ಆಮದು ನಿಲ್ಲಿಸಲು 3 ಸಾವಿರ ಚೀನಿ ವಸ್ತುಗಳನ್ನು ಪಟ್ಟಿಮಾಡಿದ ಸಿಎಐಟಿ, ಭಾರತದಲ್ಲೇ ತಯಾರಿಸಿದ ಪರಾರಯಯ ಉತ್ಪನ್ನಗಳನ್ನಷ್ಟೇ ಮಾರಲು ನಿರ್ಧಾರ, ‘ಭಾರತೀಯ ವಸ್ತು-ನಮ್ಮ ಹೆಮ್ಮೆ’ ಹೆಸರಿನಲ್ಲಿ ವ್ಯಾಪಾರಿಗಳ ಆಂದೋಲನ, 7 ಕೋಟಿ: ದೇಶದಲ್ಲಿನ ವ್ಯಾಪಾರಿಗಳ ಸಂಖ್ಯೆ, 40000: ಸಿಎಐಟಿ ಸದಸ್ಯರಾಗಿರುವ ವ್ಯಾಪಾರಿ ಸಂಘಗಳ ಸಂಖ್ಯೆ.
ನವದೆಹಲಿ (ಜೂ.12): ಮಹತ್ವದ ಬೆಳವಣಿಗೆಯೊಂದರಲ್ಲಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಚೀನಾದಿಂದ ತರಿಸಿಕೊಳ್ಳುವ ಸಿದ್ಧ ವಸ್ತುಗಳಿಗೆ ಬಹಿಷ್ಕಾರ ಹಾಕಲು ನಿರ್ಧರಿಸಿದ್ದು, ಇನ್ನುಮುಂದೆ ಚೀನಿ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ ಎಂದು ಪ್ರಕಟಿಸಿದೆ.
ಭಾರತೀಯರು ಚೀನಾದ ವಸ್ತುಗಳಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಚೀನಾದ ಪತ್ರಿಕೆ ವರದಿ ಮಾಡಿದ ಬೆನ್ನಲ್ಲೇ ದೇಶದ ಸ್ವಾಭಿಮಾನವನ್ನು ಎತ್ತಿಹಿಡಿಯಲು ಒಕ್ಕೂಟ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಗಡಿಯಲ್ಲಿ ಚೀನಾದ ಉಪಟಳ ಹೆಚ್ಚುತ್ತಿರುವುದರಿಂದ ಮತ್ತು ಇತ್ತೀಚೆಗೆ ಪ್ರಧಾನಿ ಮೋದಿ ಅವರು ಸ್ವದೇಶಿ ವಸ್ತುಗಳನ್ನು ಬಳಸುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದಿದೆ.
ಚೀನಾ ಉದ್ಧಟತನಕ್ಕೆ ಪಾಠ ಕಲಿಸಲು ಭಾರತೀಯ ಶ್ರೀಸಾಮಾನ್ಯ ಸಾಕು
ಚೀನಿ ವಸ್ತುಗಳ ಮಾರಾಟವನ್ನು ನಿಲ್ಲಿಸಲು ಒಕ್ಕೂಟವು ಭಾರತದಲ್ಲಿ ಸುಲಭವಾಗಿ ಉತ್ಪಾದಿಸಲು ಸಾಧ್ಯವಿರುವ, ಆದರೆ ಸದ್ಯ ಚೀನಾದಿಂದ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಂಡು ಮಾರುತ್ತಿರುವ ಸುಮಾರು 3000 ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಒಕ್ಕೂಟದಲ್ಲಿ ದೇಶದ ಮೂಲೆಮೂಲೆಯ 7 ಕೋಟಿ ವ್ಯಾಪಾರಿಗಳಿದ್ದು, 40 ಸಾವಿರ ವ್ಯಾಪಾರಿ ಸಂಘಗಳು ಸದಸ್ಯರಾಗಿವೆ. ಇವರೆಲ್ಲರೂ ಚೀನಿ ವಸ್ತುಗಳ ಮಾರಾಟ ನಿಲ್ಲಿಸಿದರೆ ಸ್ವದೇಶಿ ಆಂದೋಲನಕ್ಕೆ ದೊಡ್ಡ ಬೆಂಬಲ ಸಿಗಲಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್, ‘ನಮ್ಮ ಆಂದೋಲನಕ್ಕೆ ‘ಭಾರತದ ವಸ್ತು-ನಮ್ಮ ಹೆಮ್ಮೆ’ ಎಂದು ಹೆಸರಿಡಲಾಗಿದೆ. ಈ ಆಂದೋಲನದ ಮೂಲಕ ಡಿಸೆಂಬರ್ 2021ರ ವೇಳೆಗೆ 1 ಲಕ್ಷ ಕೋಟಿ ರು. ಮೌಲ್ಯದ ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುವುದನ್ನು ತಡೆಯುವ ಸಂಕಲ್ಪ ಮಾಡಿದ್ದೇವೆ. ಚೀನಾದಿಂದ ಸದ್ಯ ಸಿದ್ಧ ವಸ್ತುಗಳು, ಕಚ್ಚಾ ವಸ್ತುಗಳು, ಬಿಡಿ ಭಾಗಗಳು ಹಾಗೂ ತಾಂತ್ರಿಕ ಉತ್ಪನ್ನಗಳು ಹೀಗೆ ಮುಖ್ಯವಾಗಿ ನಾಲ್ಕು ವಿಧದ ಉತ್ಪನ್ನಗಳು ಭಾರತಕ್ಕೆ ಆಮದಾಗುತ್ತಿವೆ. ಮೊದಲ ಹಂತದಲ್ಲಿ ನಾವು ಸಿದ್ಧ ವಸ್ತುಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದ್ದಾರೆ.
ಪ್ರಸ್ತುತ ಭಾರತ ಪ್ರತಿ ವರ್ಷ ಚೀನಾದಿಂದ ಸುಮಾರು 5 ಲಕ್ಷ ಕೋಟಿ ರು.ನಷ್ಟುಮೌಲ್ಯದ ಸರಕನ್ನು ಆಮದು ಮಾಡಿಕೊಳ್ಳುತ್ತಿದೆ.
ಭಾರತ-ಚೀನಾ ಸಂಘರ್ಷಕ್ಕೆ ತೇಪೆ
ಬಿಜೆಪಿ ಅಭಿಯಾನ:
ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಗುರಿಯೊಂದಿಗೆ ಬಿಜೆಪಿಯು ಈ ತಿಂಗಳ 14ರಂದು ‘ಚೀನಾ ಸೋಲಿಸಿ-ಭಾರತ ಗೆಲ್ಲಿಸೋಣ’ ಎಂಬ ಅಭಿಯಾನ ಹಮ್ಮಿಕೊಂಡಿದೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯರೂ ಆದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಈ ವಿಷಯ ತಿಳಿಸಿದರು.
ಚೀನಾ ಬಗ್ಗುಬಡಿಯಲು ಇದು ಸೂಕ್ತ ಸಮಯ. ಪ್ರತಿಯೊಬ್ಬರೂ ಕೂಡ ಚೀನಾ ಉತ್ಪಾದಿಸುವ ಉತ್ಪನ್ನ ಬಹಿಷ್ಕರಿಸಿ, ಆ ದೇಶದ ವಿರುದ್ಧ ಆರ್ಥಿಕ ಯುದ್ಧದಲ್ಲಿ ಪಾಲ್ಗೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಹಾಗೂ ಮೇಡ್ ಇನ್ ಇಂಡಿಯಾ ಬೆಂಬಲಿಸುವ ಮೂಲಕ ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಸ್ವದೇಶಿ ವಸ್ತುಗಳನ್ನು ಖರೀದಿಸಬೇಕು ಎಂದು ಕರೆ ನೀಡಿದ್ದಾರೆ. ಅದನ್ನು ಪಾಲಿಸುವ ಮೂಲಕ ದೇಶದ ಆರ್ಥಿಕತೆ ಬಲಪಡಿಸೋಣ ಎಂದು ಹೇಳಿದರು.

ಗಡಿಯಲ್ಲಿ ಮತ್ತೊಂದ ರಸ್ತೆ ಶುರು: ಚೀನಾಗೆ ಶಾಕ್
ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿನ ತನ್ನ ಭೂಭಾಗದಲ್ಲಿ ರಸ್ತೆ ನಿರ್ಮಾಣ ಆರಂಭಿಸಿದ ಕಾರಣಕ್ಕೆ ಭಾರತದ ವಿರುದ್ಧ ಆಕ್ರೋಶಗೊಂಡು ಗಡಿಯಲ್ಲಿ ಸೇನಾ ಜಮಾವಣೆ ಮಾಡಿ ಬಿಕ್ಕಟ್ಟು ಸೃಷ್ಟಿಸಿರುವ ಚೀನಾಕ್ಕೆ ಕೇಂದ್ರ ಸರ್ಕಾರ ಭರ್ಜರಿ ಠಕ್ಕರ್ ಕೊಟ್ಟಿದೆ. ಉತ್ತರಾಖಂಡದ ಪೀಥೋರಗಢ ಜಿಲ್ಲೆಯಲ್ಲಿರುವ ಚೀನಾ ಗಡಿಯಲ್ಲಿನ ರಸ್ತೆ ಕಾಮಗಾರಿ ತ್ವರಿತವಾಗಿ ಮುಗಿಸುವ ಉದ್ದೇಶದಿಂದ ದೈತ್ಯ ಉಪಕರಣಗಳನ್ನು ಹೆಲಿಕಾಪ್ಟರ್ ಮೂಲಕ ಸಾಗಿಸಿದೆ.
