ಗೃಹ ಸಾಲ, ತೆರಿಗೆ ವಿನಾಯ್ತಿ; ಮನೆ ಖರೀದಿಸುವವರಿಗೆ ಬಿಗ್ ರಿಲೀಫ್ ನೀಡಿದ ಬಜೆಟ್!
ಕೇಂದ್ರ ಸರ್ಕಾರ 2021-22ರ ಸಾಲಿನ ಬಜೆಟ್‌ನಲ್ಲಿ ಕೆಲ ಕ್ಷೇತ್ರಕ್ಕೆ ನೀಡಲಾಗಿದ್ದ ವಿನಾಯ್ತಿಯನ್ನು ಮುಂದುವರಿಸಿದೆ. ಇನ್ನು ಕೆಲ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡಿದೆ. ಇದರಲ್ಲಿ ಎಲ್ಲರಿಗೂ ಮನೆ ಕಲ್ಪಿಸುವ ಯೋಜನೆಯಡಲ್ಲಿ ನೀಡಲಾಗಿದ್ದ ಹಲವು ವಿನಾಯ್ತಿ ಸೇವೆಗಳನ್ನು ಮುಂದುವರಸಿದೆ. ಮನೆ ಖರೀದಿದಾರರಿಗೆ, ಗೃಹ ಸಾಲ, ವಿನಾಯ್ತಿ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಫೆ.01): ಮನೆ ಖರೀದಿ, ರಿಯಲ್ ಎಸ್ಟೇಟ್ ಸೇರಿದಂತೆ ಕೆಲ ಕ್ಷೇತ್ರಕ್ಕೆ ನೀಡಿದ್ದ ಹೆಚ್ಚುವರಿ ವಿನಾಯ್ತಿಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಮುಂದುವರಿಸಲಾಗಿದೆ. ಈ ಮೂಲಕ ಮನೆ ಖರೀದಿದಾರರಿಗೆ ಬಿಗ್ ರಿಲೀಫ್ ನೀಡಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಗೃಹ ಸಾಲದ ಬಡ್ಡಿ ಪಾವತಿ ಮೇಲಿನ ತೆರಿಗೆ ವಿನಾಯ್ತಿ, ಸುಲಭ ಸಾಲ ಸೌಲಭ್ಯಗಳನ್ನು ಮತ್ತೊಂದು ವರ್ಷಕ್ಕೆ ಮುಂದುವರಿಸಲಾಗಿದೆ.
"
ಕೇಂದ್ರ ಬಜೆಟ್ 2021: ಯಾವುದು ದುಬಾರಿ? ಯಾವುದರ ಬೆಲೆ ಇಳಿಕೆ; ಇಲ್ಲಿದೆ ಫುಲ್ ಲಿಸ್ಟ್!
ಮುಂದಿನ ತಿಂಗಳು ಅಂದರೆ, 2021ರ ಮಾರ್ಚ್‌ಗೆ ಅಂತ್ಯವಾಗಬೇಕಿದ್ದ ಗೃಹ ಸಾಲದ ಮೇಲಿನ ಬಡ್ಡಿ ವಿನಾಯ್ತಿ ಮತ್ತೊಂದು ವರ್ಷ ಮುಂದುವರಿಸಲಾಗಿದೆ. ಸೆಕ್ಷನ್ 80 EEA ಅಡಿ ನೀಡಲಾಗುತ್ತಿದ್ದ ಗೃಹ ಸಾಲದ ಬಡ್ಡಿ ಪಾವತಿ ಮೇಲಿನ ತೆರಿಗೆ ವಿನಾಯ್ತಿ ಅವಧಿಯನ್ನು 2022ರ ವರೆಗೆ ವಿಸ್ತರಿಸಲಾಗಿದೆ.
ಸೇನೆಗೆ ಮತ್ತಷ್ಟು ಬಲ ಕೊಟ್ಟ ಬಜೆಟ್, ಸತತ 7 ವರ್ಷ ರಕ್ಷಣಾ ವಲಯಕ್ಕೆ ಹೆಚ್ಚಿದ ಅನುದಾನ!
ಎಲ್ಲರಿಗೆ ಸೂರು ಯೋಜನೆ ಅಡಿ ನೀಡಲಾಗಿದ್ದ 80 EEA ಅಡಿ ಸ್ಕೀಮ್‌ನಲ್ಲಿ ಸಾಲದ ಬಡ್ಡಿ ಪಾವತಿಯಲ್ಲಿ 1.5 ಲಕ್ಷ ರೂಪಾಯಿ ವಿನಾಯ್ತಿ ನೀಡಲಾಗುತ್ತಿತ್ತು. ಈ ಯೋಜನೆಯನ್ನು ಮತ್ತೊಂದು ವರ್ಷಕ್ಕೆ ಮುಂದುವರಿಸಿದೆ. ಹೀಗಾಗಿ ಮನೆ ಖರೀದಿದಾರರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.
80 EEA ಅಡಿ ಸ್ಕೀಮ್ ಜೊತೆಗೆ ಸೆಕ್ಷನ್ 24B ಅಡಿಯಲ್ಲಿ ಗೃಹ ಸಾಲ ಮರುಪಾವತಿಯಲ್ಲಿ ಪ್ರತಿ ಹಣಕಾಸು ವರ್ಷದಲ್ಲಿ 2 ಲಕ್ಷ ರೂಪಾಯಿ ಬಡ್ಡಿ ವಿನಾಯಿತಿ ಸಿಗಲಿದೆ. ಹೀಗಾಗಿ ಮಧ್ಯಮ ವರ್ಗದ ಕುಟುಂಬಕ್ಕೆ ಈ ಯೋಜನೆ ನೆರವಾಗಲಿದೆ. 80 EEA ಅಡಿ ಸ್ಕೀಮ್ ಸೌಲಭ್ಯ ಪಡೆಯಲು ನೀವು ಖರೀದಿಸುವ ಮನೆ 45 ಲಕ್ಷ ರೂಪಾಯಿ ದಾಟಿರಬಾರದು.