ನಮ್ಮಲ್ಲಿ ಮಾತ್ರವಲ್ಲ ಅಮೆರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಯಾವುದನ್ನು ಮುಟ್ಟಿದ್ರೂ ಕೈ ಸುಟ್ಟುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಉಬರ್ ಪ್ರಯಾಣಿಕನೊಬ್ಬನಿಗೆ ಉಬರ್ ಪ್ರಯಾಣ ದುಬಾರಿಯಾಗಿ ಪರಿಣಮಿಸಿದೆ.
ಬೆಂಗಳೂರಿನಂತಹ ಮೆಟ್ರೋ ಸಿಟಿಯಲ್ಲಿ ನಮ್ಮ ಪ್ರಯಾಣ ಸುಲಭವಾಗಿದೆ. ಮೆಟ್ರೋ ಜೊತೆಗೆ ಉಬರ್, ಓಲಾ, ರ್ಯಾಪಿಡೋಗಳು ನಾವು ಇರುವ ಜಾಗಕ್ಕೆ ಬಂದು ನಮ್ಮನ್ನು ಪಿಕ್ ಮಾಡುತ್ವೆ. ರೂಟ್ ಮ್ಯಾಪ್ ಹಾಕಿ ಕುಳಿತ್ರೆ ನಮ್ಮ ಗಮ್ಯ ಸ್ಥಾನಕ್ಕೆ ನಮ್ಮನ್ನು ತಲುಪಿಸುತ್ತವೆ. ಬೆಂಗಳೂರಿನ ಬಗ್ಗೆ ಹೆಚ್ಚು ಜ್ಞಾನವಿಲ್ಲದ ಜನರು ಕೂಡ ಈ ಆನ್ಲೈನ್ ಸಾರಿಗೆ ಸೇವೆಯನ್ನು ಪಡೆಯಬಹುದು.
ಈಗಿನ ದಿನಗಳಲ್ಲಿ ಬೆಂಗಳೂರು (Bangalore) ಸೇರಿದಂತೆ ಮಹಾ ನಗರಗಳಲ್ಲಿ ಇದನ್ನು ಬಳಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಖರ್ಚು ಕೂಡ ಹೆಚ್ಚು ಬರ್ತಿದೆ ಎನ್ನುವ ಆರೋಪ ಕೇಳಿ ಬರ್ತಿದೆ. ಸಾಮಾನ್ಯ ಆಟೋದಲ್ಲಿ ನೀವು ಎರಡು ಕಿಲೋಮೀಟರ್ ಪ್ರಯಾಣ ಬೆಳೆಸಿದ್ರೆ 30 ರೂಪಾಯಿ ನೀಡ್ಬೇಕು. ಅದೇ ಓಲಾ (Ola) ಅಥವಾ ಉಬರ್ (Uber )ನಲ್ಲಿ ಪ್ರಯಾಣ ಬೆಳೆಸಿದ್ರೆ 39 ರೂಪಾಯಿಯಾಗುತ್ತದೆ. ಹಾಗಾಗಿ ಕೆಲ ದಿನಗಳ ಹಿಂದೆ ಇದನ್ನು ವಿರೋಧಿಸಿ ಪ್ರತಿಭಟನೆ ಕೂಡ ನಡೆದಿತ್ತು. ಹಿಂದಿನ ವರ್ಷ ಸರ್ಕಾರ, ಓಲಾ, ಉಬರ್ ಬೆಲೆ ಏರಿಕೆಗೆ ಅನುಮತಿ ಕೂಡ ನೀಡಿತ್ತು. ಪ್ರಯಾಣ ದರದ ಜೊತೆ ಜಿಎಸ್ಟಿ, ಸೇವಾ ಶುಲ್ಕ ಸೇರ್ಪಡೆಯಾಗಿರುವ ಕಾರಣ ಅಪ್ಲಿಕೇಷನ್ ಆಧಾರಿತ ವಾಹನಗಳ ಬಾಡಿಗೆ ಹೆಚ್ಚಾಗಿದೆ.
ವಾರಸುದಾರರಿಲ್ಲದ 48000 ಕೋಟಿ ಹಣ ಶಿಕ್ಷಣ, ಜಾಗೃತಿ ನಿಧಿಗೆ ವರ್ಗ: ಕೇಂದ್ರ
ನಾವಿಲ್ಲಿ ಒಂಬತ್ತು, ಹತ್ತು ರೂಪಾಯಿ ಹೆಚ್ಚಿಗೆ ನೀಡಲು ಕಷ್ಟಪಡ್ತಿದ್ದೇವೆ. ಆದ್ರೆ ಅಮೆರಿಕಾದಲ್ಲಿ ಇದು ಮತ್ತಷ್ಟು ಹೆಚ್ಚಿದೆ. ಕೇವಲ 4 ಕಿಲೋಮೀಟರ್ ಪ್ರಯಾಣ ಬೆಳೆಸಿದ ಉಬರ್ ಗ್ರಾಹಕ 4 ಸಾವಿರ ರೂಪಾಯಿ ಪಾವತಿಸಬೇಕಾಗಿದೆ. ಈ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.
ಉಬರ್‌ನ ಸಿಇಒ ದಾರ ಖೋಸ್ರೋಶಾಹಿ ಜೊತೆ ನಡೆದ ಸಂದರ್ಶನವೊಂದರಲ್ಲಿ ಆಸಕ್ತಿದಾಯಕ ಘಟನೆ ಹೊರ ಬಿದ್ದಿದೆ. ವೈರ್ಡ್‌ನ ಸಂಪಾದಕ ಸ್ಟೀವನ್ ಲೆವಿ, ಉಬರ್ ಸಿಇಒ ದಾರ ಖೋಸ್ರೋಶಾಹಿ ಅವರ ಸಂದರ್ಶನ ಮಾಡಿದ್ದಾರೆ. ಈ ವೇಳೆ ಸ್ಟೀವನ್ ಲೆವಿ, ಉಬರ್‌ನ ಸಿಇಒ ಅವರನ್ನು ದರದ ಬಗ್ಗೆ ಕೇಳಿದ್ದಾರೆ. ಅಲ್ಲದೆ ಬಿಲ್ ಒಂದನ್ನು ತೋರಿಸಿದ್ದಾರೆ. ಬಿಲ್ ನಲ್ಲಿ ಪ್ರಯಾಣಿಕನೊಬ್ಬ ಡೌನ್‌ಟೌನ್ ನ್ಯೂಯಾರ್ಕ್ ಸಿಟಿ ಅಪಾರ್ಟ್‌ಮೆಂಟ್‌ನಿಂದ ಕೇವಲ 4 ಕಿಲೋಮೀಟರ್ ಪ್ರಯಾಣಕ್ಕೆ 4,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಪಾವತಿಸಿರೋದು ತಿಳಿದು ಬರುತ್ತದೆ. ಇದ್ರಲ್ಲಿ ಚಾಲಕನ ಟಿಪ್ಸ್ ಕೂಡ ಸೇರಿದೆ.
ಬಿಲ್ ನೋಡಿದ ನಂತ್ರ ಉಬರ್ ಸಿಇಒ ದಾರ ಖೋಸ್ರೋಶಾಹಿ ಅಚ್ಚರಿಗೊಳಗಾಗ್ತಾರೆ. ಓ ಮೈ ಗಾಡ್ ಎಂದು ಉಚ್ಛರಿಸುತ್ತಾರೆ. ನಂತ್ರ ಇದನ್ನು ಅವರು ಸಮರ್ಥಿಸಿಕೊಳ್ತಾರೆ. ನಾಲ್ಕು ಕಿಲೋಮೀಟರ್ ಗೆ ಸುಮಾರು 52 ಡಾಲರ್ ಅಂದ್ರೆ ನಾಲ್ಕು ಸಾವಿರದಎರಡು ನೂರಾ ತೊಂಭತ್ತನಾಲ್ಕು ರೂಪಾಯಿ ಪಾವತಿ ಮಾಡಿದ್ದು ಸರಿ ಇದೆ ಎಂದು ಉಬರ್ ಸಿಇಒ ಸಮರ್ಥನೆ ನೀಡಿದ್ದಾರೆ.
Zomato ಮೂಲಕ 60 ರೂ. ಮೌಲ್ಯದ ಫುಡ್ ಆರ್ಡರ್ ಮಾಡಿದ ಮಹಿಳೆಗೆ ಕಂಟೇನರ್ ಚಾರ್ಜ್‌ಗೂ 60 ರೂ. ಶುಲ್ಕ: ಟ್ವೀಟ್ ವೈರಲ್
ಹಣದುಬ್ಬರದಿಂದ ಇಂತಹ ಪರಿಸ್ಥಿತಿ ಎದುರಾಗಿದೆ. ಎಲ್ಲ ವಸ್ತುಗಳ ಬೆಲೆಯೂ ದುಬಾರಿಯಾಗುತ್ತಿದೆ. 2018ರಿಂದ 2022ರವರೆಗೆ ಶೇಕಡಾ 80ರಷ್ಟು ಬಾಡಿಗೆ ಹೆಚ್ಚಾಗಿದೆ. ಹಾಗಾಗಿ ಯಾವುದೇ ಶುಲ್ಕ ಹೆಚ್ಚಳ ಅಥವಾ ಕಡಿಮೆ ಮಾಡುವ ಶಕ್ತಿ ಉಬರ್ ಗೆ ಇಲ್ಲ ಎಂದು ಉಬರ್ ಸಿಇಒ ಹೇಳಿದ್ದಾರೆ. ಹಣದುಬ್ಬರ ಅಮೆರಿಕ ಮಾತ್ರವಲ್ಲ ಭಾರತಕ್ಕೂ ತಟ್ಟಿದೆ. ಮುಂಗಾರು, ಹಬ್ಬ ಅಥವಾ ಹೆಚ್ಚಿನ ಬೇಡಿಕೆ ಬಂದಾಗಲೆಲ್ಲಾ ಪ್ರಯಾಣ ದರದಲ್ಲಿ ಹೆಚ್ಚಳ ಆಗೋದನ್ನು ನಾವು ನೋಡ್ಬಹುದು. ಭಾರತದಲ್ಲಿ ಈಗ ಹಾಲಿನಿಂದ ಹಿಡಿದು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರ ಜೀವನ ದುಸ್ಥರವಾಗಿದೆ. ನೋಯ್ಡಾದಂತಹ ನಗರದಲ್ಲಿ ಕೇವಲ 15 ಕಿಲೋಮೀಟರ್ ಪ್ರಯಾಣಕ್ಕೆ ಪ್ರಯಾಣಿಕರು 700 ರೂಪಾಯಿಯಿಂದ 800 ರೂಪಾಯಿ ಶುಲ್ಕ ಪಾವತಿ ಮಾಡ್ತಿದ್ದಾರೆ.
