ಈ 5 ಮ್ಯೂಚುವಲ್ ಫಂಡ್ಸ್ ನಲ್ಲಿ ಹೂಡಿಕೆ ಮಾಡಿದವರಿಗೆ ಬಂಪರ್, ಕಳೆದ ಒಂದು ವರ್ಷದಲ್ಲಿ ಶೇ.80ರಷ್ಟು ರಿಟರ್ನ್ಸ್!
ಕಳೆದ ಒಂದು ವರ್ಷದ ಅವಧಿಯಲ್ಲಿ ಈ 5 ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದವರಿಗೆ ಶೇ.80ರಷ್ಟು ರಿಟರ್ನ್ಸ್ ಸಿಕ್ಕಿದೆ. ಇನ್ನು ಎಸ್ ಐಪಿ ಕೂಡ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ.
Business Desk: 2024ನೇ ಸಾಲಿನ ಮಾರ್ಚ್ ತಿಂಗಳಲ್ಲಿ ಮ್ಯೂಚುವಲ್ ಫಂಡ್ ಒಳಹರಿವು ಹಾಗೂ ಹೊರಹರಿವಿನ ಬಗ್ಗೆ ಎಎಂಎಫ್ಐ ವರದಿ ಬಿಡುಗಡೆಗೊಳಿಸಿದೆ. ಇದರ ಅನ್ವಯ ಸ್ಮಾಲ್ ಹಾಗೂ ಮಿಡ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ.4.41 ಹಾಗೂ ಶೇ. 0.54ರಷ್ಟು ಇಳಿಕೆ ಕಂಡಿವೆ. ಇನ್ನು ಮಾರ್ಚ್ ನಲ್ಲಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆಯಾಗಿರುವ ಒಟ್ಟು ಹಣ 22,633.15 ಕೋಟಿ ರೂ. ಇದು ಫೆಬ್ರವರಿಗಿಂತ ಸ್ವಲ್ಪ ಕಡಿಮೆ. ಫೆಬ್ರವರಿಯಲ್ಲಿ 26,865.78 ಕೋಟಿ ರೂ. ಹೂಡಿಕೆಯಾಗಿತ್ತು. ಇನ್ನು ಈಕ್ವಿಟಿ ವರ್ಗದಲ್ಲಿ ಸ್ಮಾಲ್ ಕ್ಯಾಪ್ ಫಂಡ್ಸ್ ಹೊರತುಪಡಿಸಿ ಉಳಿದೆಲ್ಲ ವರ್ಗಗಳಲ್ಲಿ ಮಾರ್ಚ್ ನಲ್ಲಿ ಹೂಡಿಕೆಯಾಗಿವೆ. ಇನ್ನು ಈ ಬಾರಿ ಮ್ಯೂಚುವಲ್ ಫಂಡ್ ನಲ್ಲಿ ಹೆಚ್ಚಿನ ಹೂಡಿಕೆಯಾಗಿದೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್ಸ್ (ಎಸ್ ಐಪಿ) ಮಾರ್ಚ್ ನಲ್ಲಿ ದಾಖಲೆಯ 192.71 ಬಿಲಿಯನ್ ಹೂಡಿಕೆ ಆಕರ್ಷಿಸಿದೆ. ಈ ಮೂಲಕ 18 ತಿಂಗಳಲ್ಲಿ 15ನೇ ಬಾರಿ ಸಾರ್ವಕಾಲಿಕ ಏರಿಕೆ ಕಂಡಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಟಾಪ್ 5 ಸೆಕ್ಟೋರಿಯಲ್ ಮ್ಯೂಚುವಲ್ ಫಂಡ್ ಯೋಜನೆಗಳು ಹೂಡಿಕೆದಾರರಿಗೆ ಶೇ.80ರಷ್ಟು ರಿಟರ್ನ್ಸ್ ನೀಡಿವೆ. ಹಾಗಾದ್ರೆ ಆ ಮ್ಯೂಚುವಲ್ ಫಂಡ್ ಗಳು ಯಾವುವು? ಇಲ್ಲಿದೆ ಮಾಹಿತಿ.
1.ಎಚ್ ಡಿಎಫ್ ಸಿ ಇನ್ಫ್ರಾಸ್ಟ್ರಚರ್ ಫಂಡ್ : ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಯೋಜನೆಯ ನೇರ ಪ್ಲ್ಯಾನ್ ಶೇ.80.78ರಷ್ಟು ರಿಟರ್ನ್ಸ್ ನೀಡಿವೆ.
2.ಐಸಿಐಸಿಐ ಪ್ರೊಡೆನ್ಷಿಯಲ್ ಪಿಎಸ್ ಯು ಈಕ್ವಿಟಿ ಫಂಡ್: ಕಳೆದ ಒಂದು ವರ್ಷದ ಅವಧಿಯಲ್ಲಿ ಐಸಿಐಸಿಐ ಪ್ರೊಡೆನ್ಷಿಯಲ್ ಪಿಎಸ್ ಯು ಈಕ್ವಿಟಿ ಫಂಡ್ ಶೇ. 84.37ರಷ್ಟು ರಿಟರ್ನ್ಸ್ ನೀಡಿವೆ.
SIPಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದೀರಾ? ತಪ್ಪದೇ ಈ ಟಿಪ್ಸ್ ಫಾಲೋ ಮಾಡಿ
3.ಇನ್ವೆಸ್ಕೋ ಇಂಡಿಯಾ ಪಿಎಸ್ ಯು ಈಕ್ವಿಟಿ ಫಂಡ್: ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಯೋಜನೆಯ ಡೈರೆಕ್ಟ್ ಪ್ಲ್ಯಾನ್ ಶೇ.85.81ರಷ್ಟು ರಿಟರ್ನ್ಸ್ ನೀಡಿವೆ.
4.ಎಸ್ ಬಿಐ ಪಿಎಸ್ ಯು ಫಂಡ್: ಕಳೆದ ಒಂದು ವರ್ಷದ ಅವಧಿಯಲ್ಲಿ ಎಸ್ ಬಿಐ ಪಿಎಸ್ ಯು ಫಂಡ್ ಶೇ.89.08ರಷ್ಟು ರಿಟರ್ನ್ಸ್ ನೀಡಿದೆ.
5.ಆದಿತ್ಯ ಬಿರ್ಲಾ ಸನ್ ಲೈಫ್ ಪಿಎಸ್ ಯು ಈಕ್ವಿಟಿ ಫಂಡ್: ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಯೋಜನೆ ಶೇ. 94.40ರಷ್ಟು ರಿಟರ್ನ್ಸ್ ನೀಡಿದೆ.
ಸ್ಮಾಲ್ ಕ್ಯಾಪ್ ಹಾಗೂ ಮಿಡ್ ಕ್ಯಾಪ್ ಒಳಹರಿವು:
ಕಳೆದ 17 ತಿಂಗಳಲ್ಲಿ ಸ್ಮಾಲ್ ಕ್ಯಾಪ್ ಫಂಡ್ಸ್ ನಿರಂತರ ಬಂಡವಾಳದ ಒಳಹರಿವು ಕಂಡಿತ್ತು. ಆದರೆ, ಮಾರ್ಚ್ ನಲ್ಲಿ 0.94 ಬಿಲಿಯನ್ ರೂಪಾಯಿ ಒಳಹರಿವು ಕಂಡುಬಂದಿದೆ.
ಇನ್ನು ಮಿಡ್ ಕ್ಯಾಪ್ ಫಂಡ್ಸ್ 10.18 ಬಿಲಿಯನ್ ರೂಪಾಯಿ ಒಳಹರಿವು ಕಂಡಿದೆ. ಆದರೆ, ಇದು ಕಳೆದ ತಿಂಗಳಿಗೆ ಹೋಲಿಸಿದರೆ ಶೇ.44ರಷ್ಟು ಕಡಿಮೆ. ಇನ್ನು ಲಾರ್ಜ್ ಕ್ಯಾಪ್ಸ್ ಒಳಹರಿವಿನಲ್ಲಿ ಶೇ.131ರಷ್ಟು ಏರಿಕೆ ಕಂಡುಬಂದಿದ್ದು, 21.28 ಬಿಲಿಯನ್ ರೂಪಾಯಿ ತಲುಪಿದೆ. ಇದು 21 ತಿಂಗಳಲ್ಲೇ ಅತ್ಯಧಿಕ ಮಟ್ಟದ್ದಾಗಿದೆ.
ಭಾರತದಲ್ಲೂ ಮಹಿಳೆಯರಿಗೆ ಗೊತ್ತಾಗಿದೆ ಹಣ ಗಳಿಸೋ ಗುಟ್ಟು, ಸುಮ್ ಸುಮ್ಮನೆ ಹೂಡಿಕೆ ಮಾಡೋಲ್ಲ!
ಎಸ್ ಐಪಿ ಅಂದ್ರೆ ಸಿಸ್ಟಮೆಟಿಕ್ ಇನ್ವೆಸ್ಟ್ ಮೆಂಟ್ ಪ್ಲ್ಯಾನ್ . ಇದು ಮ್ಯೂಚುವಲ್ ಫಂಡ್ ಗಳು ಬಳಸುವ ಹೂಡಿಕೆ ತಂತ್ರಜ್ಞಾನವಾಗಿದೆ. ಎಸ್ ಐಪಿ ಮೂಲಕ ಹೂಡಿಕೆದಾರರು ಪ್ರತಿ ತಿಂಗಳು ನಿರ್ದಿಷ್ಟ ಹೂಡಿಕೆಯನ್ನು ಮ್ಯೂಚುವಲ್ ಫಂಡ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಹೂಡಿಕೆದಾರರು ನಿಯಮಿತವಾಗಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಸಂಪತ್ತು ನಿರ್ಮಿಸಲು ಎಸ್ ಐಪಿ ಅನುವು ಮಾಡಿಕೊಡುತ್ತದೆ. ಒಂದೇ ಬಾರಿಗೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಬದಲು ಈ ರೀತಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಸಂಪತ್ತನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ.