ಮೋದಿ ವಿರುದ್ಧ ರಾಹುಲ್ ಕಿಡಿ: 'ಸಬ್ ಚಂಗಾ ಸೀ' ಅಸ್ತ್ರ ಪ್ರಯೋಗಿಸಿದ ಕೈ ನಾಯಕ!
ಮೋದಿ ಹಾಗೂ ಸರ್ಕಾರದ ವಿರುದ್ಧ ರಾಹುಲ್ ಕಿಡಿ| ನಿರುದ್ಯೋಗ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಚಿಂತೆ ಇಲ್ಲ|,ಾರ್ಥಿಕ ಸ್ಥಿತಿಯೂ ಕುಸಿದಿದೆ| ಇಷ್ಟಾದ್ರೂ ಸರ್ಕಾರ ನೆಮ್ಮದಿಯಿಂದಿದೆ
ನವದೆಹಲಿ(ಸೆ.12): ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಕೊರೋನಾ ನಿಯಮಂತ್ರಿಸಲು ಸರ್ಕಾರ ಕೈಗೊಂಡ ಕ್ರಮಗಳನ್ನು ಉಲ್ಲೇಖಿಸಿ ಮೋದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿತ್ಯವೂ ಹೆಚ್ಚುತ್ತಿರುವ ಕೊರೋನಾ ಪ್ರಕರಣ, ಆರ್ಥಿಕ ಸ್ಥಿತಿಯ ಕುಸಿತ ಹಾಗೂ ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಛಾಟಿ ಬೀಸಿದ್ದಾರೆ. ಮೋದಿ ಸರ್ಕಾರದ ಕೊರೋನಾ ವಿರುದ್ಧದ 'ಯೋಜಿತ ಯುದ್ಧ' ಭಾರತವನ್ನು ಪ್ರಪಾತಕ್ಕೆ ತಳ್ಳಿದೆ ಎಂದು ರಾಹುಲ್ ಗುಡುಗಿದ್ದಾರೆ.
ಈ ಸಂಬಂಧ ಶನಿವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಕೊರೋನಾ ವಿರುದ್ಧದ ಮೋದಿಯ 'ಯೋಜಿತ ಯುದ್ಧ' ಭಾರತವನ್ನು ಪ್ರಪಾತಕ್ಕೆ ತಳ್ಳಿದೆ. ಜಿಡಿಪಿಯಲ್ಲಿ ಐತಿಹಾಸಿಕ ಶೇ. 24 ರಷ್ಟು ಕುಸಿತ, ಹನ್ನೆರಡು ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. 15.5 ಲಕ್ಷ ಕೋಟಿ ರೂ ಹೆಚ್ಚುವರಿ ಸಾಲ, ವಿಶ್ವದಲ್ಲೇ ಅತೀ ಹೆಚ್ಚು ಕೊರೋನಾ ಪ್ರಕರಣ ಹಾಗೂ ಸಾವು. ಆದರೆ ಭಾರತ ಸರ್ಕಾರ ಹಾಗೂ ಮಾಧ್ಯಮಗಳಿಗೆ 'ಸಬ್ ಚಂಗಾ ಸೀ(ಎಲ್ಲವೂ ಚೆನ್ನಾಗಿದೆ)' ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಶುಕ್ರವಾರ ಕಾಂಗ್ರಸ್ ನಾಯಕ ರಾಹುಲ್ ಗಾಂಧೀ ಚೀನಾ ವಿವಾದ ಸಂಬಂಧ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಸರ್ಕಾರ ಚೀನಾವನ್ನು ನಮ್ಮ ಭೂ ಪ್ರದೇಶದಿಂದ ಹೊರ ಹಾಕುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.