ಕಡಿಮೆ ಬೆಲೆಯಲ್ಲಿ ತೈಲ ಖರೀದಿಯ ಬಳಿಕ, ರಷ್ಯಾದ ಜೊತೆ ಭಾರತದ ಮತ್ತೊಂದು ಬೃಹತ್ ಒಪ್ಪಂದ!

ಭಾರತವು ರಷ್ಯಾದೊಂದಿಗೆ ಬಹು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಅಡಿಯಲ್ಲಿ ರಷ್ಯಾ ಭಾರತಕ್ಕೆ ರಸಗೊಬ್ಬರವನ್ನು ನೀಡುತ್ತದೆ. ರಸಗೊಬ್ಬರಗಳ ಬೆಲೆ ಏರಿಕೆಯ ನಡುವೆ ಭಾರತಕ್ಕೆ ಸಮಾಧಾನದ ಸುದ್ದಿ ಇದಾಗಿದೆ. ಭಾರತ ಮತ್ತು ರಷ್ಯಾ ನಡುವಿನ ಈ ಒಪ್ಪಂದವು ವಿನಿಮಯ ವ್ಯವಸ್ಥೆಯ ಅಡಿಯಲ್ಲಿ ನಡೆಯುತ್ತಿದೆ.

Americas threat neutralized after cheap oil India made another big deal with Russia with  barter system san

ನವದೆಹಲಿ (ಮೇ. 31):  ಉಕ್ರೇನ್ (Ukraine) ಮೇಲಿನ ರಷ್ಯಾದ (Russia) ದಾಳಿಯ ನಡುವೆ ಏರುತ್ತಿರುವ ರಸಗೊಬ್ಬರ (fertilizers) ಬೆಲೆಗಳು ಭಾರತದಂತಹ ಕೃಷಿ ಪ್ರಧಾನ  ( agricultural country )ದೇಶದ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿವೆ. ರಷ್ಯಾ ವಿಶ್ವದಲ್ಲೇ ಅತಿ ಹೆಚ್ಚು ರಸಗೊಬ್ಬರಗಳನ್ನು ಉತ್ಪಾದಿಸುವ ರಾಷ್ಟ್ರವಾಗಿದ್ದು, ನಿರ್ಬಂಧಗಳಿಂದಾಗಿ ಇನ್ನು ಮುಂದೆ ಜಾಗತಿಕ ಮಾರುಕಟ್ಟೆಗೆ ರಸಗೊಬ್ಬರಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ, ಇದು ರಸಗೊಬ್ಬರಗಳ ಬೆಲೆಯನ್ನು ಹೆಚ್ಚಿಸಿದೆ. 

ಇದರ ನಡುವೆ, ಭಾರತಕ್ಕೆ ದೊಡ್ಡ ಸಮಾಧಾನದ ಸುದ್ದಿ ಏನೆಂದರೆ, ರಷ್ಯಾದಿಂದ ಹೆಚ್ಚಿನ ಪ್ರಮಾಣದ ರಸಗೊಬ್ಬರ ಪೂರೈಕೆಗೆ ಭಾರತ ಅಂತಿಮ ಅನುಮೋದನೆ ನೀಡಿದೆ. ಅಧಿಕಾರಿಗಳ ಪ್ರಕಾರ, ವರ್ಷಗಳ ಕಾಲ ನಡೆದ ಈ ಆಮದು ಒಪ್ಪಂದದ ಮಾತುಕತೆಗಳನ್ನು ಅಂತಿಮಗೊಳಿಸಲಾಗಿದೆ.

ಉಕ್ರೇನ್ ಮೇಲೆ ದಾಳಿ ಮಾಡಿದ್ದಕ್ಕಾಗಿ ರಷ್ಯಾದ ಮೇಲೆ ಜಾಗತಿಕ ನಿಷೇಧವಿದೆ. ಇದರಿಂದಾಗಿ ಡಾಲರ್ ಗಳಲ್ಲಿ ರಷ್ಯಾ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ. ರಷ್ಯಾ ಜತೆಗಿನ ವ್ಯಾಪಾರ ವಹಿವಾಟಿನ ಬಗ್ಗೆ ಭಾರತಕ್ಕೆ ಅಮೆರಿಕ ಹಲವು ಬಾರಿ ಎಚ್ಚರಿಕೆ ನೀಡಲು ಪ್ರಯತ್ನಿಸಿದೆ. ಆದರೆ, ಭಾರತವು ತನ್ನ ಹಿತಾಸಕ್ತಿಗಳಿಗೆ ಅನುಗುಣವಾಗಿ ತನ್ನ ವಿದೇಶಾಂಗ ನೀತಿಯನ್ನು ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದೆ. ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳಿಂದಾಗಿ ಭಾರತ-ರಷ್ಯಾ ವ್ಯಾಪಾರಕ್ಕಾಗಿ ವಿನಿಮಯ ಪದ್ಧತಿಯನ್ನು ( barter system) ಅಳವಡಿಸಿಕೊಳ್ಳುತ್ತಿವೆ. ಇದರ ಅಡಿಯಲ್ಲಿ ಭಾರತವು ರಷ್ಯಾದಿಂದ ರಸಗೊಬ್ಬರಗಳನ್ನು ಖರೀದಿಸುತ್ತದೆ. ಪ್ರತಿಯಾಗಿ, ರಷ್ಯಾಕ್ಕೆ ಅದೇ ಮೌಲ್ಯದ ಚಹಾ, ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳು ಮತ್ತು ವಾಹನ ಭಾಗಗಳನ್ನು ನೀಡಲಾಗುತ್ತದೆ.

ಭಾರತವು ತನ್ನ ರಸಗೊಬ್ಬರ ಅಗತ್ಯಗಳಿಗಾಗಿ ಆಮದಿನ ಮೇಲೆ ಅವಲಂಬಿತವಾಗಿದೆ: ಭಾರತದ ಬಹುಪಾಲು ಜನಸಂಖ್ಯೆಯು ಕೃಷಿಯ ಮೇಲೆ ಅವಲಂಬಿತವಾಗಿದೆ. ಭಾರತದ $2.7 ಬಿಲಿಯನ್ ಆರ್ಥಿಕತೆಯ 15% ರಷ್ಟು ಕೃಷಿಯನ್ನು ಹೊಂದಿದೆ. ರಸಗೊಬ್ಬರಗಳ ಆಮದು ರಷ್ಯಾ -ಉಕ್ರೇನ್ ಯುದ್ಧದ ಕಾರಣದಿಂದಾಗಿ ಪರಿಣಾಮ ಬೀರಿದ್ದು, ಇದು ರೈತರ ಮೇಲೆ ಹೊರೆ ಹೆಚ್ಚಿಸಿದೆ.

ಫೆಬ್ರವರಿಯಲ್ಲೇ ರಷ್ಯಾದಿಂದ ರಸಗೊಬ್ಬರ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿತ್ತು. ರಸಗೊಬ್ಬರಗಳ ಬೆಲೆಯನ್ನು ಕಡಿಮೆ ಮಾಡಲು ರಷ್ಯಾ ಸರ್ಕಾರದೊಂದಿಗೆ ಭಾರತ ಸರ್ಕಾರವು ದೀರ್ಘಕಾಲದ ಒಪ್ಪಂದವಾಗಿದ್ದು, ತಿಂಗಳುಗಳ ನಂತರ ಇದೀಗ ಅಂತಿಮ ಹಂತದಲ್ಲಿದೆ. ಭಾರತ ಮತ್ತು ರಷ್ಯಾ ನಡುವಿನ ಈ ವ್ಯಾಪಾರ ಒಪ್ಪಂದದ ಕುರಿತು, ಆಸ್ಟ್ರಿಯಾದ ವಿದೇಶಾಂಗ ನೀತಿ ಚಿಂತಕರ ಚಾವಡಿ ಎಐಇಎಸ್‌ನ ನಿರ್ದೇಶಕಿ ವೆಲಿನಾ ಟ್ಚಕರೋವಾ ಅವರು ಟ್ವೀಟ್ ಮಾಡಿದ್ದಾರೆ, 'ಭಾರತವು 1 ಮಿಲಿಯನ್ ಟನ್ ರಷ್ಯಾದ ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ಮತ್ತು ಪೊಟ್ಯಾಶ್ ಅನ್ನು ಆಮದು ಮಾಡಿಕೊಳ್ಳುತ್ತದೆ. ರಷ್ಯಾ ಡಿಎಪಿ ಮತ್ತು ಪೊಟ್ಯಾಶ್‌ನ ಎರಡನೇ ಅತಿ ದೊಡ್ಡ ಖರೀದಿದಾರ. ಭಾರತವು ಪ್ರತಿ ವರ್ಷ ಸುಮಾರು 8 ಲಕ್ಷ ಟನ್ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ಅನ್ನು ರಷ್ಯಾದಿಂದ ಖರೀದಿಸುತ್ತದೆ.
 

ನಿರ್ಬಂಧದ ನಡುವೆಯೂ ರಷ್ಯಾದಿಂದ ಈವರೆಗಿನ ದಾಖಲೆಯ ಪ್ರಮಾಣದ ತೈಲ ಭಾರತಕ್ಕೆ ಸಾಗಣೆ!

ರಷ್ಯಾದ ರಸಗೊಬ್ಬರಗಳ ಆಮದು ಭಾರತದ ಕಾನೂನುಬದ್ಧ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಸೇರಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅದನ್ನು ಪೂರೈಸಲು ಭಾರತವು ಹಲವಾರು ವರ್ಷಗಳ ನಂತರ ರಸಗೊಬ್ಬರಕ್ಕಾಗಿ ಇಂತಹ ಬಹು-ವರ್ಷದ ಒಪ್ಪಂದವನ್ನು ಮಾಡಿಕೊಂಡಿದೆ. ರಷ್ಯಾದ ರಸಗೊಬ್ಬರಗಳಿಗೆ ಬದಲಾಗಿ ಭಾರತವು ಕೃಷಿ ಉತ್ಪನ್ನಗಳು, ವೈದ್ಯಕೀಯ ಉಪಕರಣಗಳು, ವಾಹನ ಬಿಡಿಭಾಗಗಳು ಮತ್ತು ಇತರ ವಸ್ತುಗಳನ್ನು ರಷ್ಯಾಗೆ ರಫ್ತು ಮಾಡಲಿದೆ ಎಂದು ಇನ್ನೊಬ್ಬ ಅಧಿಕಾರಿ ಮಾಹಿತಿ ನೀಡಿದರು.

ರಷ್ಯಾ ಯುದ್ಧ ಪರಿಣಾಮ ತಡೆಗೆ 13 ದೇಶಗಳ ಮಹತ್ವದ ಒಪ್ಪಂದ, ಅಗತ್ಯ ವಸ್ತು ಪೂರೈಕೆಗೆ ಒಪ್ಪಂದ!

ಉಕ್ರೇನ್ ಯುದ್ಧದಿಂದಾಗಿ ಜಾಗತಿಕವಾಗಿ ರಸಗೊಬ್ಬರಗಳ ಬೆಲೆಯಲ್ಲಿ ಜಿಗಿತದ ಮಧ್ಯೆ, ಏರುತ್ತಿರುವ ಬೆಲೆಗಳಿಂದ ರಕ್ಷಿಸಲು ರೈತರಿಗೆ 1.10 ಲಕ್ಷ ಕೋಟಿ ರೂಪಾಯಿಗಳ ಹೆಚ್ಚುವರಿ ರಸಗೊಬ್ಬರ ಸಬ್ಸಿಡಿಯನ್ನು ಸರ್ಕಾರವು ನೀಡಲಿದೆ ಎಂದು ಮೋದಿ ಸರ್ಕಾರವು ಮೇ 21 ರಂದು ಹೇಳಿದೆ. ಇದರೊಂದಿಗೆ ಸರ್ಕಾರದ ಒಟ್ಟು ರಸಗೊಬ್ಬರ ಸಬ್ಸಿಡಿ ಬಿಲ್ ಪ್ರಸಕ್ತ-ಆರ್ಥಿಕ ವರ್ಷದಲ್ಲಿ (2022-23) ದಾಖಲೆಯ 2.15 ಲಕ್ಷ ಕೋಟಿ ರೂ.ಗೆ ದ್ವಿಗುಣಗೊಂಡಿದೆ.

Latest Videos
Follow Us:
Download App:
  • android
  • ios