ನಿರಂತರ ಏರಿಕೆ ಕಾಣುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆ| ಸೌದಿ ಅರೇಬಿಯಾದ ತೈಲಾಗಾರಗಳ ಮೇಲೆ ನಡೆದ ಡ್ರೋಣ್ ದಾಳಿಯ ಪರಿಣಾಮ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಗಣನೀಯ ಏರಿಕೆ| ಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ ಎರಡು ರೂ. ಅಬಕಾರಿ ಸುಂಕ ವಿಧಿಸಲು ನಿರ್ಧಾರ| ಅಬಕಾರಿ ಸುಂಕ ವಿಧಿಸಲು ತೀರ್ಮಾನಿಸಿದ ಕೇಂದ್ರ ಸರ್ಕಾರ|
ನವದೆಹಲಿ(ಸೆ.24): ಒಂದು ದೇಶವನ್ನು ಮತ್ತೊಂದು ದೇಶ ಅವಲಂಬಿಸಿರುವುದು ಇಂದಿನ ಆಧುನಿಕ ಯುಗದ ಅನಿವಾರ್ಯತೆ. ನಿರ್ದಿಷ್ಟ ದೇಶವೊಂದರಲ್ಲಾಗುವ ಬದಲಾವಣೆಗಳು ಅವಲಂಬಿತ ದೇಶದ ಮೇಲೆ ಪರಿಣಾಮ ಬೀಡುವುದು ಸಹಜ.
ಅದರಂತೆ ಸೌದಿ ಅರೇಬಿಯಾದ ತೈಲಾಗಾರಗಳ ಮೇಲೆ ನಡೆದ ಡ್ರೋಣ್ ದಾಳಿಯ ಪರಿಣಾಮವಾಗಿ, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಇನ್ನು ಗಾಯದ ಮೇಲೆ ಬರೆ ಎಂಬಂತೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕ ಹಾಕುವ ನಿರ್ಧಾರಕ್ಕೆ ಬಂದಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ ಎರಡು ರೂ. ಅಬಕಾರಿ ಸುಂಕ ವಿಧಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
