2023 ಅದಾನಿಗೆ ಮರೆಯಲಾರದ ವರ್ಷ: ಮಾರುಕಟ್ಟೆ ಬಂಡವಾಳದಲ್ಲಿ 6 ಲಕ್ಷ ಕೋಟಿ ರೂ. ನಷ್ಟ!
ಎಲ್ಲಾ 10 ಲಿಸ್ಟೆಡ್ ಅದಾನಿ ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯವು 2022 ರ ಅಂತ್ಯದ ವೇಳೆಗೆ 19.6 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಆದರೀಗ 13.6 ಲಕ್ಷ ಕೋಟಿ ರೂಪಾಯಿಗಳಿಗೆ ಇಳಿದಿದೆ.
ಹಿಂಡೆನ್‌ಬರ್ಗ್ ವಿವಾದದಿಂದಾಗಿ ಅದಾನಿ ಸಮೂಹದ ಸಂಘಟಿತ ಕಂಪನಿಯ ಮಾರುಕಟ್ಟೆ ಬಂಡವಾಳವು ಸರಿಸುಮಾರು 6 ಲಕ್ಷ ಕೋಟಿ ರೂಪಾಯಿಗಳಷ್ಟು ಕುಸಿದಿದೆ. ಈ ಮೂಲಕ ಅದಾನಿ ಷೇರುಗಳಲ್ಲಿನ ಹೂಡಿಕೆದಾರರು 2023 ರಲ್ಲಿ ಭಾರಿ ಹಿನ್ನೆಡೆ ಅನುಭವಿಸಿದ್ದಾರೆ.
ಎಲ್ಲಾ 10 ಲಿಸ್ಟೆಡ್ ಅದಾನಿ ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯವು 2022 ರ ಅಂತ್ಯದ ವೇಳೆಗೆ 19.6 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಆದರೀಗ 13.6 ಲಕ್ಷ ಕೋಟಿ ರೂಪಾಯಿಗಳಿಗೆ ಇಳಿದಿದೆ.
ಕೆಲವು ಅದಾನಿ ಕಂಪನಿಯ ಸ್ಟಾಕ್‌ಗಳು ತಮ್ಮ ನಷ್ಟದ ಭಾಗವನ್ನು ಚೇತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ, ಅದಾನಿ ಟೋಟಲ್ ಗ್ಯಾಸ್ YTD ಆಧಾರದ ಮೇಲೆ 74% ನಷ್ಟು ಕಡಿಮೆಯಾಗಿದೆ. ಈ ಹಿಂದೆ 4,000 ರೂ. ಗಡಿ ತಲುಪಿದ್ದ ಷೇರುಗಳ ಮೌಲ್ಯವೀಗ 1000 ರೂ. ಗಡಿ ದಾಟಲು ಸಹ ಹೆಣಗಾಡುತ್ತಿದೆ.
ಇನ್ನು, ಅದಾನಿ ಎನರ್ಜಿ ಸೊಲ್ಯೂಷನ್ಸ್ ಸಹ 61% YTD ಕಡಿಮೆಯಾಗಿದೆ. ಹಾಗೂ, ಫಾರ್ಚೂನ್ ಖಾದ್ಯ ತೈಲಗಳು ಮತ್ತು ಪ್ಯಾಕೇಜ್ ಮಾಡಿದ ದಿನಸಿ ಮಾಲೀಕರಾದ ಅದಾನಿ ವಿಲ್ಮಾರ್ ಈ ವರ್ಷ ತನ್ನ ಮೌಲ್ಯದ ಸುಮಾರು 44% ನಷ್ಟು ಕಳೆದುಕೊಂಡಿದೆ.
ಹಾಗೂ, ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ತನ್ನ ಮೌಲ್ಯದಲ್ಲಿ 28% ಕುಸಿತವನ್ನು ಕಂಡಿದ್ದರೆ, ಅದಾನಿ ಗ್ರೀನ್ ಎನರ್ಜಿ ಮತ್ತು NDTV ತಲಾ 24-25% ನಷ್ಟು ಕಡಿಮೆಯಾಗಿದೆ.
ಈ ಮಧ್ಯೆ, ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್ ಸಹ ಅದಾನಿ ಗುಂಪಿನ ಸಿಮೆಂಟ್ ಕಂಪನಿಗಳಾಗಿದೆ. ಇವುಗಳ ಮೇಲೆ ತುಲನಾತ್ಮಕವಾಗಿ ಕಡಿಮೆ ಪರಿಣಾಮ ಬೀರಿವೆ.
ಎಸಿಸಿ 15% ಕುಸಿತವನ್ನು ಅನುಭವಿಸುತ್ತಿದ್ದರೆ, ಅಂಬುಜಾ ತನ್ನ ಮಾರುಕಟ್ಟೆ ಬಂಡವಾಳೀಕರಣದ ಸುಮಾರು 6% ನಷ್ಟು ಹಣ ಕಳೆದುಕೊಂಡಿದೆ.
ಮತ್ತೊಂದೆಡೆ, ಅದಾನಿ ಪೋರ್ಟ್ಸ್ ಮತ್ತು ಅದಾನಿ ಪವರ್ 2023 ರಲ್ಲಿ ಪ್ರವರ್ಧಮಾನಕ್ಕೆ ಬಂದಿದೆ.. ಅದಾನಿ ಪೋರ್ಟ್ಸ್ ತನ್ನ ಷೇರಿನ ಬೆಲೆಯಲ್ಲಿ 24% ಮೌಲ್ಯ ಹೆಚ್ಚಿಸಿಕೊಂಡಿದ್ದರೆ, ಅದಾನಿ ಪವರ್ 70% ಆದಾಯದೊಂದಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಹೂಡಿಕೆದಾರರು ಏನು ಮಾಡಬೇಕು?
ಸುಪ್ರೀಂ ಕೋರ್ಟ್ ಅದಾನಿ-ಹಿಂಡೆನ್‌ಬರ್ಗ್ ವಿವಾದದ ಕುರಿತು ತನ್ನ ಆದೇಶವನ್ನು ಕಾಯ್ದಿರಿಸಿದ್ದರಿಂದ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾದ ಎಲ್ಲವನ್ನೂ ಶೇ. 100 ರಷ್ಟು ಸತ್ಯ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ ಬಳಿಕ ಅದಾನಿ ಷೇರುಗಳ ಮೌಲ್ಯ ಹೊಸ ಅಲೆಯ ಖರೀದಿಗೆ ಸಾಕ್ಷಿಯಾಗಿದೆ.
ಕಳೆದ ತಿಂಗಳಲ್ಲಿ ತನ್ನ ಷೇರುಗಳಲ್ಲಿ 64% ಹೆಚ್ಚಳವನ್ನು ಕಂಡಿರುವ ಅದಾನಿ ಗ್ರೀನ್ ಎನರ್ಜಿ, ವಿಸ್ತರಣೆ ಮತ್ತು ಮರುಹಣಕಾಸು ಅಗತ್ಯಗಳನ್ನು ಪೂರೈಸಲು ತನ್ನ ಸಂಸ್ಥಾಪಕರಿಗೆ ಆದ್ಯತೆಯ ಷೇರುಗಳನ್ನು ನೀಡಲು ಯೋಜಿಸಿದೆ.
ಕಳೆದ ತಿಂಗಳಲ್ಲಿ ತನ್ನ ಷೇರುಗಳಲ್ಲಿ 64% ಹೆಚ್ಚಳ ಕಂಡಿರುವ ಅದಾನಿ ಗ್ರೀನ್ ಎನರ್ಜಿ, ವಿಸ್ತರಣೆ ಮತ್ತು ಮರುಹಣಕಾಸು ಅಗತ್ಯಗಳನ್ನು ಪೂರೈಸಲು ತನ್ನ ಸಂಸ್ಥಾಪಕರಿಗೆ ಆದ್ಯತೆಯ ಷೇರುಗಳನ್ನು ನೀಡಲು ಯೋಜಿಸಿದೆ. ಕಂಪನಿಯು 2030 ರ ವೇಳೆಗೆ 45 ಗಿಗಾವ್ಯಾಟ್‌ಗಳ ಹಸಿರು ಇಂಧನ ಸಾಮರ್ಥ್ಯ ಸಾಧಿಸುವ ಗುರಿ ಹೊಂದಿದೆ.