ನವದೆಹಲಿ(ಅ.21): ಕೇಂದ್ರ ಸರ್ಕಾರ ತನ್ನ ಸಿ ಮತ್ತು ಡಿ ದರ್ಜೆ ನೌಕರರಿಗೆ ಕಳೆದ ಹಣಕಾಸು ವರ್ಷದ ಬೋನಸ್ ಘೋಷಿಸಿದೆ. 30 ಲಕ್ಷ ನೌಕರರಿಗೆ 3,737 ಕೋಟಿ ರೂ, 2019-20ನೇ ಸಾಲಿನ ಬೋನಸ್ ರೂಪದಲ್ಲಿ ಸಿಗಲಿದೆ. ನೌಕರರಿಗೆ ಬೋನಸ್ ನೀಡುವ ಈ ನಿರ್ಧಾರಕ್ಕೆ ಕೇಂದ್ರ ಸಂಪುಟದಿಂದ ಅನುಮೋದನೆ ದೊರೆತಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಪ್ರತೀ ದಸರಾ ವೇಳೆ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಬೋನಸ್ ನೀಡುತ್ತಿತ್ತು. ಆದರೆ ಬಾರಿ ಕೊರೋನಾ ಹಾವಳಿಯಿಂದ ಆರ್ಥಿಕ ಸಂಕಷ್ಟ ಎದುರಾಗಿತ್ತು. ಹೀಗಾಗಿ ನೌಕರರಿಗೆ ಬೋನಸ್ ವಿತರಿಸುವುದು ಅನುಮಾನ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೋನಸ್ ನೀಡುವ ನಿರ್ಧಾರ ಹಲವರಿಗೆ ಅಚ್ಚರಿ ನೀಡಿದೆ.

ಇನ್ನು ನಾನ್-​ಗೆಜೆಟೆಡ್ ಅಂದರೆ ಸಿ ಮತ್ತು ಡಿ ದರ್ಜೆ ಸರ್ಕಾರಿ ನೌಕರರಿಗಷ್ಟೇ ಈ ಬಾರಿ ಬೋನಸ್ ನಿಡಲಾಗುತ್ತಿದೆ. ಕೇಂದ್ರ ಸರ್ಕಾರದ ವ್ಯಾಪ್ತಿಗೊಳಪಡುವ ವಿವಿಧ ಇಲಾಖೆಗಳಲ್ಲಿ 30 ಲಕ್ಷ ನಾನ್-​ಗೆಜೆಟೆಡ್ ನೌಕರರಿದ್ದಾರೆ. 

ಭಾರತದಲ್ಲಿದ್ದೇ ಈ ವಾರ ನೀವು, € 53,800,000 ಇಟಾಲಿಯನ್ ಲಾಟರಿ ಜಾಕ್‌ಪಾಟ್ ಗೆಲ್ಲಿ!

ರೈಲ್ವೇ, ಪೋಸ್ಟ್‌, ಇಪಿಎಫ್​ಒ, ಇಸಿಐಸಿಯಂಥ ವಾಣಿಜ್ಯ ಸರ್ಕಾರಿ ಸಂಸ್ಥೆಗಳಲ್ಲಿ 17 ಲಕ್ಷ ನಾನ್-ಗೆಜೆಟೆಡ್ ಉದ್ಯೋಗಿಗಳಿದ್ದು, ಇವರಿಗೆ ಉತ್ಪನ್ನಶೀಲತೆ ಆಧಾರದ ಬೋನಸ್ ನೀಡಲಾಗುತ್ತದೆ. ಹಾಗೆಯೇ, ಇತರ 13 ಸರ್ಕಾರಿ ನೌಕರರಿಗೆ ಉತ್ಪನ್ನರಹಿತ ಬೋನಸ್ ನೀಡಲಾಗುತ್ತಿದೆ.

ಈ ಬೋನಸ್ ರೂಪದ ಹಣವನ್ನು ಇನ್ನೊಂದು ವಾರದೊಳಗೆ, ಅಕ್ಟೋಬರ್ 26ರ ವಿಜಯದಶಮಿ ಹಬ್ಬಕ್ಕೂ ಮೊದಲೇ ಎಲ್ಲಾ ಅರ್ಹ ಉದ್ಯೋಗಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು ಎಂದು ಜಾವ್ಡೇಕರ್ ತಿಳಿಸಿದ್ದಾರೆ.

ಸಾಲು ಸಾಲು ಹಬ್ಬಗಳಿದ್ದು, ಈ ವೇಳೆ ಜನರಿಗೆ ವಸ್ತುಗಳನ್ನು ಖರೀದಿಸುವ ಶಕ್ತಿ ಹೆಚ್ಚಾಗಲಿದೆ. ಈ ಮೂಲಕ ಕೇಂದ್ರ ಸರ್ಕಾರದ ಈ ಬೋನಸ್ ಕ್ರಮ ದೇಶದ ಆರ್ಥಿಕತೆಗೆ ಪುಷ್ಟಿ ನೀಡಲಿದೆ ಎಂದು ಪ್ರಕಾಶ್ ಜಾವ್ಡೇಕರ್ ಭರವಸೆ ವ್ಯಕ್ತಪಡಿಸಿದ್ದಾರೆ.