ಕೇಂದ್ರ ಬಜೆಟ್ 2021: ಯಾವುದು ದುಬಾರಿ? ಯಾವುದರ ಬೆಲೆ ಇಳಿಕೆ; ಇಲ್ಲಿದೆ ಫುಲ್ ಲಿಸ್ಟ್!
ಈ ಬಾರಿಯ ಬಜೆಟ್ ಮಂಡನೆ ಬಳಿಕ ಯಾವೆಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ? ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ. ಜನಸಾಮಾನ್ಯರ ದಿನ ನಿತ್ಯದ ಬದುಕಿಗೆ ಈ ಬಜೆಟ್ ಯಾವ ರೀತಿ ಪರಿಣಾಮ ಬೀರಲಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ?
ನವದೆಹಲಿ(ಫೆ.01): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021-22ರ ಸಾಲಿನ ಆಯವ್ಯಯಗಳ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಕೊರೋನಾ ವೈರಸ್ ಹೊಡೆತಿಂದ ಪಾತಾಳಕ್ಕಿಳಿದ ಆರ್ಥಿಕತೆ ನಡುವೆ ಈ ಬಾರಿಯ ಬಜೆಟ್ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಹಲವು ಸವಾಲಿನ ನಡುವೆ ವಿತ್ತ ಸಚಿವೆ ಸಮಾಧಾನಕರ ಬಜೆಟ್ ಮಂಡಿಸಿದ್ದಾರೆ.
"
ಕೇಂದ್ರ ಬಜೆಟ್ 2021:ಮೊಬೈಲ್, ಚಾರ್ಜರ್ ಮತ್ತಷ್ಟು ದುಬಾರಿ!
ಈ ಬಾರಿಯ ಬಜೆಟ್‌ನಲ್ಲಿ ಹಲವು ಕ್ಷೇತ್ರಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗಿದೆ. ಹೀಗಿ ವಿದೇಶಿ ವಸ್ತುಗಳ ಆಮದಿಗೆ ಹೆಚ್ಚಿನ ಸುಂಕ ವಿಧಿಸಲಾಗಿದೆ. ಹೀಗಾಗಿ ಸಹಜವಾಗಿ ಹೀಗಾಗಿ ಕೆಲ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇನ್ನು ಕೆಲ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ. ಆದರೆ ಬಹುತೇಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಇನ್ನು ಕೆಲವೇ ಕೆಲವು ವಸ್ತುಗಳ ಬೆಲೆ ಇಳಿಕೆಯಾಗಿದೆ.
Budget 2021: ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆಸ್: ನಾಳೆಯಿಂದಲೇ ಜಾರಿ!
ಈ ಬಾರಿಯ ಬಜೆಟ್ ಬಳಿಕ ಯಾವೆಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಅನ್ನೋ ವಿವರ ಇಲ್ಲಿದೆ.
ಯಾವುದು ದುಬಾರಿ?
ಸೇಬು, ಮಧ್ಯ, ಕಾಬೂಲಿ ಕಡಲೆ, ಹುರಿಗಡಲೆ, ಸೂರ್ಯಕಾಂತಿ ಎಣ್ಣೆ, ಹತ್ತಿ, ಆಮದು ಉಡುಪು, ಹರಳು, ರಸಗೊಬ್ಬರ, ಎಲೆಕ್ಟ್ರಾನಿಕ್ ವಸ್ತು, ವಿದೇಶಿ ಮೊಬೈಲ್, ಅಮದು ಚಾರ್ಜರ್, ಲೆದರ್ ಶೂ, ವಾಹನ ಬಿಡಿ ಭಾಗ ಸೇರಿದಂತೆ ಕೆಲ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ.
ಯಾವೆಲ್ಲ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ ಅನ್ನೋ ವಿವರ ಇಲ್ಲಿದೆ.
ಯಾವುದರ ಬೆಲೆ ಇಳಿಕೆ?
ಚಿನ್ನ-ಬೆಳ್ಳಿ, ಕಬ್ಬಿಣ, ಸ್ಟೀಲ್, ಉಕ್ಕಿನ ಪಾತ್ರೆ, ನೈಲಾನ್ ಬಟ್ಟೆ, ತಾಮ್ರದ ವಸ್ತುಗಳು, ವಿಮೆ, ವಿದ್ಯುತ್, ಡ್ರೈ ಕ್ಲೀನಿಂಗ್, ಕೃಷಿ ಉಪಕರಣಗಳು