Asianet Suvarna News Asianet Suvarna News

ಕಷ್ಟ​ದ​ಲ್ಲಿದ್ದ 18 ದೇಶ​ಗ​ಳಿಗೆ ಭಾರ​ತದ ಗೋಧಿ: ವಿಶ್ವ​ಸಂಸ್ಥೆ ಶ್ಲಾಘ​ನೆ

ಕಳೆದ ವರ್ಷ ರಷ್ಯಾ- ಉಕ್ರೇನ್‌ ಯುದ್ಧದ ಪರಿಣಾಮವಾಗಿ ತೀವ್ರ ತೀವ್ರ ಆಹಾರದ ಕೊರತೆ ಎದುರಿಸುತ್ತಿದ್ದ 18 ರಾಷ್ಟ್ರಗಳಿಗೆ 18 ಲಕ್ಷ ಟನ್‌ ಗೋಧಿ ರಫ್ತು ಮಾಡಿದ್ದ ಭಾರತವನ್ನು ವಿಶ್ವಸಂಸ್ಥೆ ಶ್ಲಾಘಿಸಿದೆ. ಅಲ್ಲದೆ, ಸಿರಿ​ಧಾ​ನ್ಯ​ವನ್ನು ಜಾಗ​ತಿ​ಕ​ವಾಗಿ ಪ್ರಚಾರ ಮಾಡು​ವಲ್ಲಿ ಭಾರತ ಮಹ​ತ್ವದ ಪಾತ್ರ ವಹಿ​ಸಿದೆ ಎಂದೂ ಕೊಂಡಾ​ಡಿ​ದೆ.

India Aid to countries affected by war in Ukraine, gave wheat to 18 distressed countries: UN praise indias work akb
Author
First Published Jun 19, 2023, 7:56 AM IST

ನವದೆಹಲಿ: ಕಳೆದ ವರ್ಷ ರಷ್ಯಾ- ಉಕ್ರೇನ್‌ ಯುದ್ಧದ ಪರಿಣಾಮವಾಗಿ ತೀವ್ರ ತೀವ್ರ ಆಹಾರದ ಕೊರತೆ ಎದುರಿಸುತ್ತಿದ್ದ 18 ರಾಷ್ಟ್ರಗಳಿಗೆ 18 ಲಕ್ಷ ಟನ್‌ ಗೋಧಿ ರಫ್ತು ಮಾಡಿದ್ದ ಭಾರತವನ್ನು ವಿಶ್ವಸಂಸ್ಥೆ ಶ್ಲಾಘಿಸಿದೆ. ಅಲ್ಲದೆ, ಸಿರಿ​ಧಾ​ನ್ಯ​ವನ್ನು ಜಾಗ​ತಿ​ಕ​ವಾಗಿ ಪ್ರಚಾರ ಮಾಡು​ವಲ್ಲಿ ಭಾರತ ಮಹ​ತ್ವದ ಪಾತ್ರ ವಹಿ​ಸಿದೆ ಎಂದೂ ಕೊಂಡಾ​ಡಿ​ದೆ.

ಭಾನು​ವಾರ ಪಿಟಿಐ (PTI) ಸುದ್ದಿ​ಸಂಸ್ಥೆ ಜತೆ ಮಾತ​ನಾ​ಡಿದ ಅಂತಾರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ (IFAD) ಅಧ್ಯಕ್ಷ ಅಲ್ವಾರೊ ಲಾರಿಯೊ ‘ಜಾಗತಿಕ ಆಹಾರ ವ್ಯವಸ್ಥೆಯನ್ನು ಪರಿವರ್ತಿಸಬೇಕೆನ್ನುವ ವಿಶ್ವಸಂಸ್ಥೆಯ (United Nation) ನಿರ್ಧಾರಕ್ಕೆ ಅನುಗುಣವಾಗಿ ಭಾರತದ ಆದ್ಯತೆಗಳಿವೆ. ಉಕ್ರೇ​ನ್‌-ರಷ್ಯಾ (Ukraine-Russia war) ಯುದ್ಧದ ಕಾರಣ 18 ದೇಶ​ಗಳು ಆಹಾರದ ಕೊರತೆ ಅನು​ಭ​ವಿ​ಸು​ತ್ತಿ​ದ್ದವು. ಈ ವೇಳೆ 18 ಲಕ್ಷ ಟನ್‌ ಗೋಧಿ​ಯನ್ನು ಆ ಬಡ ದೇಶ​ಗ​ಳಿಗೆ ಭಾರತ ಕಳಿಸಿ ಹಸಿವು ನೀಗಿ​ಸಿ​ತು’ ಎಂದಿದ್ದಾರೆ.

ಕಾಶ್ಮೀರ ವಿಷಯಕ್ಕೆ ವಿಶ್ವಸಂಸ್ಥೆ ಸೂಕ್ತ ಪರಿಹಾರ: ಪಾಕ್‌ ನೆಲದಲ್ಲಿ ಚೀನಾ ಕ್ಯಾತೆ; ತಾಲಿಬಾನ್‌ ಜತೆಗೂ ಒಪ್ಪಂದ!

ಇದೇ ವೇಳೆ, ‘ಬ​ಡ​ವರ ಹಸಿವು ನೀಗಿ​ಸು​ವಲ್ಲಿ, ಹವಾ​ಮಾನ ಬದ​ಲಾ​ವಣೆ (climate change) ವಿರುದ್ಧ ರೈತರು ಹೋರಾ​ಡು​ವಲ್ಲಿ ಸಿರಿ​ಧಾ​ನ್ಯ​ಗಳು ಮಹ​ತ್ವದ ಪಾತ್ರ ವಹಿ​ಸು​ತ್ತವೆ. ಹೀಗಾಗಿ ರಿಇ​ಧಾ​ನ್ಯ​ಗಳ ಪುನ​ರು​ಜ್ಜೀ​ವ​ನ​ದಲ್ಲಿ ಭಾರತ ಪ್ರಮುಖ ಪಾತ್ರ ವಹಿ​ಸು​ತ್ತಿ​ದೆ’ ಎಂದೂ ಹೇಳಿ​ದ್ದಾ​ರೆ.  ಭಾರತವು ಪ್ರಪಂಚದ ದಕ್ಷಿಣ ಭಾಗದ ಮತ್ತು ಇತರ ದೇಶಗಳ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ ಎಂದು ಲಾರಿ​ಯೊ ಶ್ಲಾಘಿಸಿದ್ದಾರೆ.

ಮನ್‌ ಕೀ ಬಾತ್‌ಗೆ 100ರ ಸಂಭ್ರಮ: ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರ; ಪ್ರತಿ ಸಂಚಿಕೆಯೂ ವಿಶೇಷ ಎಂದ ನಮೋ

Follow Us:
Download App:
  • android
  • ios