ದುಬೈ ಅಂದ್ರೆ ಬಂಗಾರದ ನಗರಿ. ಇಲ್ಲಿ ಚಿನ್ನದ ಬೆಲೆ ಇತರ ರಾಷ್ಟ್ರಗಳಿಗಿಂತ ಕಡಿಮೆ. ಅಲ್ಲದೆ, ಚಿನ್ನ ಖರೀದಿ ಮೇಲೆ ವ್ಯಾಟ್, ಮಾರಾಟ ತೆರಿಗೆ ಯಾವುದೂ ಅನ್ವಯಿಸೋದಿಲ್ಲ. ಹೀಗಿರೋವಾಗ ದುಬೈಗೆ ಹೋದವರು ಭಾರತಕ್ಕೆ ಹಿಂತಿರುಗುವಾಗ ಎಷ್ಟು ಚಿನ್ನ ತರಬಹುದು? ಎಂಬ ಪ್ರಶ್ನೆ ಅನೇಕರನ್ನು ಕಾಡಬಹುದು. ಅದಕ್ಕೆ ಇಲ್ಲಿದೆ ಉತ್ತರ.
Business Desk: ಚಿನ್ನಕ್ಕೂ ಭಾರತೀಯರಿಗೂ ಬಿಡಿಸಲಾಗದ ನಂಟು. ಚಿನ್ನ ಬರೀ ಆಭರಣಕ್ಕಷ್ಟೇ ಸೀಮಿತವಾಗಿಲ್ಲ. ಬದಲಿಗೆ ಅದೊಂದು ಶುಭಕಾರಕ ಎಂಬ ಪ್ರತೀತಿ ಕೂಡ ಇದೆ. ಇದೇ ಕಾರಣಕ್ಕೆ ಮದುವೆ, ನಾಮಕರಣ, ಪೂಜೆ, ಪುನಸ್ಕಾರ ಎಲ್ಲ ಸಂದರ್ಭಗಳಲ್ಲೂ ಚಿನ್ನ ಇದ್ರೇನೆ ಮೆರುಗು. ಹೆಂಗಳೆಯರಿಗಂತೂ ಮೈ ಮೇಲೆ ಚಿನ್ನದೊಡವೆ ಇಲ್ಲದಿದ್ರೆ ಅಲಂಕಾರವೇ ಅಪೂರ್ಣ. ಇನ್ನು ಚಿನ್ನವನ್ನು ಅಪತ್ಬಾಂಧವ ಎಂದು ಕೂಡ ಪರಿಗಣಿಸಲಾಗುತ್ತದೆ. ಕಷ್ಟಕಾಲದಲ್ಲಿ ಚಿನ್ನ ಕೈಹಿಡಿಯುತ್ತೆ ಎಂಬ ನಂಬಿಕೆ ಅನೇಕರಿಗಿದೆ. ಇನ್ನು ಹೂಡಿಕೆ ದೃಷ್ಟಿಯಿಂದಲೂ ಚಿನ್ನದ ಮೇಲೆ ಹಣ ಹಾಕೋರು ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತ ಕಂಡುಬರುತ್ತಿದೆ. ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಅಮೆರಿಕದ ಫೆಡರಲ್ ರಿಸರ್ವ್ ಇತ್ತೀಚಿಗೆ ಇನ್ನೊಮ್ಮೆ ಬಡ್ಡಿದರ ಏರಿಕೆ ಮಾಡುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಚಿನ್ನದ ಬೆಲೆ ಬೆಂಬಲ ಬೆಲೆ ಮಟ್ಟ ತಲುಪಲು ಕೂಡ ಕಷ್ಟ ಪಡುತ್ತಿದೆ ಎಂಬ ಸ್ಥಿತಿ ಕೆಲವು ರಾಷ್ಟ್ರಗಳಲ್ಲಿದೆ. ಆದರೆ, ಚಿನ್ನದ ಬೆಲೆ ಇಳಿಕೆ ಭಾರತದ ಚಿಲ್ಲರೆ ಹೂಡಿಕೆದಾರರಿಗೆ ಸಂತಸ ತಂದಿದೆ. ಕಡಿಮೆ ಬೆಲೆಗೆ ಚಿನ್ನ ಖರೀದಿಸಲು ಹೂಡಿಕೆದಾರರಿಗೆ ಅವಕಾಶ ಸಿಕ್ಕಿದೆ. ಅಲ್ಲದೆ, ಅನೇಕ ಹೂಡಿಕೆದಾರರು ದುಬೈ ಹಾಗೂ ರಿಯಾದ್ ನಿಂದ ಚಿನ್ನ ಆಮದು ಮಾಡಿಕೊಳ್ಳಲು ಎದುರು ನೋಡುತ್ತಿದ್ದಾರೆ. ಇದಕ್ಕೆ ಕಾರಣ ದುಬೈ ಹಾಗೂ ರಿಯಾದ್ ನಲ್ಲಿ ಚಿನ್ನದ ದರ ಭಾರತಕ್ಕಿಂತಲೂ ಕಡಿಮೆ.
ದುಬೈ ಚಿನ್ನದ ನಗರ ಎಂಬ ಜನಪ್ರಿಯತೆ ಗಳಿಸಿದೆ. ಇದಕ್ಕೆ ಕಾರಣ ಚಿನ್ನದ ಬೆಲೆ ಕಡಿಮೆ ಹಾಗೂ ಗುಣಮಟ್ಟ ಉತ್ತಮವಾಗಿರೋದು. ಇನ್ನು ದುಬೈ ತೆರಿಗೆ ಮುಕ್ತ ಸ್ವರ್ಗ. ಅಂದ್ರೆ ಇಲ್ಲಿ ಚಿನ್ನ ಖರೀದಿಸಿದ್ರೆ ವ್ಯಾಟ್ ಅಥವಾ ಮಾರಾಟ ತೆರಿಗೆ ಬೀಳೋದಿಲ್ಲ. ದುಬೈಯಿಂದ ಭಾರತಕ್ಕೆ ತೆರಿಗೆಯಿಲ್ಲದೆ ಎಷ್ಟು ಚಿನ್ನ ತರಬಹುದು? ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡೋದು ಸಹಜ.
ದುಬೈ ಹಾಗೂ ಸೌದಿ ಅರೇಬಿಯಾದಲ್ಲಿ ಭಾರತೀಯರು ಅನೇಕರು ವಾಸಿಸುತ್ತಿದ್ದಾರೆ ಕೂಡ. ಅಂಥವರು ಕೂಡ ಭಾರತಕ್ಕೆ ಮರಳುವಾಗ ಎಷ್ಟು ಚಿನ್ನವನ್ನು ತೆರಿಗೆ ಕಟ್ಟದೆ ತರಬಹುದು ಎಂಬ ಪ್ರಶ್ನೆ ಕೂಡ ಅನೇಕರನ್ನು ಕಾಡಬಹುದು.
ದೀಪಾವಳಿಗೆ ಏನಾದ್ರೂ ಖರೀದಿಸುವ ಪ್ಲ್ಯಾನ್ ಇದೆಯಾ? ಹಾಗಾದ್ರೆ ನೋ ಕಾಸ್ಟ್ ಇಎಂಐ ಬಗ್ಗೆ ನಿಮ್ಗೆ ತಿಳಿದಿರಲಿ
ದುಬೈಯಿಂದ ಭಾರತಕ್ಕೆ ತೆರಿಗೆಯಿಲ್ಲದೆ ಆಮದು ಮಾಡಿಕೊಳ್ಳುವ ಚಿನ್ನದ ಪ್ರಮಾಣ ಪುರುಷ ಹಾಗೂ ಮಹಿಳೆಯರನ್ನು ಅವಲಂಬಿಸಿದೆ. ನಿಯಮಗಳ ಪ್ರಕಾರ ದುಬೈಯಿಂದ ಪುರುಷನೊಬ್ಬ ಗರಿಷ್ಠ 20ಗ್ರಾಂ ಚಿನ್ನ ಆಮದು ಮಾಡಿಕೊಳ್ಳಬಹುದು. ಹಾಗೆಯೇ ಮಹಿಳೆ ಗರಿಷ್ಠ 40 ಗ್ರಾಂ ಚಿನ್ನವನ್ನು ತೆರಿಗೆಯಿಲ್ಲದೆ ದುಬೈಯಿಂದ ಭಾರತಕ್ಕೆ ತರಬಹುದು. ಇನ್ನು ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಭಾರತದಿಂದ ಹೊರಗಿರುವ ಮಕ್ಕಳು ಕೂಡ ತಮ್ಮೊಂದಿಗೆ ಭಾರತಕ್ಕೆ ದುಬೈಯಿಂದ ಚಿನ್ನ ತರಲು ಅವಕಾಶವಿದೆ.
ಚಿನ್ನಾಭರಣಗಳಿಗೆ ಮಾತ್ರ ಈ ಸುಂಕ ವಿನಾಯ್ತಿ ಅನ್ವಯಿಸುತ್ತದೆ. ಗಟ್ಟಿ ಅಥವಾ ಬಾರ್, ನಾಣ್ಯ ಸೇರಿದಂತೆ ಇತರ ರೂಪದಲ್ಲಿರುವ ಚಿನ್ನಕ್ಕೆ ಸೀಮಾ ಸುಂಕ ಅನ್ವಯಿಸುತ್ತದೆ. ಇನ್ನು ದುಬೈಯಿಂದ ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರು ಈ ಮೇಲೆ ತಿಳಿಸಿರುವ ಮಿತಿಗಿಂತ ಹೆಚ್ಚಿನ ಚಿನ್ನವನ್ನು ಭಾರತಕ್ಕೆ ತಂದರೆ ಅದರ ಮೇಲೆ ಸುಂಕ ವಿಧಿಸಲಾಗುತ್ತದೆ.
ಹಣ ತಪ್ಪಾಗಿ ಬೇರೆ ಯಾರದ್ದೋ ಖಾತೆಗೆ ವರ್ಗಾವಣೆ ಆಗಿದೆಯಾ? ಡೋಂಟ್ ವರಿ, ಹೀಗೆ ಮಾಡಿ
ಗರಿಷ್ಠ ಎಷ್ಟು ಚಿನ್ನ ತರಬಹುದು?
ಸುಂಕ ಪಾವತಿಸಿ ದುಬೈಯಿಂದ ಭಾರತಕ್ಕೆ ಗರಿಷ್ಠ ಎಷ್ಟು ಚಿನ್ನ ತರಬಹುದು ಎಂಬ ಪ್ರಶ್ನೆ ಕೂಡ ಅನೇಕರನ್ನು ಕಾಡಬಹುದು. ದುಬೈ ಅಥವಾ ವಿದೇಶಗಳಲ್ಲಿ ಆರಕ್ಕಿಂತ ಹೆಚ್ಚು ಸಮಯ ವಾಸಿಸಿರುವ ಜನರು ಗರಿಷ್ಠ ಒಂದು ಕೆಜಿ ತೂಕದ ಚಿನ್ನದ ನಾಣ್ಯಗಳು ಹಾಗೂ ಬಾರ್ ಗಳನ್ನು ಭಾರತಕ್ಕೆ ತರಬಹುದು. ಇದಕ್ಕೆ ಅವರು ನಿಗದಿಪಡಿಸಿರುವ ಸೀಮಾ ಸುಂಕ ಪಾವತಿಸಬೇಕು ಅಷ್ಟೆ.
