Asianet Suvarna News Asianet Suvarna News

ಡೀಸೆಲ್‌ ವಾಹನಗಳ ಮೇಲೆ ಶೇ. 10ರಷ್ಟು ಹೆಚ್ಚುವರಿ ಜಿಎಸ್‌ಟಿ ಶಿಫಾರಸು, ಸ್ಪಷ್ಟೀಕರಣ ನೀಡಿದ ನಿತಿನ್‌ ಗಡ್ಕರಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಡೀಸೆಲ್‌ ವಾಹನಗಳ ಮೇಲೆ ಹೆಚ್ಚುವರಿ ಶೇ.10ರಷ್ಟು ಜಿಎಸ್‌ಟಿ ಹೇರುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಮಾಲಿನ್ಯ ತೆರಿಗೆ ಎನ್ನುವ ಹೆಸರಿನಲ್ಲಿ ಈ ಜಿಎಸ್‌ಟಿ ವಿಧಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Transport Minister Nitin Gadkari proposes 10 pc additional GST on diesel vehicles as pollution tax san
Author
First Published Sep 12, 2023, 12:41 PM IST

ನವದೆಹಲಿ (ಸೆ.12): ಡೀಸೆಲ್ ಚಾಲಿತ ವಾಹನಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಪ್ರಸ್ತಾಪಿಸುವುದಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ. ಆಟೋಮೊಬೈಲ್ ಲಾಬಿ ಗ್ರೂಪ್, ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಈ ವಿಚಾರವನ್ನು ತಿಳಿಸಿರುವ ಗಡ್ಕರಿ, "ನಾನು ಈಗಾಗಲೇ ಒಂದು ಪತ್ರವನ್ನು ಸಿದ್ಧಪಡಿಸಿಟ್ಟುಕೊಂಡಿದ್ದೇನೆ. ನಾನು ಇಂದು ಸಂಜೆ ಹಣಕಾಸು ಸಚಿವರಿಗೆ ಇದನ್ನು ಹಸ್ತಾಂತರಿಸುತ್ತೇನೆ, ಡೀಸೆಲ್ ವಾಹನಗಳು ಮತ್ತು ಎಲ್ಲಾ ಎಂಜಿನ್‌ಗಳ ಮೇಲೆ ಹೆಚ್ಚುವರಿ 10% ಜಿಎಸ್‌ಟಿ ಹಾಕಲು ಪ್ರಸ್ತಾಪಿಸುತ್ತೇನೆ. ಅದು ಡೀಸೆಲ್‌ನಲ್ಲಿ ಚಲಿಸುವ ಎಲ್ಲಾ ರೀತಿಯ ವಾಹನಗಳಿಗೂ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ. ಡೀಸೆಲ್‌ ಚಾಲಿತ ವಾಹನಗಳ ಮಾರಾಟದ ಉತ್ಪಾದನೆ ಹಾಗೂ ಮಾರಾಟವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉದ್ಯಮವೇ ಸ್ವಯಂಪ್ರೇರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದೇ, ಇದ್ದಲ್ಲಿ ಇಂಥ ವಾಹನಗಳ ಮಾರಾಟ ಹಾಗೂ ಉತ್ಪಾದನೆಗಳ ಮೇಲೆ ಕಡಿವಾಣ ಹೇರುವಂಥ ಕ್ರಮಗಳನ್ನು ಸ್ವತಃ ಸರ್ಕಾರವೇ ಕೈಗೊಳ್ಳುತ್ತದೆ. ಸರ್ಕಾರಕ್ಕೆ ಅದನ್ನು ಬಿಟ್ಟು ಬೇರೆ ದಾರಿ ಕೂಡ ಇರೋದಿಲ್ಲ ಎಂದು ಗಡ್ಕರಿ ಹೇಳಿದ್ದಾರೆ.

“ಡೀಸೆಲ್‌ಗೆ ವಿದಾಯ ಹೇಳಿ. ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ಡೀಸೆಲ್ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗದಷ್ಟು ತೆರಿಗೆಯನ್ನು ಹೆಚ್ಚಿಸುತ್ತೇವೆ ಎಂದು ಗಡ್ಕರಿ ಹೇಳಿದರು.ಡೀಸೆಲ್ ಕಾರಿನ ಪಾಲು ಕಳೆದ ಒಂಬತ್ತು ವರ್ಷಗಳಲ್ಲಿ 2014 ರಲ್ಲಿ 33% ರಿಂದ 28% ಕ್ಕೆ ಇಳಿದಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ. ಈ ಶಿಫಾರಸಿಗೆ ಸರ್ಕಾರ ಅನುಮೋದನೆ ನೀಡಿದರೆ, ಡೀಸೆಲ್‌ ಕಾರುಗಳು ಮತ್ತಷ್ಟು ದುಬಾರಿಯಾಗಲಿವೆ. ಈಗಾಗಲೇ ಡೀಸೆಲ್‌ ವಾಹನಗಳ ಮೇಲೆ ಹೆಚ್ಚಿನ ತೆರಿಗೆ ಇದೆ. ಅದಕ್ಕೆ ಇನ್ನಷ್ಟು ಹೆಚ್ಚುವರಿಯಾಗಿ ಶೇ. 10ರಷ್ಟು ಮಾಲಿನ್ಯ ತೆರಿಗೆ ಎಂದು ಸರ್ಕಾರ ವಿಧಿಸಲಿದೆ.

flex-fuel car: ಜಗತ್ತಿನ ಮೊದಲ ಎಥೆನಾಲ್ ಕಾರು ಭಾರತದಲ್ಲಿ ಬಿಡುಗಡೆ!

ವಾಹನೋದ್ಯಮವು ಡೀಸೆಲ್‌ನಿಂದ ಶುದ್ಧ ಇಂಧನ ಪರ್ಯಾಯಗಳಿಗೆ ಬದಲಾಯಿಸುವುದನ್ನು ತ್ವರಿತಗೊಳಿಸುವ ಅನಿವಾರ್ಯತೆಯನ್ನು ಗಡ್ಕರಿ ಪ್ರಧಾನವಾಗಿ ಪ್ರಸ್ತಾಪಿಸಿದ್ದಾರೆ.. ಅವರು ಡೀಸೆಲ್ ಎಂಜಿನ್‌ಗಳಿಗೆ ಸಂಬಂಧಿಸಿದ ಪರಿಸರ ಕಾಳಜಿಗಳನ್ನು ಎತ್ತಿ ತೋರಿಸಿದರು ಮತ್ತು ಮಾಲಿನ್ಯ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ನಿಗ್ರಹಿಸುವ ನಿರ್ಣಾಯಕ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

ಎಥೆನಾಲ್‌ ಮಿಶ್ರಣ ಗುರಿ ಸಾಧಿಸಿದ ಭಾರತ: ಮೋದಿ ಹರ್ಷ

ಡೀಸೆಲ್ ವಾಹನಗಳ ಮೇಲೆ ಜಿಎಸ್‌ಟಿ ಹೆಚ್ಚಿಸುವ ಸಚಿವರ ಪ್ರಸ್ತಾವನೆಯು ವಾಹನ ಉತ್ಪಾದಕರು ಮತ್ತು ಗ್ರಾಹಕರು ಹಸಿರು ಮತ್ತು ಹೆಚ್ಚು ಪರಿಸರ ಸ್ನೇಹಿ ಸಾರಿಗೆ ಆಯ್ಕೆಗಳನ್ನು ಅನ್ವೇಷಿಸಲು ಉತ್ತೇಜಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಕ್ರಮವು ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸಲು ಮತ್ತು ವಾಹನ ಕ್ಷೇತ್ರದ ಪರಿಸರ ಪರಿಣಾಮವನ್ನು ಕಡಿಮೆ ಮಾಡಲು ಮೋದಿ ಸರ್ಕಾರದ ಬದ್ಧತೆಗೆ ಹೊಂದಿಕೆಯಾಗುತ್ತದೆ.

 

ಸ್ಪಷ್ಟೀಕರಣ ನೀಡಿದ ನಿತಿನ್‌ ಗಡ್ಕರಿ: ಡೀಸೆಲ್ ವಾಹನಗಳ ಮಾರಾಟದ ಮೇಲೆ ಹೆಚ್ಚುವರಿ 10% ಜಿಎಸ್‌ಟಿಯನ್ನು ಸೂಚಿಸುವ ಮಾಧ್ಯಮ ವರದಿಗಳನ್ನು ಸ್ಪಷ್ಟಪಡಿಸುವ ತುರ್ತು ಅಗತ್ಯವಿದೆ. ಅಂತಹ ಯಾವುದೇ ಪ್ರಸ್ತಾವನೆಯು ಪ್ರಸ್ತುತ ಸರ್ಕಾರದ ಸಕ್ರಿಯ ಪರಿಗಣನೆಯಲ್ಲಿಲ್ಲ ಎಂಬುದನ್ನು ಸ್ಪಷ್ಟಪಡಿಸುವುದು ಅತ್ಯಗತ್ಯ. 2070 ರ ವೇಳೆಗೆ ಕಾರ್ಬನ್ ನೆಟ್ ಶೂನ್ಯವನ್ನು ಸಾಧಿಸಲು ಮತ್ತು ಡೀಸೆಲ್‌ನಂತಹ ಅಪಾಯಕಾರಿ ಇಂಧನಗಳಿಂದ ಉಂಟಾಗುವ ವಾಯು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಆಟೋಮೊಬೈಲ್ ಮಾರಾಟದಲ್ಲಿನ ತ್ವರಿತ ಬೆಳವಣಿಗೆಗೆ ಅನುಗುಣವಾಗಿ, ಸ್ವಚ್ಛ ಮತ್ತು ಹಸಿರು ಪರ್ಯಾಯ ಇಂಧನಗಳನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ಇಂಧನಗಳು ಆಮದು ಬದಲಿಗಳಾಗಿರಬೇಕು, ವೆಚ್ಚ-ಪರಿಣಾಮಕಾರಿ, ಸ್ಥಳೀಯ ಮತ್ತು ಮಾಲಿನ್ಯ-ಮುಕ್ತವಾಗಿರಬೇಕು ಎಂದು ಟ್ವೀಟ್‌ ಮಾಡಿದ್ದಾರೆ.
 

Follow Us:
Download App:
  • android
  • ios