Asianet Suvarna News Asianet Suvarna News

ಬೆಲೆ ಏರಿಕೆ ಹಿನ್ನೆಲೆ: 2000 ಟನ್‌ವರೆಗೆ ಮಾತ್ರ ಗೋಧಿ ದಾಸ್ತಾನಿಗೆ ಅವಕಾಶ

ದೇಶದಲ್ಲಿ ಏರುತ್ತಿರುವ ಗೋಧಿ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಗೋಧಿ ದಾಸ್ತಾನು ಮಿತಿಯನ್ನು 2 ಸಾವಿರ ಟನ್‌ಗೆ ಇಳಿಕೆ ಮಾಡಿದೆ. ಇದು ಎಲ್ಲಾ ಸಗಟು ಮಾರಾಟಗಾರರು ಮತ್ತು ದೊಡ್ಡ ಪ್ರಮಾಣದ ಚಿಲ್ಲರೆ ಮಾರಾಟಗಾರರಿಗೆ ಅನ್ವಯವಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

To control rising wheat prices in the country, the central government has reduced the wheat stock limit to 2,000 tonnes akb
Author
First Published Sep 15, 2023, 8:04 AM IST

ನವದೆಹಲಿ: ದೇಶದಲ್ಲಿ ಏರುತ್ತಿರುವ ಗೋಧಿ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಗೋಧಿ ದಾಸ್ತಾನು ಮಿತಿಯನ್ನು 2 ಸಾವಿರ ಟನ್‌ಗೆ ಇಳಿಕೆ ಮಾಡಿದೆ. ಇದು ಎಲ್ಲಾ ಸಗಟು ಮಾರಾಟಗಾರರು ಮತ್ತು ದೊಡ್ಡ ಪ್ರಮಾಣದ ಚಿಲ್ಲರೆ ಮಾರಾಟಗಾರರಿಗೆ ಅನ್ವಯವಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಸರ್ಕಾರದ ಈ ನಿರ್ಧಾರವನ್ನು ಘೋಷಿಸಿದ ಆಹಾರ ಭದ್ರತಾ ಇಲಾಖೆಯ ಕಾರ್ಯದರ್ಶಿ (Food Security Department Secretary) ಸಂಜೀವ್‌ ಚೋಪ್ರಾ (Sanjeev Chopra), ‘ಬೆಲೆ ಏರಿಕೆಯನ್ನು ತಡೆಗಟ್ಟಲು ದಾಸ್ತಾನು ಮೇಲೆ ನಿಗಾ ವಹಿಸಲು ನಾವು ನಿರ್ಧರಿಸಿದ್ದೇವೆ. ಹೀಗಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಗಟು ಮತ್ತು ದೊಡ್ಡ ಪ್ರಮಾಣದ ಚಿಲ್ಲರೆ ಮಾರಾಟಗಾರರು ದಾಸ್ತಾನಿಡಬಹುದಾದ ಗೋಧಿಯ ಪ್ರಮಾಣವನ್ನು 3 ಸಾವಿರ ಟನ್‌ನಿಂದ 2 ಸಾವಿರ ಟನ್‌ಗೆ ಇಳಿಕೆ ಮಾಡಿದ್ದೇವೆ. ಈ ನಿಯಮ 2024ರ ಮಾರ್ಚ್‌ವರೆಗೂ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ರಾಷ್ಟ್ರೀಯ ಸರಕು ಮತ್ತು ಉತ್ಪನ್ನಗಳ ವಿನಿಮಯ (NCDEX) ದಲ್ಲಿ ಗೋಧಿ ಬೆಲೆ ಶೇ.4ರಷ್ಟು ಏರಿಕೆಯಾಗಿ ಕ್ವಿಂಟಾಲ್‌ಗೆ 2,550 ರು.ಗೆ ತಲುಪಿದೆ. ಹಾಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಕೇಂದ್ರದ ಅಕ್ಕಿ, ಗೋಧಿ ಮಾರಾಟಕ್ಕೆ ನೀರಸ ಪ್ರತಿಕ್ರಿಯೆ: ಎಫ್‌ಸಿಐ

75 ವರ್ಷಗಳ ಸಂಸದೀಯ ಇತಿಹಾಸ ಚರ್ಚೆ : ಸಿಇಸಿ ನೇಮಕ ಸೇರಿ 3 ಮಸೂದೆ ಅಂಗೀಕಾರ

ನವದೆಹಲಿ: ಸೆ.18 ರಿಂದ 5 ದಿನಗಳ ಕರೆಯಲಾಗಿರುವ ಸಂಸತ್ತಿನ ಉಭಯ ಸದನಗಳ ಅಧಿವೇಶನದ (two houses of Parliament) ಅಜೆಂಡಾವನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು, ಇದು ಭಾರಿ ಕುತೂಹಲವನ್ನು ಮೂಡಿಸಿದೆ. ಈ ಅಧಿವೇಶನದಲ್ಲಿ ಚರ್ಚೆಯಾಗಬಹುದು ಎಂದು ಅಂದಾಜಿಸಲಾಗಿದ್ದ ವಿಷಯಗಳನ್ನು ಹೊರತುಪಡಿಸಿ ಹೊಸ ವಿಷಯಗಳನ್ನು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ.

ಸಂಸತ್ತಿನ 75 ವರ್ಷಗಳ ಇತಿಹಾಸದ ಬಗ್ಗೆ ಮೊದಲ ದಿನದ ಕಲಾಪದಲ್ಲಿ ಚರ್ಚಿಸಲಾಗುತ್ತದೆ. ಜೊತೆಗೆ 3 ಮಸೂದೆಗಳನ್ನು ಮಂಡಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರ ನೇಮಕಕ್ಕೆ ಪ್ರಧಾನಿ, ಲೋಕಸಭೆಯ ವಿಪಕ್ಷ ನಾಯಕ ಮತ್ತು ಓರ್ವ ಕೇಂದ್ರ ಸಚಿವರನ್ನು ಒಳಗೊಂಡ ಸಮಿತಿ ರಚನೆಯ ಮಸೂದೆ, ವಕೀಲರ ತಿದ್ದುಪಡಿ ಮಸೂದೆ 2023 (Lawyers Amendment Bill 2023) ಮತ್ತು ಪೋಸ್ಟ್‌ ಆಫೀಸ್‌ ಮಸೂದೆ 2023ನ್ನು(Post Office Bill 2023) ಮಂಡಿಸಲಾಗುವುದು ಎಂದು ತಿಳಿಸಲಾಗಿದೆ.

ಕಷ್ಟ​ದ​ಲ್ಲಿದ್ದ 18 ದೇಶ​ಗ​ಳಿಗೆ ಭಾರ​ತದ ಗೋಧಿ: ವಿಶ್ವ​ಸಂಸ್ಥೆ ಶ್ಲಾಘ​ನೆ

ಈ 3 ಮಸೂದೆಗಳನ್ನು ಈಗಾಗಲೇ ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ. ವಕೀಲರ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಈಗಾಗಲೇ ಒಪ್ಪಿಗೆ ಸೂಚಿಸಿದೆ.  ಏಕರೂಪ ನಾಗರಿಕ ಸಂಹಿತೆ, ಒಂದು ದೇಶ ಒಂದು ಚುನಾವಣೆ, ಇಂಡಿಯಾ ಹೆಸರನ್ನು ಭಾರತ ಎಂದು ಬದಲಿಸುವುದು, ಅವಧಿಪೂರ್ವ ಚುನಾವಣೆ ಘೋಷಿಸಿ ಸಂಸತ್ತನ್ನು ವಿಸರ್ಜಿಸುವುದು.. ಇತ್ಯಾದಿ ಮಹತ್ವದ ವಿಚಾರಗಳು ಸರ್ಕಾರದ ಅಜೆಂಡಾದಲ್ಲಿ ಇವೆ ಎನ್ನಲಾಗಿತ್ತಾದರೂ ಅದಾವ್ಯುದೂ ಅಧಿಕೃತ ಕಾರ್ಯಸೂಚಿಯಲ್ಲಿ ಇಲ್ಲ.

Follow Us:
Download App:
  • android
  • ios