ಏಕಾಏಕಿ ಬ್ಲಾಸ್ಟ್ ಆದ ಘಟನೆ ಜಿಲ್ಲೆಯ ಕಮಲನಗರ ಪಟ್ಟಣದಲ್ಲಿ ನಡೆದಿದೆ. ಓಂಕಾರ್ ಎಂಬುವರು ಮೊಬೈಲ್ ರಿಪೇರಿಗೆಂದು ಓಶಿವಾ ಮೊಬೈಲ್ ಸೆಂಟರ್ ನಲ್ಲಿ ಕೊಟ್ಟಿದ್ದರು. ರಿಪೇರಿ ಮಾಡಲು ನೋಡುತ್ತಿದ್ದ ವೇಳೆ ಮೊಬೈಲ್ ನಲ್ಲಿ ಏಕಾಏಕಿ ಹಿಗೆ ಬರಲು ಆರಂಭಿಸಿತ್ತು.
ಆರ್ಥಿಕ ಸಮೀಕ್ಷೆ ಬಹಿರಂಗ: ಅಭಿವೃದ್ಧಿ ಮೋದಿ ಸರ್ಕಾರದ ಅಂಗ!...
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 2019-20 ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದದ್ದಾರೆ. ಏಪ್ರಿಲ್ 1ರಿಂದ ಆರಂಭವಾಗುವ ಮುಂದಿನ ವರ್ಷದ ಹಣಕಾಸು ವರ್ಷದಲ್ಲಿ ಶೇ. 6ರಿಂದ ಶೇ. 6.5ರಷ್ಟು ಆರ್ಥಿಕ ಪ್ರಗತಿಯಾಗಬಹುದು ಎಂದು ಸರ್ಕಾರ ಅಂದಾಜಿಸಿದೆ.
ಸಚಿವ ಸಂಪುಟ ವಿಳಂಬ; ಖಾಸಗಿ ಹೋಟೆಲ್‌ಗೆ ಜಾರಕಿಹೊಳಿ ಬಳಗ
ಸಚಿವ ಸಂಪುಟ ವಿಸ್ತರಣೆಗೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ನೂತನ ಶಾಸಕರಲ್ಲಿ ತಳಮಳ ಶುರುವಾಗಿದೆ. ಸಚಿವ ಸಂಪುಟ ಅಂತಿಮಗೊಳಿಸಲು ಯಡಿಯೂರಪ್ಪ ದೆಹಲಿಗೆ ತೆರಳಿದ್ದು ಅಮಿತ್ ಶಾ ಭೇಟಿಗೆ ಎದುರು ನೋಡುತ್ತಿದ್ದಾರೆ. ಇತ್ತ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಖಾಸಗಿ ಹೊಟೆಲ್‌ಗೆ ತೆರಳಿ ಸಭೆ ನಡೆಸಿದ್ದಾರೆ.