Asianet Suvarna News Asianet Suvarna News

ಕೇಂದ್ರದ ಅಕ್ಕಿ, ಗೋಧಿ ಮಾರಾಟಕ್ಕೆ ನೀರಸ ಪ್ರತಿಕ್ರಿಯೆ: ಎಫ್‌ಸಿಐ

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡುವಂತೆ ಕೋರಿದ್ದನ್ನು ನಿರಾಕರಿಸಲಾಗಿದೆ. ಹೆಚ್ಚುವರಿ ಅಕ್ಕಿ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಈಗಾಗಲೆ ತಿಳಿಸಲಾಗಿದೆ ಎಂದ ಎಫ್‌ಸಿಐ ಪ್ರಧಾನ ವ್ಯವಸ್ಥಾಪಕ ಭೂಪೇಂದ್ರ ಸಿಂಗ್‌ ಭಾಟಿ 

Dismal Response to Central Government Sale of Rice Wheat Says FCI grg
Author
First Published Aug 9, 2023, 2:00 AM IST

ಬೆಂಗಳೂರು(ಆ.09):  ಭಾರತೀಯ ಆಹಾರ ನಿಗಮ (ಎಫ್‌ಸಿಐ)ದಿಂದ ಅಕ್ಕಿ ಮತ್ತು ಗೋಧಿ ಮಾರಾಟಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗಿರಣಿ ಮಾಲೀಕರು ಟೆಂಡರ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಎಫ್‌ಸಿಐ ಪ್ರಧಾನ ವ್ಯವಸ್ಥಾಪಕ ಭೂಪೇಂದ್ರ ಸಿಂಗ್‌ ಭಾಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಅಕ್ಕಿ ಮತ್ತು ಗೋಧಿ ದಾಸ್ತಾನು ಸಾಕಷ್ಟಿದೆ. ಪ್ರತಿ ಬುಧವಾರ ಇ-ಹರಾಜಿನ ಮೂಲಕ ಅಕ್ಕಿ, ಗೋಧಿ ಮಾರಾಟ ಮಾಡಲಾಗುತ್ತದೆ. ಅದರಂತೆ ಜುಲೈ 28ರಿಂದ ಆಗಸ್ಟ್‌ 2ರವರೆಗಿನ ಹರಾಜಿನಲ್ಲಿ 60,650 ಮೆಟ್ರಿಕ್‌ ಟನ್‌ ಗೋಧಿಯ ಪೈಕಿ, 26,430 ಮೆಟ್ರಿಕ್‌ ಟನ್‌ ಮಾತ್ರ ಖರೀದಿಯಾಗಿದೆ. 7.02 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿಯ ಪೈಕಿ 62,880 ಮೆಟ್ರಿಕ್‌ ಟನ್‌ ಮಾತ್ರ ಮಾರಾಟವಾಗಿದೆ. ಸಣ್ಣ ಮತ್ತು ಅತಿಸಣ್ಣ ವ್ಯಾಪಾರಿಗಳು ಟೆಂಡರ್‌ನಲ್ಲಿ ಪಾಲ್ಗೊಳ್ಳುವಂತೆ ಮಾಡಲು, ಕೇಂದ್ರ ಸರ್ಕಾರ 10 ಕ್ವಿಂಟಾಲ್‌ನಿಂದ 100 ಕ್ವಿಂಟಾಲ್‌ವರೆಗೆ ಬಿಡ್‌ ಮಾಡಲು ಅವಕಾಶ ಕಲ್ಪಿಸಿದೆ. ಆದರೂ ಖರೀದಿದಾರರು ಅಕ್ಕಿ ಮತ್ತು ಗೋಧಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಈ ವಾರ ಕೇವಲ 57 ಮಂದಿ ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಿದ್ದರು ಎಂದರು.

ಮತ್ತೆ ದೆಹಲಿಗೆ ತೆರಳಿದ ಸಚಿವ ಮುನಿಯಪ್ಪ: ಕೇಂದ್ರದಿಂದ ಅಕ್ಕಿ ತರಲು ಕೊನೆ ಕ್ಷಣದವರೆಗೆ ತಂತ್ರ !

ನ್ಯಾಯೋಚಿತ ಮತ್ತು ಸರಾಸರಿ ಗುಣಮಟ್ಟ(ಎಫ್‌ಎಕ್ಯೂ) ಅಡಿಯಲ್ಲಿ ಗೋಧಿ ಮೀಸಲು ಬೆಲೆ ಭಾರತದಾದ್ಯಂತ ಪ್ರತಿ ಕ್ವಿಂಟಾಲ್‌ಗೆ 2,150 ರು. ಮತ್ತು ಯುಆರ್‌ಎಸ್‌ ಅಡಿಯಲ್ಲಿ ಕ್ವಿಂಟಾಲ್‌ಗೆ 2,125 ರು. ನಿಗದಿ ಮಾಡಲಾಗಿದೆ. ಅಕ್ಕಿ ಮೀಸಲು ಬೆಲೆ ಕ್ವಿಂಟಾಲ್‌ಗೆ 3,100 ರು. ನಿಗದಿಯಾಗಿದೆ. ಮೌಲ್ಯವರ್ಧಿತ ಅಕ್ಕಿಗೆ ಪ್ರತಿ ಕ್ವಿಂಟಾಲ್‌ಗೆ ಹೆಚ್ಚುವರಿಯಾಗಿ 73 ರು. ಮೀಸಲು ಬೆಲೆ ಸೇರಿಸಲಾಗಿದೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಜಿಎಸ್‌ಟಿ ದಾಖಲೆ ನೀಡಿ ಹರಾಜಿನಲ್ಲಿ ಪಾಲ್ಗೊಳ್ಳಬಹುದು. ಹರಾಜಿನಲ್ಲಿ ಭಾಗವಹಿಸುವವರ ಹಣ ಸುರಕ್ಷಿತವಾಗಿರಲಿದೆ ಎಂದು ತಿಳಿಸಿದರು.

ಕಳೆದ ಒಂದು ವರ್ಷದಿಂದ 18.61 ಲಕ್ಷ ಮೆಟ್ರಿಕ್‌ ಟನ್‌ ಬಲವರ್ಧಿತ ಅಕ್ಕಿಯನ್ನು ರಾಜ್ಯದಲ್ಲಿ ವಿವಿಧ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಡಿಪೋಗಳಿಗೆ ನೀಡಲಾಗಿದೆ. ಅದೇ ರೀತಿ 22.54 ಲಕ್ಷ ಮೆಟ್ರಿಕ್‌ ಟನ್‌ ನಾನ್‌ ಫೋರ್ಟಿಫೈಡ್‌ ಅಕ್ಕಿಯನ್ನು ಸರ್ಕಾರಿ ಯೋಜನೆಗಳ ಅಡಿ ಹಾಗೂ ಎಥೆನಾಲ್‌ ಉತ್ಪಾದನೆಗೆ ಕಳುಹಿಸಲಾಗಿದೆ. 2023-24ರ ಜುಲೈವರೆಗೆ 69 ಸಾವಿರ ಮೆಟ್ರಿಕ್‌ ಟನ್‌ ಗೋಧಿ ಹಾಗೂ 7.83 ಲಕ್ಷ ಮೆಟ್ರಿಕ್‌ ಅಕ್ಕಿಯನ್ನು ರಾಜ್ಯದಲ್ಲಿ ಶೇಖರಿಸಲಾಗಿದೆ ಎಂದರು.

ರಾಜ್ಯದ ಬಳಿ ಸ್ವಲ್ಪವೂ ಅಕ್ಕಿ ದಾಸ್ತಾನಿಲ್ಲ: ಅನ್ನಭಾಗ್ಯ ಯೋಜನೆ ಜಾರಿ ಕಷ್ಟಕಷ್ಟ

ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡಲು ಸಾಧ್ಯವಿಲ್ಲ: ಎಫ್‌ಸಿಐ ಜಿಎಂ

ಬೆಂಗಳೂರು: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡುವಂತೆ ಕೋರಿದ್ದನ್ನು ನಿರಾಕರಿಸಲಾಗಿದೆ. ಹೆಚ್ಚುವರಿ ಅಕ್ಕಿ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಈಗಾಗಲೆ ತಿಳಿಸಲಾಗಿದೆ ಎಂದು ಎಫ್‌ಸಿಐ ಪ್ರಧಾನ ವ್ಯವಸ್ಥಾಪಕ ಭೂಪೇಂದ್ರ ಸಿಂಗ್‌ ಭಾಟಿ ಹೇಳಿದರು.

‘ಕರ್ನಾಟಕ ಮಾದರಿಯಲ್ಲಿಯೇ ಇನ್ನಿತರ ರಾಜ್ಯಗಳೂ ಹೆಚ್ಚುವರಿ ಅಕ್ಕಿಗೆ ಬೇಡಿಕೆ ಸಲ್ಲಿಸಿದ್ದವು. ಅದನ್ನೂ ನಿರಾಕರಿಸಲಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ತಡೆಯಲು ಅಕ್ಕಿ ಸಂಗ್ರಹ ಮಾಡಲಾಗಿದೆ. ರಾಷ್ಟ್ರೀಯ ಹಿತಾಸಕ್ತಿ ಕಾಯ್ದುಕೊಳ್ಳಲು ಕೆಲವೊಂದು ರಾಜ್ಯಗಳ ಬೇಡಿಕೆಯಂತೆ ಹೆಚ್ಚುವರಿ ಅಕ್ಕಿ ಪೂರೈಕೆ ಮಾಡಲಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios