ಭಾರತ ಹಾಗೂ ಯುಎಇ ಜಂಟಿಯಾಗಿ ಅರಬ್ ರಾಷ್ಟ್ರದಲ್ಲಿ UAE ಭಾರತ ವ್ಯಾಪರ ಮಂಡಳಿ ಘಟಕ ಆರಂಭಿಸಿದೆ. ಈ ಮೂಲಕ ಭಾರತ ಹಾಗೂ ಯುಎಇ ಹೂಡಿಕೆ ಮತ್ತು ವ್ಯಾಪರ ವೃದ್ಧಿಗೆ ಮಹತ್ವದ ಮೈಲಿಗಲ್ಲಾಗಿದೆ.

ನವದೆಹಲಿ(ಫೆ.18); ಭಾರತ ಹಾಗೂ ಯುಎಇ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆಗೆ ಒಂದು ವರ್ಷದ ಸಂಭ್ರಮ. ಈ ವರ್ಚಾಚರಣೆ ಸಂಭ್ರಮದಲ್ಲಿ ಭಾರತ ಹಾಗೂ ಯುಎಇ ಮಹತ್ವದ ಹೆಜ್ಜೆ ಇಟ್ಟಿದೆ. ಉಭಯ ರಾಷ್ಟ್ರಗಳ ಹೂಡಿಕೆ ಮತ್ತು ವ್ಯಾಪಾರ ವಹಿವಾಟಿಗೆ ಮತ್ತಷ್ಟು ವೇಗ ನೀಡಲು ಇದೀಗ ಯಎಐ ಭಾರತ ವ್ಯಾಪರ ಮಂಡಳಿ ಯುಎಇ ಘಟಕ(UIBC-UC ) ಆರಂಭಿಸಿದೆ. ಈ ಘಟಕದ ಮೂಲಕ ಭಾರತ ಹಾಗೂ ಅರಬ್ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವಹಿವಾಟು, ಹೂಡಿಕೆಯನ್ನು ಬಲಗೊಳಿಸುವ ಮೂಲಕ ಆರ್ಥಿಕ ಚೇತರಿಕೆ ಹಾಗೂ ತ್ವರಿತ ಅಭಿವದ್ಧಿಗೆ ಪೂರಕ ವಾತಾವರಣ ನಿರ್ಮಿಸುವ ಗುರಿ ಇಟ್ಟುಕೊಂಡಿದೆ. ಯುಎಇ ವಿದೇಶಾಂಗ ವ್ಯವಹಾರ ಸಚಿವ ಡಾ. ತನಿ ಬಿನ್ ಅಹಮ್ಮದ್ ಎಐ ಝೆಯೌದಿ, ಯುಎಇ ಭಾರತದ ರಾಯಭಾರಿ ಸಂಜಯ್ ಸುಧೀರ್, ದುಬೈನಲ್ಲಿರುವ ಭಾರತದ ಕೌನ್ಸಿಲ್ ಜನರಲ್ ಡಾ. ಅಮನ್ ಪುರಿ ಹಾಗೂ UIBC-UC ಸಂಸ್ಥಾಪಕ ಸದಸ್ಯರ ಸಮ್ಮುಖದಲ್ಲಿ ಈ ಘಟಕ ಆರಂಭಿಸಲಾಗಿದೆ.

ನೂತನವಾಗಿ ಆರಂಭಿಸಿರುವ ಭಾರತ ವ್ಯಾಪರ ಮಂಡಳಿ ಯುಎಇ ಘಟಕದ ಮೂಲಕ ಉಭಯ ರಾಷ್ಟ್ರಗಳು 100 ಬಿಲಿಯನ್ ಅಮೆರಿಕನ್ ಡಾಲರ್ ವ್ಯಾಪಾರ ವಹಿವಾಟು ಹಾಗೂ 75 ಬಿಲಿಯನ್ ಹೂಡಿಕೆ ಗುರಿ ಇಟ್ಟುಕೊಂಡಿದೆ. UIBC-UC ಘಟಕ ಭಾರತ ಹಾಗೂ ಯುಎಇ ಸರ್ಕಾರದ ನಡುವೆ ಮಹತ್ವದ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ. ಇದರಿಂದ ಭಾರತ ಹಾಗೂ ಯುಎಇ ನಡುವಿನ ಎಲ್ಲಾ ವ್ಯಾಪರ ವಹಿವಾಟು, ಹೂಡಿಕೆ ವಿಚಾರಗಳನ್ನು ನೂತನವಾಗಿ ಆರಂಭಿಸಿರುವ UIBC-UC ಘಟಕ ನಿರ್ವಹಣೆ ಮಾಡಲಿದೆ. ಇದರಿಂದ ಉಭಯ ರಾಷ್ಟ್ರಗಳ ನಡುವಿನ ವ್ಯಾಪರ ವಹಿವಾಟು ಹಾಗೂ ಹೂಡಿಕೆ ಒಪ್ಪಂದಗಳು ತ್ವರಿತಗತಿಯಲ್ಲಿ ಅನುಮೋದನೆ ಸಿಗಲಿದೆ. UIBC-UC ಘಟಕ ಉಭಯ ರಾಷ್ಟ್ರಗಳ ಉದ್ಯಮಿಗಳು, ಸ್ಟೇಕ್‌ಹೋಲ್ಡರ್ಸ್, ಪಾರ್ಟ್ನರ್ಸ್ ಜೊತೆಗೂಡಿ ಕಾರ್ಯನಿರ್ವಹಿಸಲಿದೆ.

ದುಬೈಯಿಂದ ಭಾರತಕ್ಕೆ ತೆರಿಗೆಯಿಲ್ಲದೆ ಎಷ್ಟು ಚಿನ್ನ ತರಬಹುದು ಗೊತ್ತಾ?

ನೂತನ UIBC-UC ಘಟಕ ಉದ್ಘಾಟನೆ ಬಳಿಕ ಮಾತನಾಡಿದ ಯುಎಇ ವಿದೇಶಾಂಗ ವ್ಯವಹಾರ ಸಚಿವ ಡಾ. ತನಿ ಬಿನ್ ಅಹಮ್ಮದ್ ಎಐ ಝೆಯೌದಿ, ಈ ಘಟಕ ಭಾರತ ಹಾಗೂ ಅರಬ್ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದಿದ್ದಾರೆ. ಈಗಾಗಲೇ ಭಾರತ ಹಾಗೂ ಯುಎಇ ರಾಜತಾಂತ್ರಿಕವಾಗಿ ಮಾತ್ರವಲ್ಲ, ಎಲ್ಲಾ ವಲಯದಲ್ಲೂ ಆತ್ಮೀಯ ಸಂಬಂಧ ಹೊಂದಿದೆ. ನೂತನ UIBC-UC ಭಾರತ ಹಾಗೂ ಯುಎಇ ಸರ್ಕಾರದ ನಡುವಿನ ಒಪ್ಪಂದಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಡಾ. ತನಿ ಬಿನ್ ಅಹಮ್ಮದ್ ಹೇಳಿದ್ದಾರೆ. ಈ ಘಟಕ ವ್ಯಾಪಾರ ವಹಿವಾಟು ಹಾಗೂ ಹೂಡಿಕೆ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ನಡುವೆ ಹೊಸ ಅಧ್ಯಾಯ ಬರೆಯುವ ವಿಶ್ವಾಸವಿದೆ ಎಂದರು.

Scroll to load tweet…

ಭಾರತ ಹಾಗೂ ಯುಎಇ ನಡುವಿನ ಸಂಬಂಧ ಗಟ್ಟಿಗೊಳಿಸುವ UIBC-UC ಘಟಕ ಒಂದು ಮಹತ್ವದ ಮೈಲಿಗಲ್ಲು. ಈ ಘಟಕ ಭಾರತ ಸರ್ಕಾರ ಹಾಗೂ ಯುಎಇ ನಡುವಿನ ಎಲ್ಲಾ ವಹಿವಾಟುಗಳ ಕಾರ್ಯಯೋಜನೆ ರೂಪಿಸಲಿದೆ. ಈ ಸಂದರ್ಭದಲ್ಲಿ UIBC-UC ಘಟಕದ ಎಲ್ಲಾ ಸಂಸ್ಥಾಪಕ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಘಟಕ ಉಭಯ ರಾಷ್ಟ್ರದ ನಡುವಿನ ವ್ಯಾಪಾರ ವಹಿವಾಟಿನ ಮಾದರಿ ಘಟಕವಾಗಲಿದೆ ಎಂದು ಯುಎಇನ ಭಾರತದ ರಾಯಭಾರಿ ಸಂಜಯ್ ಸುಧೀರ್ ಹೇಳಿದ್ದಾರೆ.

ಕಡಿಮೆ ಬೆಲೆಯಲ್ಲಿ ತೈಲ ಖರೀದಿಯ ಬಳಿಕ, ರಷ್ಯಾದ ಜೊತೆ ಭಾರತದ ಮತ್ತೊಂದು ಬೃಹತ್ ಒಪ್ಪಂದ!

UIBC-UC ಘಟಕದ ಕಚೇರಿ ಅಬು ಧಾಬಿಯಲ್ಲಿ ತೆರೆಯಲಾಗಿದೆ.ಅಬುಧಾಬಿ ಕಚೇರಿಯಿಂದ ಅರಬ್ ಎಮಿರೈಟ್ಸ್‌ನ ವ್ಯಾಪಾರ ವಹಿವಾಟು ಹಾಗೂ ಹೂಡಿಕೆ ಒಪ್ಪಂದಗಳನ್ನು ನೋಡಿಕೊಳ್ಳಲಿದೆ. ಯಎಐ ಭಾರತ ವ್ಯಾಪರ ಮಂಡಳಿ ಭಾರತದ ಘಟಕವನ್ನು 2015ರಲ್ಲಿ ಆರಂಭಿಸಲಾಗಿದೆ. ಇದೀಗ ಯುಎಇ ಘಟಕ ಆರಂಭಗೊಂಡಿದೆ.