ನವದೆಹಲಿ(ನ.28): ದೇಶದಲ್ಲಿ ಹೊಸ ಕೊರೋನಾ ಕೇಸುಗಳ ಸಂಖ್ಯೆಯಲ್ಲಿ ಇಳಿಮುಖ, ಶೀಘ್ರವೇ ಕೊರೋನಾ ಲಸಿಕೆ ವಿತರಣೆ ಆರಂಭವಾಗಬಹುದು ಶುಭ ಸುದ್ದಿ ನಡುವೆಯೇ ದೇಶದ ಆರ್ಥಿಕತೆ ಕೂಡ ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳುವ ಮೂಲಕ ಮತ್ತೆ ಹಾದಿಗೆ ಮರಳುತ್ತಿರುವ ಸಿಹಿ ಸುದ್ದಿ ಹೊರಬಿದ್ದಿದೆ. ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ (ಜುಲೈ- ಸೆಪ್ಟೆಂಬರ್‌) ಆರ್ಥಿಕಾಭಿವೃದ್ಧಿ ದರ ಶುಕ್ರವಾರ ಪ್ರಕಟಗೊಂಡಿದ್ದು -7.5%ರಷ್ಟುಋುಣಾತ್ಮಕ ಬೆಳವಣಿಗೆ ದರ ದಾಖಲಾಗಿದೆ.

ಮೊದಲ ತ್ರೈಮಾಸಿಕದಲ್ಲಿ ಆರ್ಥಿಕತೆ -23.7%ರಷ್ಟುಭಾರೀ ಕುಸಿತಕ್ಕೆ ದಾಖಲಾಗಿದ್ದನ್ನು ಗಮನಿಸಿದರೆ, ಇದು ಅತ್ಯಂತ ಮಹತ್ವದ ಪ್ರಗತಿ ಎಂದೇ ಭಾವಿಸಲಾಗಿದೆ. ಹೀಗಾಗಿ ಕೋರೋನಾ ಲಾಕ್‌ಡೌನ್‌ನಿಂದಾಗಿ ಕೋಟ್ಯಂತರ ಉದ್ಯೋಗ, ವಹಿವಾಟು ನಷ್ಟಮುಂತಾದ ಸಮಸ್ಯೆಗಳನ್ನು ಎದುರಿಸಿದ್ದ ದೇಶ ಮತ್ತೆ ಅಭಿವೃದ್ಧಿ ಪಥದಲ್ಲಿ ದಿಟ್ಟಹೆಜ್ಜೆ ಇಡುತ್ತಿರುವುದು ಸಾಬೀತಾಗಿದೆ ಎಂದು ವಿಶ್ಲೇಷಿಸಲಾಗಿದೆ. ಕೃಷಿ, ಉತ್ಪಾದನೆ, ನಿರ್ಮಾಣ ವಲಯದಲ್ಲಿ ಕಂಡುಬಂದ ಉತ್ತಮ ಚೇತರಿಕೆ ಒಟ್ಟಾರೆ ಆರ್ಥಿಕ ಪ್ರಗತಿ ದರ ಏರಿಕೆಗೆ ಕಾರಣವಾಗಿದೆ.

ವೆಬ್ ಸಿರೀಸ್‌ ಸಬ್‌ಸ್ಕ್ರಿಪ್ಷನ್‌ಗಾಗಿ ಭಾರೀ ಹಣ ಕಟ್ಟುತ್ತಿದ್ದೀರಾ? ಇವಿನ್ನು ಏರ್ಟೆಲ್ ಮೂಲಕ ಉಚಿತ!

ಆದರೆ ಸತತ 2 ತ್ರೈಮಾಸಿಕದಲ್ಲಿ ಆರ್ಥಿಕ ಕುಸಿತದ ಪರಿಣಾಮ ಭಾರತ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ತಾಂತ್ರಿಕವಾಗಿ ‘ಆರ್ಥಿಕ ಹಿಂಜರಿಕೆ’ ದಾಖಲಿಸಿದಂತೆ ಆಗಿದೆ. ಕೇಂದ್ರ ಸಾಂಖ್ಯಿಕ ಸಚಿವಾಲಯ ಜಿಡಿಪಿ ಕುರಿತ ಅಂಕಿ-ಅಂಶಗಳನ್ನು ಶುಕ್ರವಾರ ಬಿಡುಗಡೆ ಮಾಡಿದೆ.

ಲಾಕ್ಡೌನ್‌ ಪರಿಣಾಮ:

ಕೊರೋನಾ ಹಿನ್ನೆಲೆಯಲ್ಲಿ ಮಾಚ್‌ರ್‍ನಲ್ಲಿ ದೇಶಾದ್ಯಂತ ಲಾಕ್‌ಡೌನ್‌ ಜಾರಿಯಾದ ಹಿನ್ನೆಲೆಯಲ್ಲಿ ಏಪ್ರಿಲ್‌- ಜೂನ್‌ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.23.9ರಷ್ಟುಭಾರೀ ಕುಸಿತ ಕಂಡಿತ್ತು. ಬಳಿಕ ಜೂನ್‌ನಿಂದ ಲಾಕ್‌ಡೌನ್‌ ಅನ್ನು ಹಂತಹಂತವಾಗಿ ತೆರವುಗೊಳಿಸುತ್ತಾ ಬಂದ ಹಿನ್ನೆಲೆಯಲ್ಲಿ ಆರ್ಥಿಕತೆ ಕೂಡ ನಿಧಾನವಾಗಿ ಚೇತರಿಕೆ ಹಾದಿ ಹಿಡಿದಿತ್ತು.

ಆದರೂ ಪ್ರಸಕ್ತ ಹಣಕಾಸು ವರ್ಷದ 3 ಅಥವಾ 4ನೇ ತ್ರೈಮಾಸಿಕದ ಬಳಿಕವೇ ಮತ್ತೆ ಉತ್ತಮ ಪ್ರಗತಿ ಸಾಧಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಹಲವು ಪ್ಯಾಕೇಜ್‌ಗಳು ಮತ್ತು ಉತ್ತಮ ಮುಂಗಾರಿನ ಹಿನ್ನೆಲೆಯಲ್ಲಿ ಕೃಷಿ ವಲಯದಲ್ಲಿನ ಗಮನಾರ್ಹ ಚಟುವಟಿಕೆ, ಉತ್ಪಾದನಾ ವಲಯದ ಗರಿಗೆದರಿದ ಚಟುವಟಿಕೆಗಳು ಎರಡನೇ ತ್ರೈಮಾಸಿಕದಲ್ಲೇ ಆರ್ಥಿಕತೆ ಹೈಜಂಪ್‌ ಮಾಡುವಂತೆ ಮಾಡಿವೆ. ಪರಿಣಾಮ ಆರ್ಥಿಕತೆ ಕುಸಿತ ಪ್ರಮಾಣ ಕೇವಲ ಶೇ.7.5ಕ್ಕೆ ಸೀಮಿತವಾಗಿದೆ. ಅಂದರೆ ಜಿಡಿಪಿ ಶೇ.7.5ರಷ್ಟುಋುಣಾತ್ಮಕ ಬೆಳವಣಿಗೆ ಕಂಡಿದೆ. ಇದು ಮುಂದಿನ ದಿನಗಳಲ್ಲಿ ಅಂದರೆ ಇದೇ ಆರ್ಥಿಕ ವರ್ಷಾಂತ್ಯದೊಳಗೆ ಆರ್ಥಿಕತೆ ಪೂರ್ಣ ಚೇತರಿಸಿಕೊಂಡು ಕೋವಿಡ್‌ಗೂ ಮುನ್ನಾ ಸ್ಥಿತಿ ತಲುಪುವ ಆಶಾಭಾವನೆ ಮೂಡಿಸಿದೆ.

ಮೋದಿ ವಿರುದ್ಧ ರಾಹುಲ್ ಕಿಡಿ: 'ಸಬ್‌ ಚಂಗಾ ಸೀ' ಅಸ್ತ್ರ ಪ್ರಯೋಗಿಸಿದ ಕೈ ನಾಯಕ!

ಚೇತರಿಕೆ:

ಹಿಂದಿನ ತ್ರೈಮಾಸಿಕದಲ್ಲಿ ಶೇ.39ರಷ್ಟುಭಾರೀ ಕುಸಿತ ಕಂಡಿದ್ದ ಉತ್ಪಾದನಾ ವಲಯ ಈ ತ್ರೈಮಾಸಿಕದಲ್ಲಿ ಅಚ್ಚರಿಯ ಶೇ.0.6ರಷ್ಟುಬೆಳವಣಿಗೆ ಕಂಡಿದೆ. ಇನ್ನು ಕೃಷಿ ವಲಯ ಶೇ.3.4ರಷ್ಟುಬೆಳವಣಿಗೆ ಕಂಡಿದೆ.

ಆರ್‌ಬಿಐ ಸುಳಿವು:

ಗುರುವಾರವಷ್ಟೇ ಮಾತನಾಡಿದ್ದ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌, ಲಾಕ್ಡೌನ್‌ ನಂತರದ ಚೇತರಿಕೆ ನಿರೀಕ್ಷೆಗಿಂತಲೂ ಪ್ರಬಲವಾಗಿದೆ ಮತ್ತು ನಾಲ್ಕನೇ ತ್ರೈಮಾಸಿಕದ ವೇಳೆಗೆ ದೇಶದ ಆರ್ಥಿಕತೆ ಮತ್ತೆ ಧನಾತ್ಮಕ ಮಟ್ಟದಾಟಲಿದೆ ಎಂದು ಹೇಳಿದ್ದರು.

++++

ಯಾವ್ಯಾವ ವಲಯದ ಬೆಳವಣಿಗೆ ಎಷ್ಟೆಷ್ಟು?

ಕೃಷಿ ಶೇ.3.4

ಗಣಿ ಶೇ.- 9.1

ಉತ್ಪಾದನೆ ಶೇ. 0.6

ವಿದ್ಯುತ್‌ ಶೇ. 4.4

ನಿರ್ಮಾಣ ಶೇ.- 8.6

ವ್ಯಾಪಾರ, ಹೋಟೆಲ್‌ ಶೇ.- 15.6

ಹಣಕಾಸು, ವಿಮೆ, ರಿಯಲ್‌ ಎಸ್ಟೇಟ್‌ ಶೇ.- 8.1

ಸಾರ್ವಜನಿಕ ಆಡಳಿತ, ರಕ್ಷಣೆ ಶೇ.- 12.1

1996ರ ಬಳಿಕ ದೇಶದಲ್ಲಿ ಆರ್ಥಿಕ ಹಿಂಜರಿತ!

ಯಾವುದೇ ದೇಶದ ಆರ್ಥಿಕತೆ ಸತತ ಎರಡು ತ್ರೈಮಾಸಿಕ ಅವಧಿಯಲ್ಲಿ ಋುಣಾತ್ಮಕ ಪ್ರಗತಿ ಸಾಧಿಸಿದರೆ ಅದನ್ನು ತಾಂತ್ರಿಕವಾಗಿ ಆರ್ಥಿಕ ಹಿಂಜರಿತ ಎನ್ನಲಾಗುತ್ತದೆ. 1996ರಿಂದ ದೇಶದಲ್ಲಿ ಜಿಡಿಪಿಯನ್ನು ಅಂದಾಜಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಭಾರತ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ