Union Budget 2023: ಕೃಷಿಗೆ ಭರಪೂರ ಕೊಡುಗೆ; ನಿರ್ಮಲಾ ಬಜೆಟ್‌ನಿಂದ ರೈತರಿಗೆ ಸಿಗಲಿದೆ ಈ ಪ್ರಯೋಜನಗಳು..!

ಹೈನುಗಾರಿಕೆ, ಮೀನುಗಾರಿಕೆ ಮತ್ತು ಪಶುಸಂಗೋಪನೆಗೆ ಒತ್ತು ನೀಡುವ ಮೂಲಕ ಕೃಷಿ ಸಾಲವನ್ನು 20 ಲಕ್ಷ ಕೋಟಿಗೆ ಹೆಚ್ಚಿಸಲು ಮೋದಿ ಸರ್ಕಾರ ಬಯಸಿದೆ.

union budget 2023 check these big benefits for farmers from government ash

ನವದೆಹಲಿ (ಫೆಬ್ರವರಿ 1 , 2023): ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದೇ ರೀತಿ, ಕೇಂದ್ರ ಬಜೆಟ್ 2023 - 24 ರಲ್ಲಿ ಸಹ ರೈತರಿಗೆ ಬಂಪರ್‌ ಕೊಡುಗೆಗಳನ್ನು ಘೋಷಿಸಲಾಗಿದೆ. ಕೃಷಿ ವ್ಯವಹಾರಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ, ಕೇಂದ್ರ  ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2023 ರ ಬಜೆಟ್‌ನಲ್ಲಿ ಕೃಷಿ ವೇಗವರ್ಧಕ ನಿಧಿಯನ್ನು ಘೋಷಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ, ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ವೆಚ್ಚ-ಪರಿಣಾಮಕಾರಿ ಪರಿಹಾರಗಳನ್ನು ಜಾರಿಗೆ ತರಲು ಈ ಕೇಂದ್ರ ಬಜೆಟ್ ಪ್ರಯತ್ನಿಸುತ್ತದೆ. 

ಕೇಂದ್ರ ಸರ್ಕಾರವು (Central Government) ಸಣ್ಣ ಮತ್ತು ಅತಿ ಸಣ್ಣ ರೈತರ ಸಹಕಾರಿ ಆಧಾರಿತ ಆರ್ಥಿಕ ಅಭಿವೃದ್ಧಿ ಮಾದರಿಗಳನ್ನು ಸ್ಥಾಪಿಸಿದೆ ಮತ್ತು ಸುಮಾರು 63 ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು ಡಿಜಿಟಲ್ ಮಾಡಲು ಸಾಧ್ಯವಾಯಿತು ಎಂದು ಬುಧವಾರದ ಬಜೆಟ್‌ ಭಾಷಣದ (Budget Speech) ವೇಳೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ. 

ಇದನ್ನು ಓದಿ: ಟೆಕ್ ಉದ್ಯಮಕ್ಕೆ ಈ ಬಾರಿಯ ಮೋದಿ ಲೆಕ್ಕಾಚಾರದಲ್ಲಿ ಏನೆಲ್ಲ ಇದೆ ನೋಡಿ..?

2023ರ ಬಜೆಟ್‌ನಿಂದ ರೈತರಿಗಾಗುವ ದೊಡ್ಡ ಲಾಭಗಳು..!

  • ಕೇಂದ್ರ ಸರ್ಕಾರವು ಬೃಹತ್ ವಿಕೇಂದ್ರೀಕೃತ ಶೇಖರಣಾ ಸಾಮರ್ಥ್ಯವನ್ನು ಹೊಂದಿಸಲು ಪ್ಲ್ಯಾನ್‌ ಮಾಡಿದೆ. ಅದು ರೈತರಿಗೆ ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಮರುಪಾವತಿ ಬೆಲೆಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.
  • ಮುಂದಿನ 5 ವರ್ಷಗಳಲ್ಲಿ ಸಹಕಾರ ಸಂಘಗಳು, ಪ್ರಾಥಮಿಕ ಮೀನುಗಾರಿಕಾ ಸಂಘಗಳು ಮತ್ತು ವ್ಯಾಪ್ತಿಗೆ ಒಳಪಡದ ಪಂಚಾಯತ್ ಗ್ರಾಮಗಳಲ್ಲಿ ಡೈರಿ ಸಹಕಾರ ಸಂಘಗಳನ್ನು ಸ್ಥಾಪಿಸಲು ಸರ್ಕಾರ ಸಹಾಯ ಮಾಡುತ್ತದೆ.

ಇದನ್ನೂ ಓದಿ: Union Budget 2023: ಮದ್ಯಮ ವರ್ಗದ ಬಯಕೆ ಈಡೇರಿಸಿದ ನಿರ್ಮಲಾ, 7 ಲಕ್ಷ ರೂ.ಆದಾಯಕ್ಕೆ ತೆರಿಗೆ ಇಲ್ಲ

  • ಕೃಷಿ ವೇಗವರ್ಧಕ ನಿಧಿಯು ಗ್ರಾಮೀಣ ಪ್ರದೇಶದ ಯುವ ಉದ್ಯಮಿಗಳಿಂದ ಕೃಷಿ ಉದ್ಯಮ ಸ್ಟಾರ್ಟ್‌ಅಪ್‌ಗಳನ್ನು (Startups) ಬೆಂಬಲಿಸಲು ಸ್ಥಾಪಿಸಲ್ಪಡುತ್ತದೆ. ಇದು ರೈತರ ಸಮಸ್ಯೆಗಳಿಗೆ (Farmer Problems) ಸೃಜನಶೀಲ ಮತ್ತು ಅಗ್ಗದ ಪರಿಹಾರಗಳನ್ನು ಒದಗಿಸುತ್ತದೆ ಮತ್ತು ಲಾಭದಾಯಕತೆಯನ್ನು ಹೆಚ್ಚಿಸುತ್ತದೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸುತ್ತದೆ.
  • ಒಂದು ಕೋಟಿ ರೈತರು ಮುಂದಿನ ಮೂರು ವರ್ಷಗಳಲ್ಲಿ ನೈಸರ್ಗಿಕ ಕೃಷಿಗೆ ಬದಲಾಗಲು ಕೇಂದ್ರ ಸರ್ಕಾರದಿಂದ ಸಹಾಯ ಪಡೆಯಲಿದ್ದಾರೆ. ಅಲ್ಲದೆ, 10,000 ಜೈವಿಕ ಇನ್‌ಪುಟ್ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
  • ಹೈನುಗಾರಿಕೆ, ಮೀನುಗಾರಿಕೆ ಮತ್ತು ಪಶುಸಂಗೋಪನೆಗೆ ಒತ್ತು ನೀಡುವ ಮೂಲಕ ಕೃಷಿ ಸಾಲವನ್ನು 20 ಲಕ್ಷ ಕೋಟಿಗೆ ಹೆಚ್ಚಿಸಲು ಮೋದಿ ಸರ್ಕಾರ ಬಯಸಿದೆ. ಕಳೆದ 6 ವರ್ಷಗಳಲ್ಲಿ, ದೇಶದ ಕೃಷಿ ಉದ್ಯಮವು ಸರಾಸರಿ ವಾರ್ಷಿಕ ಬೆಳವಣಿಗೆ ದರ 4.6% ನಷ್ಟು ವಿಸ್ತರಿಸಿದೆ ಎಂದು ತಿಳಿದುಬಂದಿದೆ. ಈ ಮಧ್ಯೆ, ಮೌಲ್ಯ ಸರಪಳಿಯ ದಕ್ಷತೆಯನ್ನು ಹೆಚ್ಚಿಸಲು ಪ್ರಸ್ತುತ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಕಾರ್ಯಕ್ರಮದ ಉಪ-ಯೋಜನೆಯನ್ನು ಪರಿಚಯಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಕೇಂದ್ರ ಬಜೆಟ್‌ ಮಂಡನೆ ವೇಳೆ ಘೋಷಿಸಿದ್ದಾರೆ.

ಇದನ್ನೂ ಓದಿ: Budget 2023: ಒಂದು ಜಿಲ್ಲೆ, ಒಂದು ಉತ್ಪನ್ನ; ಪ್ರವಾಸೋದ್ಯಮಕ್ಕೆ ಸರ್ಕಾರದ ಚೈತನ್ಯ!

  • ಇನ್ನು, ಒಂದು ವರ್ಷದವರೆಗೆ, ಎಲ್ಲಾ ಅಂತ್ಯೋದಯ ಮತ್ತು ಆದ್ಯತೆಯ ಕುಟುಂಬಗಳು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಭಾಗವಾಗಿ ಉಚಿತ ಆಹಾರ ಧಾನ್ಯಗಳನ್ನು ಪಡೆಯಲಿದ್ದಾರೆ ಎಂದೂ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಅಂದಾಜು ರೂ. 2 ಲಕ್ಷ ಕೋಟಿ ವೆಚ್ಚವಾಗುತ್ತದೆ ಎಂದೂ ತಿಳಿದುಬಂದಿದೆ.
     
Latest Videos
Follow Us:
Download App:
  • android
  • ios