ಅತಿಯಾದ ಬಿಸಿಲಿನ ಜೊತೆ ಅನಿಶ್ಚಿತ ಮಳೆಯ ಪರಿಣಾಮ ಕೃಷಿ ವಲಯದ ಮೇಲೆ ಭಾರಿ ಪರಿಣಾಮ ಬೀರಿದೆ. ಹೀಗಾಗಿ ತರಕಾರಿ ಬೆಲೆ ಗಗನಕ್ಕೇರಿದೆ.

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್

ಕೋಲಾರ (ಜೂ.19): ಅತಿಯಾದ ಬಿಸಿಲಿನ ಜೊತೆ ಅನಿಶ್ಚಿತ ಮಳೆಯ ಪರಿಣಾಮ ಕೃಷಿ ವಲಯದ ಮೇಲೆ ಭಾರಿ ಪರಿಣಾಮ ಬೀರಿದೆ. ಇದರಿಂದಾಗಿ ತರಕಾರಿ ಉತ್ಪಾದನೆ ಸಹ ಕುಂಠಿತವಾಗಿದ್ದು, ತರಕಾರಿ ಬೆಲೆ ದಿಡೀರ್ ಏರಿಕೆ ಆಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳ್ತಿದೆ. ಗುಣಮಟ್ಟ ತರಕಾರಿ ಸಿಗದೇ ರೈತರು ಪರದಾಟ. ತರಕಾರಿ ಅಂಗಡಿಯಲ್ಲಿ ವ್ಯಾಪಾರವಿಲ್ಲದೆ ಖಾಲಿ ಖಾಲಿ. ತರಕಾರಿ ರೇಟ್‌ ತಿಳಿದು ಗ್ರಾಹಕರ ಆಕ್ರೋಶ. ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆಯ ತರಕಾರಿ ಮಾರುಕಟ್ಟೆಗಳಲ್ಲಿ. ಕೋಲಾರ ಜಿಲ್ಲೆ ತರಕಾರಿ ಹಾಗೂ ಟೊಮೆಟೋ ಬೆಳೆಗಳಿಗೆ ಫೇಮಸ್‌, ಇಲ್ಲಿ ಬೆಳೆಯುವ ತರಕಾರಿಗಳು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವ್ಯಾಪಾರವಾಗುತ್ತೆ. 

ಆದ್ರೆ ಹವಮಾನ ವ್ಯತಿರಿಕ್ತದಿಂದ ರೈತರು ಹಾಕಿರುವ ತರಕಾರಿ ಬೆಳೆಗಳು ಕೈಗೆ ಸಿಗದೇ ತೋಟಗಳಲ್ಲೆ ಹಾಳಾಗುತ್ತಿದ್ದು, ಉತ್ತಮ ಗುಣಮಟ್ಟದ ತರಕಾರಿ ಮಾರಕಟ್ಟೆಗೆ ಬರುತ್ತಿಲ್ಲ. ಮಾರುಕಟ್ಟೆಯಲ್ಲಿ ನಿರೀಕ್ಷೆಯಂತೆ ತರಕಾರಿ ಬರದೇ ಇರೋದಕ್ಕೆ ದಲ್ಲಾಳಿಗಳು, ವ್ಯಾಪಾರಸ್ಥರು ಪಕ್ಕದ ಆಂಧ್ರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಆಮದು ಮಾಡಿಕೊಂಡು ಮಾರಾಟ ಮಾಡುವ ಅನಿವಾರ್ಯತೆ ಹೆಚ್ಚಾಗಿದ್ದು,ತರಕಾರಿ ಬೆಲೆ ಗಗನಕ್ಕೆ ಏರಿಕೆ ಆಗಿದೆ.

ಮಕ್ಕಳ ಮತ್ತು ಸಾರ್ವಜನಿಕರ ಜೀವದ ಜತೆ ಚೆಲ್ಲಾಟವಾಡ್ತಿದೆಯಾ ದಾಂಡೇಲಿಯ ಆಸ್ಪತ್ರೆಗಳು!?

ಇದರ ನಡುವೆ ಮುಂಗಾರು ಕೈ ಕೊಟ್ಟ ಪರಿಣಾಮ ತರಕಾರಿ ಬೆಲೆ ಏರಿಕೆ ಮತ್ತೊಂದು ಕಾರಣವಾಗಿದ್ದು, ಇರುವ ಅಲ್ಪಸ್ವಲ್ಪ ತರಕಾರಿಗೆ ಭಾರಿ ಡಿಮೆಂಡ್‌ ಬಂದಿದೆ. ಇದರಿಂದಾಗಿ ತರಕಾರಿ ಪ್ರಿಯರು, ಹೋಟೆಲ್‌ ಮಾಲೀಕರು ಹಾಗೂ ಗ್ರಾಹಕರಿಗೆ ಬೆಲೆ ಬಿಸಿ ತಟ್ಟಿದ್ದು, ಜೇಬಿಗೆ ಕತ್ತರಿ ಬೀಳ್ತಿದೆ.

ಇನ್ನು ಕೋಲಾರ ಬಹುತೇಕ ತರಕಾರಿ ಅಂಗಡಿಗಳಲ್ಲಿ ಗ್ರಾಹಕರು ಬಾರದೆ ಖಾಲಿ ಖಾಲಿಯಾಗಿ ಕಾಣ್ಸಿತ್ತಿದೆ. ಒಂದೂ ಕೆಜಿ ಖರೀದಿ ಮಾಡುವ ಗ್ರಾಹಕರು ಕಾಲು ಕೆಜಿ ಕೊಡಿ ಸಾಕು ಅಂತ ಖರೀದಿ ಮಾಡ್ತಿದ್ಧಾರೆ.ಇನ್ನು ಯಾವ್ಯಾವ ತರಕಾರಿಗಳ ಬೆಲೆ ಏರಿಕೆ ಆಗಿದೆ ಅಂತ ನೋಡೋದಾದ್ರೆ.

PUC Supplementary Exam Results: ನಾಳೆ ಬೆಳಗ್ಗೆ 11 ಗಂಟೆಗೆ ದ್ವಿತೀಯ ಪಿಯು ಪೂರಕ ಪರೀಕ್ಷೆ

ಟೊಮೊಟೊ : ಹಿಂದಿನ ದರ ( ಕೆಜಿ 20 ರೂ) ಈಗಿನ ( ಕೆಜಿ 40 ರೂ)
ಬೆಳ್ಳುಳ್ಳಿ : ಹಿಂದಿನ ದರ ( ಕೆಜಿ 40 ರೂ) ಈಗಿನ ( ಕೆಜಿ 120 ರೂ)
ಶುಂಠಿ : ಹಿಂದಿನ ದರ ( ಕೆಜಿ 40 ರೂ) ಈಗಿನ ( ಕೆಜಿ 200 ರೂ)
ಬೀನ್ಸ್‌ :ಹಿಂದಿನ ದರ ( ಕೆಜಿ 60 ರೂ) ಈಗಿನ ( ಕೆಜಿ 120 ರೂ)
ಕ್ಯಾರೇಟ್‌ : ಹಿಂದಿನ ದರ ( ಕೆಜಿ 40 ರೂ) ಈಗಿನ ( ಕೆಜಿ 80 ರೂ)
ಮೆಣಸಿನಕಾಯಿ : ಹಿಂದಿನ ದರ ( ಕೆಜಿ 40 ರೂ) ಈಗಿನ ( ಕೆಜಿ 70 ರೂ)
ಬಿಟ್ರೂಟ್‌ : ಹಿಂದಿನ ದರ ( ಕೆಜಿ 30 ರೂ) ಈಗಿನ ( ಕೆಜಿ 60 ರೂ)
ಮೂಲಂಗಿ : ಹಿಂದಿನ ದರ ( ಕೆಜಿ 20 ರೂ) ಈಗಿನ ( ಕೆಜಿ 40 ರೂ)
ಎಲೆ ಹಾಗೂ ಹೂ ಕೋಸು : ಹಿಂದಿನ ದರ ( ಕೆಜಿ 10 ರೂ) ಇಂದು ( ಕೆಜಿ 30 ರೂ)
ಬದನೆಕಾಯಿ : ಹಿಂದಿನ ದರ ( ಕೆಜಿ 30 ರೂ) ಈಗಿನ ( ಕೆಜಿ 70 ರೂ)
ಆಲೂಗಡ್ಡೆ : ಹಿಂದಿನ ದರ ( ಕೆಜಿ 20 ರೂ) ಈಗಿನ ( ಕೆಜಿ 20 ರೂ)
ಈರುಳ್ಳಿ : ಹಿಂದಿನ ದರ ( ಕೆಜಿ 20 ರೂ) ಈಗಿನ ( ಕೆಜಿ 25 ರೂ)
ಕೊತ್ತಂಬರಿ ಸೊಪ್ಪು: ಹಿಂದಿನ ದರ ( ಕಟ್ಟು 10) ಈಗಿನ ( ಕಟ್ಟು 50 ರೂ)

ಇನ್ನು ಮಳೆಯಾಗಿದ್ರೆ ರೈತರು ತರಕಾರಿ ಬೆಳೆಯುತ್ತಿದ್ರು, ಇದರ ನಡುವೆ ಉತ್ತಮ ಗುಣಮಟ್ಟದ ತರಕಾರಿ ಬಾರದೇ ತೋಟಗಳಲ್ಲೇ ಹಾಳಾಗಿ ಹೋಗ್ತಿದೆ. ತರಕಾರಿ ಸರಿಯಾಗಿ ಮಾರುಕಟ್ಟೆಗೆ ಬರುತ್ತಿಲ್ಲ, ಹೀಗಾಗಿ ತರಕಾರಿ ಬೆಲೆ ಏರಿಕೆ ಆಗಿದೆ. ಬೆಲೆ ಹೇಳಿದ್ರೆ ಸಾಕು ಗ್ರಾಹಕರು ಖರೀದಿ ಮಾಡದೇ ಹೋಗ್ತಿದ್ದಾರೆ ಅಂತಾರೆ ತರಕಾರಿ ಅಂಗಡಿಗಳ ವ್ಯಾಪಾರಸ್ಥರು.

ಒಟ್ಟಾರೆ ವಿಪರೀತ ಬಿಸಿಲಿನ ತಾಪಕ್ಕೆ ತರಕಾರಿ ಇಳುವರಿ ಕುಸಿತವಾಗಿದೆ. ಇದರ ಪರಿಣಾಮ ನೇರವಾದ ಪರಿಣಾಮ ಗ್ರಾಹಕರಿಗೆ ತಟ್ಟಿದ್ದು, ತರಕಾರಿ ಖರೀದಿ ಮಾಡೋದಕ್ಕೆ ಹಿಂದೆ ಮುಂದೆ ನೋಡ್ತಿದ್ದಾರೆ. ಇತ್ತ ಬೆಲೆ ಏರಿಕೆಯಿಂದ ತಿಂಗಳ ಮನೆ ನಿರ್ವಹಣೆ ಹೇಗೆ ಎನ್ನುವುದು ಚಿಂತೆಯಾಗಿದೆ. ಪ್ರತಿದಿನ ಬಳಸುವ ತರಕಾರಿ ಬೆಲೆಯೇ ಹೆಚ್ಚಾದರೆ ಅಡುಗೆಗೆ ಬಳಸೋದು ಹೇಗೆ? ಅನ್ನೊ ತಲೆನೋವು ಗೃಹಿಣಿಯರಿಗೆ ಹಾಗೂ ಹೋಟೆಲ್‌ ಮಾಲೀಕರಿಗೆ ತಂದೊಡ್ಡಿದೆ.