Budget 2023: ಒಂದು ಜಿಲ್ಲೆ, ಒಂದು ಉತ್ಪನ್ನ; ಪ್ರವಾಸೋದ್ಯಮಕ್ಕೆ ಸರ್ಕಾರದ ಚೈತನ್ಯ!
ಎಲ್ಲಾ ರಾಜ್ಯಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳು ತನ್ನ ರಾಜಧಾನಿಯಲ್ಲಿ ಅಥವಾ ರಾಜ್ಯದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಯುನಿಟಿ ಮಾಲ್‌ಅನ್ನು ಸ್ಥಾಪನೆ ಮಾಡುವುದಾಗಿ ಬಜೆಟ್ ಅಲ್ಲಿ ತಿಳಿಸಿದೆ.
ನವದೆಹಲಿ (ಫೆ.1): ಪ್ರತಿ ರಾಜ್ಯಗಳೂ ಕೂಡ ತನ್ನ ರಾಜ್ಯದಲ್ಲಿ ಯುನಿಟಿ ಮಾಲ್ ಅನ್ನು ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಬೆಂಬಲ ನೀಡಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. ಈ ಯುನಿಟಿ ಮಾಲ್ ರಾಜ್ಯದ ರಾಜಧಾನಿ ಅಥವಾ ಆಯಾ ರಾಜ್ಯದ ಅತ್ಯಂತ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ನಿರ್ಮಾಣ ಮಾಡುವಂತೆ ಹೇಳಿದೆ. ಈ ಯುನಿಟಿ ಮಾಲ್‌ನಲ್ಲಿ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಮತ್ತು ಜಿಐ ಉತ್ಪನ್ನಗಳು ಮತ್ತು ಇತರ ಕರಕುಶಲ ವಸ್ತುಗಳ ಪ್ರಚಾರ ಮತ್ತು ಮಾರಾಟ ಮಾಡಲಾಗುತ್ತದೆ ಎಂದು ತಮ್ಮ 5ನೇ ಬಜೆಟ್ ಅಧಿವೇಶನದಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಯುನಿಟಿ ಮಾಲ್‌ನಲ್ಲಿ ಪ್ರಚಾರ ಮಾಡಬಹುದಾದ ಕೆಲವು ಉತ್ಪನ್ನಗಳೆಂದರೆ, ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಮಾಡಲಾದ ಉತ್ಪನ್ನಗಳು, ಸ್ಥಳೀಯ ಕರಕುಶಲ ವಸ್ತುಗಳು ಮತ್ತು ಪ್ರದೇಶದ ಸಾಂಸ್ಕೃತಿಕ ವಿಶೇಷ ಉತ್ಪನ್ನಗಳು. ಉದಾಹರಣೆಗೆ ಬೆಂಗಳೂರಿನ ಯೂನಿಟಿ ಮಾಲ್‌ನಲ್ಲಿ ಪ್ರದರ್ಶಿಸಬಹುದಾದ ಕರ್ನಾಟಕದ ಕೆಲವು ಜಿಐ ಟ್ಯಾಗ್ ಉತ್ಪನ್ನಗಳೆಂದರೆ ಬ್ಯಾಡಗಿ ಮೆಣಸು, ಕಿನ್ನಾಳ ಆಟಿಕೆಗಳು, ಮೈಸೂರು ಅಗರಬತ್ತಿ, ಬೆಂಗಳೂರು ಬ್ಲೂ ದ್ರಾಕ್ಷಿಗಳಾಗಿವೆ.
"ದೇಶವು ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಗೆ ಅಪಾರ ಆಕರ್ಷಣೆಯನ್ನು ನೀಡುತ್ತದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದೆ. ಈ ವಲಯವು ವಿಶೇಷವಾಗಿ ಯುವಕರಿಗೆ ಉದ್ಯೋಗ ಮತ್ತು ಉದ್ಯಮಶೀಲತೆಗೆ ದೊಡ್ಡ ಅವಕಾಶಗಳನ್ನು ಹೊಂದಿದೆ ಎಂದು ಸಚಿವೆ ಬಜೆಟ್ ಭಾಷಣದ ವೇಳೆ ಹೇಳಿದ್ದಾರೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಸರ್ಕಾರವು ಈಗಾಗಲೇ ಸ್ವದೇಶ್ ದರ್ಶನ್ ಮತ್ತು ದೇಖೋ ಅಪ್ನಾ ದೇಶ್‌ನಂತಹ ಯೋಜನೆಗಳನ್ನು ಪ್ರಾರಂಭಿಸಿದೆ ಮತ್ತು ಈಗ ಪ್ರತಿ ರಾಜ್ಯದ ಕರಕುಶಲ ಮತ್ತು ಜಿಐ ಉತ್ಪನ್ನಗಳ ಪ್ರಚಾರ ಮಾಡಲು ರಾಜ್ಯ ರಾಜಧಾನಿಗಳು ಯುನಿಟಿ ಮಾಲ್‌ಗಳನ್ನು ತೆರೆಯುವಂತೆ ಪ್ರೋತ್ಸಾಹಿಸಲಾಗಿದೆ.
Education Budget 2023: ಯೂತ್ ನ್ಯಾಷನಲ್ ಡಿಜಿಟಲ್ ಲ್ರೈಬ್ರೆರಿ ಸ್ಥಾಪನೆ, ಎಲ್ಲಾ ಭಾಷೆಯ ಪುಸ್ತಕಕ್ಕೆ ಆದ್ಯತೆ!
ದೇಶದ ಪ್ರತಿ ಜಿಲ್ಲೆಗಳ ಶಕ್ತಿಯನ್ನು ತಿಳಿಯಲು ಈಗಾಗಲೇ ಒನ್ ನೇಷನ್ ಒನ್ ಪ್ರಾಡಕ್ಟ್ ಯೋಜನೆ ಘೋಷಣೆ ಮಾಡಿದ.ೆ ಒಂದು ದೇಶ ಒಂದು ಉತ್ಪನ್ನದ ಅಡಿಯಲ್ಲಿ ಆಯಾ ಜಿಲ್ಲೆಗಳ ಸಾಮರ್ಥ್ಯವನ್ನು ಅರಿತು ಉದ್ಯೋಗ ಸೃಷ್ಟಿಯನ್ನು ಮಾಡುವುದು ಸರ್ಕಾರದ ಯೋಜನೆಯಾಗಿದೆ. ಈಗಾಗಲೇ ಉತ್ತರ ಪ್ರದೇಶ ರಾಜ್ಯದಲ್ಲಿ ಇದು ಜಾರಿಯಾಗಿದೆ.
Union Budget 2023 ಮಧ್ಯಮ ವರ್ಗಕ್ಕೆ ಬಂಪರ್, ಆದಾಯ ತೆರಿಗೆ ಮಿತಿ 7 ಲಕ್ಷ ರೂಗೆ ಏರಿಕೆ!
ಪ್ರವಾಸೋದ್ಯಮ ಕ್ಷೇತ್ರದ ಮಹತ್ವದ ಘೋಷಣೆಗಳು:
* ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರವಾಸೋದ್ಯಮಕ್ಕಾಗಿ ಸಂಪೂರ್ಣ ಪ್ಯಾಕೇಜ್ ಆಗಿ ಅಭಿವೃದ್ಧಿಪಡಿಸಲು ಚಾಲೆಂಜ್ ಮೋಡ್ ಮೂಲಕ 50 ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲಾಗುತ್ತದೆ.
* ಗಡಿ ಗ್ರಾಮಗಳಲ್ಲಿ ಪ್ರವಾಸೋದ್ಯಮ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು.
* ಸರ್ಕಾರವು ಯೂನಿಟಿ ಮಾಲ್ ಅನ್ನು ಸ್ಥಾಪಿಸಲು ಪ್ರೋತ್ಸಾಹ ನೀಡುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ನೆರವಾಗಲಿದೆ.
- ಜಿಐ ಉತ್ಪನ್ನಗಳು ಮತ್ತು ರಾಜ್ಯಗಳ ಇತರ ಕರಕುಶಲಗಳನ್ನು ಪ್ರೋತ್ಸಾಹಿಸುವ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಗೆ ಉತ್ತೇಜನ ನೀಡಲಿದೆ.