ನವದೆಹಲಿ(ಫೆ.02): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ(ಫೆ.01) ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸಿದ್ದು, ಬಜೆಟ್’ಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಮಧ್ಯೆ ಪ್ರಧಾನಿ ಮೋದಿ ಅವರ ಭದ್ರತೆಗಾಗಿ ಪ್ರಸಕ್ತ ಬಜೆಟ್ ಬರೋಬ್ಬರಿ 600 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಈ ಮೂಲಕ ಪ್ರಧಾನಿ ಮೋದಿ SPG ಭದ್ರತೆ ಬಜೆಟ್’ನ್ನು ಏರಿಸಲಾಗಿದೆ.

ಕಳೆದ ಬಾರಿಯ ಬಜೆಟ್’ನಲ್ಲಿ ಪ್ರಧಾನಿ ಮೋದಿ ಭದ್ರತೆಗೆ ನಿಯೋಜನೆಗೊಂಡಿರುವ SPGಗೆ 540 ಕೋಟಿ ರೂ. ಮೀಸಲಿಡಲಾಗಿತ್ತು. ಈ ಬಾಋಇ ಅದನ್ನು 60 ಕೋಟಿ ರೂ.ಗಳಿಗೆ ಏರಿಸಿ ಪಟ್ಟು 600 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಜನಪ್ರಿಯವಲ್ಲದ ಜನಪರ ಬಜೆಟ್: ಸಿಹಿ-ಕಹಿಗಳ ನಿರ್ಮಲಾ 'ಬಹೀ ಖಾತಾ'!

ಪ್ರಧಾನಿ ಮೋದಿ ಅವರಿಗೆ ಒಟ್ಟು 3,000 SPG ಭದ್ರತಾ ಸಿಬ್ಬಂದಿ  ಭದ್ರತೆ ನೀಡುತ್ತಿದ್ದು, ಅತೀ ಹೆಚ್ಚು ಭದ್ರತೆ ಹೊಂದಿರುವ ದೇಶದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಭಾಜನರಾಗಿದ್ದಾರೆ.

ಇದಕ್ಕೆ ತದ್ವಿರುದ್ಧವಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕರಾದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ವಿಪಿ ಸಿಂಗ್ ಅವರ SPG ಭದ್ರತೆಯನ್ನು ಸರ್ಕಾರ ಈಗಾಗಲೇ ಹಿಂಪಡೆದಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯಯಾದ ಬಳಿಕ ಪ್ರಧಾನಮಂತ್ರಿ ಹಾಗೂ ಅವರ ಕುಟುಂಬದ ಭದ್ರತೆಗಾಗಿ SPG ತುಕಡಿಯನ್ನು ರಚಿಸಲಾಗಿತ್ತು.

ಫೆಬ್ರವರಿ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ