20230ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ. ಸಿಟಿ ಇಂಡೆಕ್ಸ್ ಪ್ರಕಾರ, ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ಬಿಲಿಯನೇರ್‌ಗಳನ್ನು ಹೊಂದಿರುವ ಐದನೇ ದೇಶ ಭಾರತ. $೩೮.೫ ಶತಕೋಟಿ ನಿವ್ವಳ ಮೌಲ್ಯದೊಂದಿಗೆ ಸಾವಿತ್ರಿ ಜಿಂದಾಲ್ ಭಾರತದ ಶ್ರೀಮಂತ ಮಹಿಳೆ. ರಾಧಾ ವೆಂಬು ಮತ್ತು ಫಲ್ಗುಣಿ ನಾಯರ್ ಕೂಡ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾದ ಭಾರತವು 2030 ರ ವೇಳೆಗೆ ಮೂರನೇ ಅತಿ ದೊಡ್ಡ ದೇಶವಾಗಿ ಬೆಳೆಯಲಿದೆ. ಸಿಟಿ ಇಂಡೆಕ್ಸ್‌ನ ಅಧ್ಯಯನದ ಪ್ರಕಾರ ಭಾರತವು ವಿಶ್ವಾದ್ಯಂತ ಅತಿ ಹೆಚ್ಚು ಮಹಿಳಾ ಬಿಲಿಯನೇರ್‌ಗಳನ್ನು ಹೊಂದಿರುವ ಐದನೇ ಸ್ಥಾನ ದೇಶವಾಗಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ತನ್ನ ಸ್ಥಾನವನ್ನು ಉಳಿಸಿಕೊಂಡಿರುವ ಸಾವಿತ್ರಿ ಜಿಂದಾಲ್ 2025 ರಲ್ಲಿ ಶ್ರೀಮಂತ ಭಾರತೀಯ ಮಹಿಳೆಯಾಗಿದ್ದು, $38.5 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಸಾವಿತ್ರಿ ಜಿಂದಾಲ್ ಪ್ರಸ್ತುತ ಫೋರ್ಬ್ಸ್ ಇಂಡಿಯಾ ಬಿಲಿಯನೇರ್ಸ್ ಪಟ್ಟಿಯಲ್ಲಿ ಏಕೈಕ ಮಹಿಳಾ ಪ್ರತಿನಿಧಿಯಾಗಿದ್ದಾರೆ ಮತ್ತು ಜಾಗತಿಕವಾಗಿ 52 ನೇ ಸ್ಥಾನದಲ್ಲಿದ್ದಾರೆ.

ಸಾರ್ವಜನಿಕರ ಗಮನಕ್ಕೆ, ಫೆಬ್ರವರಿ 1ರಿಂದ UPI ಪೇಮೆಂಟ್‌ನಲ್ಲಿ ಮಹತ್ವದ ಬದಲಾವಣೆ

ಜೋಹೋ ಕಾರ್ಪ್‌ನ ಸಹ-ಸಂಸ್ಥಾಪಕಿ, ರಾಧಾ ವೆಂಬು ಅವರ ಪ್ರಭಾವಶಾಲಿ ಮಹಿಳೆಯಾಗಿದ್ದು ಅವಳನ್ನು ಶ್ರೇಯಾಂಕದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 2025 ರ ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಭಾರತದ ಶ್ರೀಮಂತ ಮಹಿಳೆಯರಲ್ಲಿ 9 ನೇ ಸ್ಥಾನದಿಂದ 7 ನೇ ಸ್ಥಾನಕ್ಕೆ ಏರಿದ್ದಾರೆ. 

ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಬಳಿಕ ಚಿನ್ನದ ಬೆಲೆ ಏರಿಕೆಯಾಗುತ್ತಾ?

2012 ರಲ್ಲಿ ಪ್ರಾರಂಭವಾದ ಜನಪ್ರಿಯ ಸೌಂದರ್ಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನೈಕಾ ಸ್ಥಾಪಕರಾದ ಫಲ್ಗುಣಿ ನಾಯರ್ ಕೂಡ ಟಾಪ್ 10 ನೇ ಸ್ಥಾನಕ್ಕೆ ಬಂದಿದ್ದಾರೆ. ಈ ಕೆಳಗಿನ ಕೋಷ್ಠಕದಲ್ಲಿ ದೇಶದ ಟಾಪ್ 10 ಬಿಲಿಯನೇರ್ ಮಹಿಳೆಯರು ಹೆಸರು ಮತ್ತು ನಿವ್ವಳ ಮೌಲ್ಯವನ್ನು ನೀಡಲಾಗಿದೆ.

ದೇಶದ ಶ್ರೇಯಾಂಕ 2025ಹೆಸರುನಿವ್ವಳ ಮೌಲ್ಯಕಂಪನಿಜಾಗತಿಕ ಶ್ರೇಯಾಂಕ 2025
1ಸಾವಿತ್ರಿ ಜಿಂದಾಲ್34.3 ಬಿಲಿಯನ್ಜಿಂದಾಲ್ ಗ್ರೂಪ್52
2ರೇಖಾ ಜುಂಜುನ್ವಾಲಾ8.0 ಬಿಲಿಯನ್ಟೈಟಾನ್ ಕಂಪನಿ ಲಿಮಿಟೆಡ್, ಮತ್ತು ಇತರರು356
3ರೇಣುಕಾ ಜಗ್ತಿಯಾನಿ5.6 ಬಿಲಿಯನ್ಲ್ಯಾಂಡ್‌ಮಾರ್ಕ್ ಗುಂಪು592
4ವಿನೋದ್ ಗುಪ್ತಾ4.7 ಬಿಲಿಯನ್ಹ್ಯಾವೆಲ್ಸ್709
5ಸ್ಮಿತಾ ಕೃಷ್ಣ-ಗೋದ್ರೆಜ್3.5 ಬಿಲಿಯನ್ಗೋದ್ರೇಜ್970
6ಕಿರಣ್ ಮಜುಂದಾರ್-ಶಾ3.4 ಬಿಲಿಯನ್ಬಯೋಕಾನ್1034
7ರಾಧಾ ವೆಂಬು3.2 ಬಿಲಿಯನ್ಜೊಹೊ ಕಾರ್ಪೊರೇಷನ್1074
8ಅನು ಆಗಾ3.1 ಬಿಲಿಯನ್ಥರ್ಮ್ಯಾಕ್ಸ್1107
9ಲೀನಾ ತಿವಾರಿ3.0 ಬಿಲಿಯನ್USV ಫಾರ್ಮಾ1133
10ಫಲ್ಗುಣಿ ನಾಯರ್2.9 ಬಿಲಿಯನ್ನೈಕಾ1148