ಭಾರತದಲ್ಲೂ ಮಹಿಳೆಯರಿಗೆ ಗೊತ್ತಾಗಿದೆ ಹಣ ಗಳಿಸೋ ಗುಟ್ಟು, ಸುಮ್ ಸುಮ್ಮನೆ ಹೂಡಿಕೆ ಮಾಡೋಲ್ಲ!
ಹಣ ಸಂಪಾದನೆ ಮಾಡಿದ್ರೆ ಸಾಲದು ಅದನ್ನು ಹೇಗೆ ಡಬಲ್ ಮಾಡಬೇಕು ಎಂಬುದು ತಿಳಿದಿರಬೇಕು. ಸುರಕ್ಷಿತ ಜಾಗದಲ್ಲಿ ಹಣ ಹೂಡಿದ್ರೆ ಉಳಿತಾಯದ (savings) ಜೊತೆ ಹೆಚ್ಚಿನ ಮೊತ್ತ ನಿಮ್ಮ ಕೈ ಸೇರುತ್ತದೆ. ಈ ವಿಷ್ಯವನ್ನು ಈಗಿನ ಮಹಿಳೆಯರು ಅರಿತಂತಿದೆ.
ಮ್ಯೂಚುವಲ್ ಫಂಡ್ ಬಗ್ಗೆ ಜನರ ಆಸಕ್ತಿ ಈಗಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಜನರು ತಮ್ಮ ಹಣವನ್ನು ವ್ಯರ್ಥ ಹಾಳು ಮಾಡದೆ ಅದನ್ನು ಉಳಿತಾಯ ಮಾಡುವ ಹಾಗೂ ಮ್ಯೂಚುವಲ್ ಫಂಡ್ ನಂತಹ ಜಾಗದಲ್ಲಿ ಹೂಡಿಕೆ ಮಾಡಲು ಮುಂದೆ ಬರ್ತಿದ್ದಾರೆ. ಕೇವಲ ಪುರುಷರು ಮಾತ್ರವಲ್ಲ ಮಹಿಳೆಯರ ಸಂಖ್ಯೆ ಕೂಡ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ನಲ್ಲಿ ಹೆಚ್ಚಾಗಿದೆ ಎಂದು ಕೆಲ ದಿನಗಳ ಹಿಂದೆ ವರದಿ ಮಾಡಲಾಗಿತ್ತು. ಈಗ ಮ್ಯೂಚುವಲ್ ಫಂಡ್ ನಲ್ಲಿ ಮಹಿಳೆಯರ ಸಂಖ್ಯೆ ಎಷ್ಟು ಹೆಚ್ಚಾಗಿದೆ, ಹಾಗೆ ಯಾವ ರಾಜ್ಯದ ಮಹಿಳೆಯರು ಇದ್ರಲ್ಲಿ ಹೆಚ್ಚು ಆಸಕ್ತಿವಹಿಸುತ್ತಿದ್ದಾರೆ ಎನ್ನುವ ವರದಿ ಬಂದಿದೆ.
ಉದ್ಯಮ ಸಂಸ್ಥೆ ಅಸೋಸಿಯೇಷನ್ ಆಫ್ ಮ್ಯೂಚುಯಲ್ ಫಂಡ್ಸ್ ಇನ್ ಇಂಡಿಯಾ (AMFI) ನೀಡಿದ ಡೇಟಾ (Data), ಅಚ್ಚರಿ ಹಾಗೂ ಖುಷಿ ಎರಡಕ್ಕೂ ಕಾರಣವಾಗಿದೆ. ಭಾರತದಲ್ಲಿ ಮಹಿಳೆಯರು (Indian Women) ಉಳಿತಾಯ (Savings) ಕ್ಕೆ ಮುಂದಾಗ್ತಿದ್ದಾರೆ ಎಂಬುದನ್ನು ಈ ಡೇಟಾ (Data) ಸ್ಪಷ್ಟಪಡಿಸುತ್ತಿದೆ. ಮ್ಯೂಚುವಲ್ ಫಂಡ್ (Mutual Fund) ನಲ್ಲಿ ಹಣ ಹೂಡಿಕೆ (Investment) ಮಾಡುವ ಮಹಿಳೆಯರ ಸಂಖ್ಯೆ ಮಾರ್ಚ್ 2017 ರಲ್ಲಿ ಶೇಕಡಾ 15 ರಷ್ಟಿತ್ತು. 2023 ರ ಡಿಸೆಂಬರ್ ನಲ್ಲಿ ಮಹಿಳೆಯರ ಈ ಸಂಖ್ಯೆ ಶೇಕಡಾ 21 ರಷ್ಟು ಹೆಚ್ಚಾಗಿದೆ. ಫೆಬ್ರವರಿಯಲ್ಲಿ ಮ್ಯೂಚುವಲ್ ಫಂಡ್ (Mutual funds) ನಲ್ಲಿ ಒಟ್ಟು 50 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಯುವಜನತೆ ಅದರಲ್ಲೂ ಮಹಿಳೆಯರು ಮ್ಯೂಚುವಲ್ ಫಂಡ್ ನತ್ತ ಮುಖ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಆಗಿದೆ.
ವ್ಯಾಪಾರವಾಗಿ ಬದಲಾದ ಹವ್ಯಾಸ; ಚೆಂದದ ಉತ್ಪನ್ನ ತಯಾರಿಸಿ ಲಕ್ಷಾಂತರ ಗಳಿಕೆ!
ಈ ಡೇಟಾದ ಇನ್ನೊಂದು ಅಚ್ಚರಿಯ ವಿಷ್ಯ ಅಂದ್ರೆ ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವವರ ಸಂಖ್ಯೆ ನಗರಗಳಿಗೆ ಹೋಲಿಕೆ ಮಾಡಿದ್ರೆ ದೂರದ ಊರುಗಳಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ.
ಯಾವ ರಾಜ್ಯದ ಮಹಿಳೆಯರಿಂದ ಹೆಚ್ಚು ಹೂಡಿಕೆ?: ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವ ಮಹಿಳೆಯರ ಸಂಖ್ಯೆ ಗೋವಾದಲ್ಲಿ ಹೆಚ್ಚಿದೆ. ಒಟ್ಟೂ ಹೂಡಿಕೆದಾರರ ಪೈಕಿ ಶೇಕಡಾ 40ರಷ್ಟು ಮಹಿಳೆಯರು ಗೋವಾದಲ್ಲಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಈಶಾನ್ಯ ರಾಜ್ಯಗಳಿವೆ. ಶೇಕಡಾ ೩೦ಕ್ಕಿಂತ ಹೆಚ್ಚು ಪಾಲನ್ನು ಈ ರಾಜ್ಯಗಳು ಪಡೆದಿವೆ. ಇದಾದ ನಂತ್ರ ಚಂಡೀಗಢ, ಮಹಾರಾಷ್ಟ್ರ ಮತ್ತು ನವದೆಹಲಿ ಬರುತ್ತದೆ. ಇಲ್ಲಿನ ಮಹಿಳೆಯರು ಕೂಡ ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಮ್ಯೂಚುವಲ್ ಫಂಡ್ ನಲ್ಲಿ ಈ ವಯಸ್ಸಿನ ಮಹಿಳೆಯರ ಹೂಡಿಕೆ ಹೆಚ್ಚು : ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡಿದವರಲ್ಲಿ ಶೇಕಡಾ 50ರಷ್ಟು ಮಂದಿ 25 ರಿಂದ 44 ವರ್ಷದ ಮಹಿಳೆಯರು ಸೇರಿದ್ದಾರೆ. ವೈಯಕ್ತಿಕ ಹೂಡಿಕೆದಾರರ ಒಟ್ಟು ಗುಂಪಿನಲ್ಲಿ ಈ ಅಂಕಿ ಅಂಶವು ಶೇಕಡಾ 45 ರಷ್ಟಿದೆ.
ಅಬ್ಬಬ್ಬಾ..ರಿಲಯನ್ಸ್ ಜಿಯೋ ನಿರ್ದೇಶಕಿ ಇಶಾ ಅಂಬಾನಿ, ಮಂತ್ಲೀ ಸ್ಯಾಲರಿ ಇಷ್ಟೊಂದಾ?
ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಮಹಿಳೆಯರ ಸಂಖ್ಯೆ ಮಾತ್ರವಲ್ಲ ಮಹಿಳಾ ಮ್ಯೂಚುವಲ್ ಫಂಡ್ ವಿತರಕರ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬಂದಿದೆ. . ಡಿಸೆಂಬರ್ 2023 ರ ಹೊತ್ತಿಗೆ ಈ ಸಂಖ್ಯೆ 42 ಸಾವಿರ ಇತ್ತು. ನಿರ್ವಹಣೆಯ ಒಟ್ಟು ಆಸ್ತಿ 1 ಲಕ್ಷ ಕೋಟಿ ರೂಪಾಯಿ ಆಗಿತ್ತು. ಮ್ಯುಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವ ಬಹುತೇಕ ಮಹಿಳೆಯರು ನಿಯಮಿತ ಯೋಜನೆ ಮೂಲಕ ಹೂಡಿಮೆ ಮಾಡ್ತಾರೆ. ಮ್ಯೂಚುವಲ್ ಫಂಡ್ ವಿತರಕರ ಮೂಲಕ ದೀರ್ಘಕಾಲದ ಹೂಡಿಕೆಗೆ ಅವರು ಹೆಚ್ಚಿನ ಆಸಕ್ತಿ ತೋರುತ್ತಾರೆ.