ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ತೀರ್ಪು ಸತ್ಯವು ಮೇಲುಗೈ ಸಾಧಿಸಿದೆ ಎಂದು ತೋರಿಸುತ್ತದೆ - ಸತ್ಯಮೇವ ಜಯತೆ ಎಂದು ಗೌತಮ್ ಅದಾನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. 

ನವದೆಹಲಿ (ಜನವರಿ 3, 2024): ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಇಂದು ಹಿಂಡನ್‌ಬರ್ಗ್ ವಿವಾದದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಸತ್ಯಮೇವ ಜಯತೆ (ಸತ್ಯದ ವಿಜಯ) ಎಂದು ಸ್ವಾಗತಿಸಿದ್ದಾರೆ. ಅಲ್ಲದೆ, ನಮ್ಮೊಂದಿಗೆ ನಿಂತವರಿಗೆ ಕೃತಜ್ಞರಾಗಿರುತ್ತೇನೆ ಎಂದು ಎಕ್ಸ್‌ (ಈ ಹಿಂದಿನ ಟ್ವಿಟ್ಟರ್‌) ನಲ್ಲಿ ತಿಳಿಸಿದ್ದಾರೆ. 

ಹಿಂಡನ್‌ಬರ್ಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿಯ ತನಿಖೆಯನ್ನು ಅನುಮಾನಿಸಲು ಜಾರ್ಜ್ ಸೊರೊಸ್ ನೇತೃತ್ವದ ಒಸಿಸಿಆರ್‌ಪಿ ವರದಿಯು ಆಧಾರವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಇದು ಅದಾನಿ ಸಂಸ್ಥೆಗೆ ವಿಜಯ ದೊರೆತಂತಾಗಿದೆ.

ಇದನ್ನು ಓದಿ: ಅದಾನಿ ಕೇಸ್‌ ತನಿಖೆ 3 ತಿಂಗಳಲ್ಲಿ ಪೂರ್ಣಗೊಳಿಸಿ; ಸೆಬಿ ತನಿಖೆ ಎತ್ತಿಹಿಡಿದ ಸುಪ್ರೀಂ; ಉದ್ಯಮಿಗೆ ತಾತ್ಕಾಲಿಕ ರಿಲೀಫ್‌

ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ತೀರ್ಪು ಸತ್ಯವು ಮೇಲುಗೈ ಸಾಧಿಸಿದೆ ಎಂದು ತೋರಿಸುತ್ತದೆ: ಸತ್ಯಮೇವ ಜಯತೆ. ನಮ್ಮ ಬೆಂಬಲಕ್ಕೆ ನಿಂತವರಿಗೆ ನಾನು ಕೃತಜ್ಞನಾಗಿದ್ದೇನೆ. ಭಾರತದ ಬೆಳವಣಿಗೆಯ ಕಥೆಗೆ ನಮ್ಮ ವಿನಮ್ರ ಕೊಡುಗೆ ಮುಂದುವರಿಯುತ್ತದೆ. ಜೈ ಹಿಂದ್ ಎಂದು ಅದಾನಿ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ. .

Scroll to load tweet…

ತೀರ್ಪು ಪ್ರಕಟಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸಲು ಯಾವುದೇ ಆಧಾರಗಳಿಲ್ಲ ಎಂದು ಹೇಳಿದೆ.

ಇದನ್ನು ಓದಿ: 2023 ಅದಾನಿಗೆ ಮರೆಯಲಾರದ ವರ್ಷ: ಮಾರುಕಟ್ಟೆ ಬಂಡವಾಳದಲ್ಲಿ 6 ಲಕ್ಷ ಕೋಟಿ ರೂ. ನಷ್ಟ!

ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಯುಎಸ್ ಮೂಲದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ಬರ್ಗ್ ರೀಸರ್ಚ್‌ನ ಆರೋಪಗಳಿಗೆ ಸಂಬಂಧಿಸಿದ 24 ಪ್ರಕರಣಗಳಲ್ಲಿ 22 ಪ್ರಕರಣಗಳನ್ನು ತನಿಖೆ ಮಾಡಿದೆ. ಉಳಿದ ಎರಡು ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಲು ಸುಪ್ರೀಂಕೋರ್ಟ್ ಸೆಬಿಗೆ ಮೂರು ತಿಂಗಳ ಕಾಲಾವಕಾಶ ನೀಡಿದೆ.

ಯುಎಸ್ ಮೂಲದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ಬರ್ಗ್ ರಿಸರ್ಚ್‌ನ ಆರೋಪಗಳ ನಂತರ ಅದಾನಿ ಗ್ರೂಪ್‌ ಸಂಸ್ಥೆಗಳ ಮೌಲ್ಯ ತೀವ್ರ ಕುಸಿತ ಕಂಡ ದಿನಗಳ ನಂತರ ಅದಾನಿ ಗ್ರೂಪ್ ಷೇರುಗಳ ಮೌಲ್ಯ ಮತ್ತೆ ಸಾಕಷ್ಟು ಚೇತರಿಕೆ ಕಂಡಿದೆ. ಮತ್ತೊಂದು ಪ್ರಮುಖ ಗೆಲುವಿನಲ್ಲಿ, ಹಿಂಡೆನ್‌ಬರ್ಗ್ ಮಾರುಕಟ್ಟೆಯನ್ನು ಕಡಿಮೆ ಮಾಡುವಲ್ಲಿ ನಿಯಮಗಳನ್ನು ನಿರ್ಲಕ್ಷಿಸಿದೆಯೇ ಎಂದು ಪರಿಶೀಲಿಸಲು ಮತ್ತು ಅದರ ಪ್ರಕಾರ ಕ್ರಮ ಕೈಗೊಳ್ಳಲು ಸರ್ಕಾರ ಮತ್ತು SEBI ಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. 

ಸಾಧನೆ-ವಿವಾದ, ಈ ವರ್ಷ ಸದ್ದು ಮಾಡಿದ ದಿಗ್ಗಜರ ಸಾಲಿನಲ್ಲಿ ಎಸ್ ಸೋಮನಾಥ್- ಅದಾನಿ ಟಾಪ್!