ಫೆಬ್ರವರಿ 1ರಿಂದ ಈ ರೀತಿಯ ಐಡಿಗಳಿಂದ ಯುಪಿಐ ಪೇಮೆಂಟ್ ಸ್ವೀಕರಿಸಲಾಗುವುದಿಲ್ಲ ಎಂದು ಎನ್‌ಪಿಸಿಐ (National Payments Corporation of India) ಸುತ್ತೋಲೆಯನ್ನು ಹೊರಡಿಸಿದೆ. ಫೆಬ್ರವರಿ 1ರಿಂದ ಈ ನಿಯಮಗಳು ಜಾರಿಗೆ ಬರಲಿವೆ.
ನವದೆಹಲಿ: ಭಾರತದಲ್ಲಿ ಡಿಜಿಟಲ್ ಕ್ರಾಂತಿಯುಂಟಾಗಿದ್ದು, ಸಣ್ಣ ಸಣ್ಣ ಹಣಕಾಸಿನ ವಹಿವಾಟುಗಳು ಸಹ ಆನ್‌ಲೈನ್ ಮೂಲಕವೇ (Online Transaction) ನಡೆಯುತ್ತವೆ. ಹಾಲು-ಮೊಸರು, ತರಕಾರಿ ಅಂತ ಚಿಲ್ಲರೆ ಹಣ ಪಾವತಿಸುವಾಗ ಜನರು ಮೊಬೈಲ್ ತೆಗೆದು ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡುತ್ತಾರೆ. ಇನ್ನು ಆನ್‌ಲೈನ್ ಶಾಪಿಂಗ್, ಒಬ್ಬರಿಂದ ಮತ್ತೊಬ್ಬರಿಗೆ ಹಣ ವರ್ಗಾವಣೆಯೂ ಡಿಜಿಟಲ್ ಪೇಮೆಂಟ್ (Digital Payment) ಮೂಲಕ ನಡೆಯುತ್ತದೆ. ಯುಪಿಐ ಆಪ್ (Unified Payments Interface) ಮೂಲಕ ತುಂಬಾ ಸರಳವಾಗಿ ಹಣಕಾಸಿನ ವ್ಯವಹಾರಗಳನ್ನು ನಡೆಸಲಾಗುತ್ತದೆ. ಇಲ್ಲಿ ಪ್ರತಿಯೊಂದು ವ್ಯವಹಾರದ ಐಡಿ ಬೇರೆ ಬೇರೆಯೇ ಆಗಿರುತ್ತದೆ.
ಫೆಬ್ರವರಿ 1ರಿಂದ ಯಾವುದೇ ವಿಶೇಷ ಅಕ್ಷರ/ಚಿಹ್ನೆಗಳನ್ನು ಹೊಂದಿರುವ ಯುಪಿಐ ವಹಿವಾಟು ಸ್ವೀಕರಿಸಲಾಗುವುದಿಲ್ಲ ಎಂದು NPCI (National Payments Corporation of India ) ಮಾಹಿತಿಯನ್ನು ನೀಡಿದೆ. ಈ ಸಂಬಂಧ ಜನವರಿ 9ರಂದು ಸುತ್ತೋಲೆಯನ್ನು ಸಹ ಹೊರಡಿಸಲಾಗಿದೆ. ಈ ಸುತ್ತೋಲೆ ಪ್ರಕಾರ, ಯುಪಿಐ ವಹಿವಾಟು ಐಡಿಯನ್ನು ಕ್ರಿಯೇಟ್ ಮಾಡುವಾಗ ಕೇವಲ ಅಕ್ಷರ ಮತ್ತು ಸಂಖ್ಯೆಗಳನ್ನು ಮಾತ್ರ ಬಳಸಬೇಕು ಎಂದು ಸೂಚನೆ ನೀಡಲಾಗಿದೆ. ವಿಶೇಷ ಚಿಹ್ನೆ (Special Character) ಐಡಿಯನ್ನು ಯುಪಿಐ ಸ್ವೀಕರಿಸುವುದಿಲ್ಲ. ಐಡಿಯಲ್ಲಿ @, $, #. ^ ,%, * ಸೇರಿದಂತೆ ಇಂತಹ ಯಾವುದೇ ಚಿಹ್ನೆಗಳನ್ನು ಬಳಸಬಾರದು ಎಂದು ಎನ್‌ಪಿಸಿಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
ಈಗಾಗಲೇ ಹಲವರು ಈ ನಿಯಮವನ್ನು ಪಾಲನೆ ಮಾಡುತ್ತಿದ್ದಾರೆ. ಆದ್ರೆ ಫೆಬ್ರವರಿ 1ರಿಂದ ಸ್ಪೆಷಲ್ ಕ್ಯಾರೆಕ್ಟರ್ ಹೊಂದಿರುವ ಐಡಿಯ ವಹಿವಾಟುಗಳನ್ನು ಯುಪಿಐ ನಿಂದ ಸ್ವೀಕರಿಸಲಾಗುವುದು ಎಂದು ಎನ್‌ಪಿಸಿಐ ಹೇಳಿದೆ. ಕಳೆದ ಕೆಲವು ವರ್ಷಗಳಿಂದ ಯುಪಿಐ ಪೇಮೆಂಟ್ ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತಲಿದೆ. 2016ರ ನೋಟ್ ಬ್ಯಾನ್ ಬಳಿಕ ಯುಪಿಐ ಪೇಮೆಂಟ್ ಮುನ್ನಲೆಗೆ ಬಂತು. ನಂತರ ಕೋವಿಡ್ ಕಾಲಘಟ್ಟದ ನಂತರ ಯುಪಿಐ ಬಳಕೆ ಅಧಿಕವಾಯ್ತು.
ಇದನ್ನೂ ಓದಿ: ಇಂಟರ್ನೆಟ್ ಇಲ್ಲದೆಯೂ ಬ್ಯಾಂಕಿಂಗ್ ವ್ಯವಹಾರ ಫೋನ್ನಲ್ಲಿ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ...
ಡಿಸೆಂಬರ್ 2024ರ ಅಂಕಿ ಅಂಶಗಳ ಪ್ರಕಾರ, ಯುಪಿಐ ಸ್ವೀಕರಿಸುವ ಮತ್ತು ಪಾವತಿಸುವ ವಹಿವಾಟುಗಳ ಸಂಖ್ಯೆ 16.73 ಬಿಲಿಯನ್ ವರೆಗೆ ತಲುಪಿದೆ. 2024ರ ನವೆಂಬರ್‌ನಲ್ಲಿ ಯುಪಿಐ ವಹಿವಾಟುಗಳ ಸಂಖ್ಯೆ 15.48 ಬಿಲಿಯನ್ ಆಗಿತ್ತು. ಕೇವಲ ಒಂದು ತಿಂಗಳಲ್ಲಿ ಯುಪಿಐ ವಹಿವಾಟು ಶೇ.8ರಷ್ಟು ಬೆಳವಣಿಗೆ ಕಂಡು ಬಂದಿತ್ತು. ಡಿಸೆಂಬರ್‌ನಲ್ಲಿ 23.25 ಲಕ್ಷ ಕೋಟಿ ರೂಪಾಯಿ ಮತ್ತು ನವೆಂಬರ್‌ನಲ್ಲಿ 21.55 ಲಕ್ಷ ಕೋಟಿ ರೂಪಾಯಿ ಮೊತ್ತದ ವಹಿವಾಟು ನಡೆದಿದೆ.
ಜಂಪಡ್ ಡೆಪಾಸಿಟ್ ಸ್ಕ್ಯಾಮ್
ಈ ನಡುವೆ ಜಂಪಡ್ ಡೆಪಾಸಿಟ್ ಸ್ಕ್ಯಾಮ್ ನಡೆಯುತ್ತಿರುವ ಬಗ್ಗೆ ವರದಿಗಳು ಪ್ರಕಟವಾಗಿವೆ. ನಿಮಗೆ ಯಾವುದೋ ದುಡ್ಡು ಕ್ರೆಡಿಟ್ ಆಗಿರುವ ಮೆಸೇಜ್ ಬಂದರೆ, ಕೂಡಲೇ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಲು ಹೋಗಬೇಡಿ ಎಂದು ಸಲಹೆ ನೀಡಲಾಗಿದೆ. ನಿಮ್ಮ ಸಂಖ್ಯೆಗೆ ತಪ್ಪಾಗಿ ಹಣ ಹಾಕಿದ್ದೇವೆ. ದಯವಿಟ್ಟು ಹಿಂದಿರುಗಿಸಿ ಎಂಬ ಮೆಸೇಜ್ ಬಂದ್ರೆ ಆ ಕೂಡಲೇ ಪ್ರತಿಕ್ರಿಯೆ ನೀಡಬಾರದು. ಒಂದು ವೇಳೆ ನೀವು ಪ್ರತಿಕ್ರಿಯೆ ನೀಡಲು ಆರಂಭಿಸಿದ್ರೆ, ಮಾತಿನಲ್ಲೇ ನಿಮ್ಮನ್ನು ಮರಳು ಮಾಡಿ, ನಿಮ್ಮಿಂದ ಒಟಿಪಿ ಪಡೆದುಕೊಂಡು ಹಣ ತೆಗೆದುಕೊಳ್ಳುತ್ತಾರೆ. ಇದನ್ನು ಜಂಪಡ್ ಡೆಪಾಸಿಟ್ ಸ್ಕ್ಯಾಮ್ ಎಂದು ಕರೆಯಲಾಗುತ್ತದೆ. ಜಂಪಡ್ ಡೆಪಾಸಿಟ್ ಸ್ಕ್ಯಾಮ್ ಅಂದರೆ ಏನು? ಜನರನ್ನು ಹೇಗೆ ಮೋಸಗೊಳಿಸಲಾಗುತ್ತೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಇದನ್ನೂ ಓದಿ: ಅಕೌಂಟ್ಗೆ ಅಚಾನಕ್ ದುಡ್ಡು ಬಂದ್ರೆ ಕೂಡ್ಲೇ ಬ್ಯಾಲೆನ್ಸ್ ಚೆಕ್ ಮಾಡ್ಲೇಬೇಡಿ! ಇದು ಹೊಸ ಸ್ಕ್ಯಾಮ್- ಡಿಟೇಲ್ಸ್ ಇಲ್ಲಿದೆ...
