ಹಣ ಗಳಿಸಿದ್ರೆ ಸಾಲೋದಿಲ್ಲ ಅದನ್ನು ಬಳಸುವ ವಿಧಾನ ತಿಳಿದಿರಬೇಕು. ಈಗಿರುವ ಹಣ ಮುಂದೆ ಇರದೆ ಇರಬಹುದು. ಹಾಗಾಗಿ ಭವಿಷ್ಯದ ಬಗ್ಗೆ ಆಲೋಚನೆ ಮಾಡಿ ಉಳಿತಾಯ, ಖರ್ಚು ಮಾಡ್ಬೇಕು.
ನಾವು ದುಡಿದು, ನಮ್ಮ ದಿನನಿತ್ಯದ ಅಗತ್ಯ ಪೂರೈಸುವ ಜೊತೆಗೆ ಮನೆ ಬಾಡಿಗೆ, ಇಷ್ಟವಾದ ಆಹಾರ ಸೇವನೆ ಮತ್ತು ವೈದ್ಯಕೀಯ ಸೇವೆಗೆ ಹಣ ಹೊಂದಿಸುವುದನ್ನು ಅನೇಕರು ಆರ್ಥಿಕ ಸ್ವಾತಂತ್ರ್ಯ ಎಂದುಕೊಂಡಿದ್ದಾರೆ. ಆದ್ರೆ ಆರ್ಥಿಕ ಸ್ವಾತಂತ್ರ್ಯ ಇದೆಲ್ಲವನ್ನೂ ಮೀರಿದ್ದಾರೆ. ಹಣವನ್ನು ಉಳಿಸುವುದು, ಹಣದುಬ್ಬರ ಮತ್ತು ದುಂದುವೆಚ್ಚ ಕಡಿಮೆ ಮಾಡುವುದು ಮತ್ತು ಕಾಲಾನಂತರದಲ್ಲಿ ಹೂಡಿಕೆ ಶುರು ಮಾಡುವುದಕ್ಕೆ ಹಣಕಾಸಿನ ಸ್ವಾತಂತ್ರ್ಯ ಎನ್ನಬಹುದು. ಮುಂದೆ ನಿಮ್ಮ ಪ್ರಾಥಮಿಕ ಆದಾಯ ಕಡಿಮೆಯಾಗಿದ್ದರೂ ಅಥವಾ ನಿಮ್ಮ ಆದಾಯ ಶೂನ್ಯವಾಗಿದ್ದರೂ ಹಿಂದೆ ನೀವು ಮಾಡಿದ್ದ ಆರ್ಥಿಕ ಸ್ವಾತಂತ್ರ್ಯ ನಿಮ್ಮನ್ನು ಕೈ ಹಿಡಿಯುತ್ತದೆ. ಆರ್ಥಿಕ ಸ್ವಾತಂತ್ರ್ಯ ಸಾಧಿಸಲು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆ ನಿಯಮಗಳು ಏನು ಹಾಗೆ ಅದನ್ನು ಹೇಗೆ ರೂಢಿಸಿಕೊಳ್ಳಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಆರ್ಥಿಕ (Financial) ಸ್ವಾತಂತ್ರ್ಯಕ್ಕೆ ನೀವು ಮಾಡಬೇಕಾಗಿದ್ದು ಏನು ? :
ನಿಮ್ಮ ಖರ್ಚ (Cost) ನ್ನು ಟ್ರ್ಯಾಕ್ (Track) ಮಾಡಿ : ಇದು ನಮ್ಮ ಜೀವನದಲ್ಲಿ ಬಹಳ ಮುಖ್ಯವಾಗುತ್ತದೆ. ನಮ್ಮ ಕೈ ಎಷ್ಟು ಹಣ ಬರ್ತಿದೆ ಎಂಬುದು ಗೊತ್ತಿರುತ್ತದೆ. ಆದ್ರೆ ಎಷ್ಟು ಖರ್ಚಾಗ್ತಿದೆ ಎಂಬ ಪರಿವೆ ನಮಗೆ ಇರೋದಿಲ್ಲ. ಬೇಕಾಬಿಟ್ಟಿ ಹಣ ಖರ್ಚು ಮಾಡಿರ್ತೇವೆ. ಅದು ತಪ್ಪು. ಎಷ್ಟು ಹಣ ಬರುತ್ತಿದೆ ಮತ್ತು ಎಷ್ಟು ಹೋಗುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ದೈನಂದಿನ ಶಾಪಿಂಗ್ ಪಟ್ಟಿಯನ್ನು ಮಾಡಬೇಕು.
Business Idea : ಮೂರು ಲಕ್ಷ ಹೂಡಿಕೆ ಮಾಡಿ, ಪ್ರತಿ ತಿಂಗಳು 60 ಸಾವಿರ ಗಳಿಸಿ
ತಿಂಗಳ, ವಾರ್ಷಿಕ ಬಜೆಟ್ ಬಹಳ ಮುಖ್ಯ : ನಿಮ್ಮ ಜೀವನಶೈಲಿಗೆ ಸೂಕ್ತವಾದ ಬಜೆಟ್ ಅನ್ನು ತಯಾರಿಸಿ. ನಿಮ್ಮ ಹಣವನ್ನು ನೀವು ಹೇಗೆ ಖರ್ಚು ಮಾಡ್ಬೇಕು ಎಂಬುದು ನಿಮಗೆ ಮೊದಲೇ ತಿಳಿದಿದ್ದರೆ ಉಳಿತಾಯ ಸುಲಭವಾಗುತ್ತದೆ. ಸಾಲದ ಹೊರೆ ಮೈಮೇಲೆ ಬೀಳುವುದಿಲ್ಲ.
ತುರ್ತು ನಿಧಿಯನ್ನು ರಚಿಸಿ : ತುರ್ತು ನಿಧಿ ಅತ್ಯಂತ ಅವಶ್ಯಕ. ಅನೇಕ ಬಾರಿ ಅನಿರೀಕ್ಷಿತವಾಗಿ ಖರ್ಚು ಬಂದಿರುತ್ತದೆ. ಆಗ ತಬ್ಬಿಬ್ಬಾಗುವ ಬದಲು ಮೊದಲೇ ಅದಕ್ಕೆ ಒಂದಿಷ್ಟು ಹಣ ಕೂಡಿಟ್ಟರೆ ಒಳ್ಳೆಯದು.
ಬಿಲ್ ಪಾವತಿ ಮರೆಯಬೇಡಿ : ಬಿಲ್ ಪಾವತಿ ಮರೆತ್ರೆ ವಿನಃ ದಂಡ ವಿಧಿಸಬೇಕಾಗುತ್ತದೆ. ಅದ್ರ ಹೊಣೆ ಹೆಚ್ಚಾಗುತ್ತದೆ. ಹಾಗಾಗಿ ಬಿಲ್ ಪಾವತಿಯನ್ನು ಸಮಯಕ್ಕೆ ಸರಿಯಾಗಿ ಮುಗಿಸಿದ್ರೆ ಒಳ್ಳೆಯದು.
ಅನಗತ್ಯ ಶುಲ್ಕಕ್ಕೆ ಬ್ರೇಕ್ : ಮೂರ್ನಾಲ್ಕು ಕ್ರೆಡಿಟ್ ಕಾರ್ಡ್ ಬಳಕೆ, ಮೂರ್ನಾಲ್ಕು ಬ್ಯಾಂಕ್ ಖಾತೆ ಹೊಂದಿದ್ರೆ ಅನಗತ್ಯ ಖರ್ಚು ಹೆಚ್ಚು. ಎಲ್ಲ ಬ್ಯಾಂಕ್ ಗಳು ನಿರ್ವಹಣೆ ಹೆಸರಿನಲ್ಲಿ ನಿಮ್ಮಿಂದ ಹಣ ಪಡೆಯುತ್ತವೆ. ಹಾಗಾಗಿ ಇಂಥ ಖರ್ಚು ಕಡಿಮೆ ಮಾಡಲು ಮುಂದಾಗಿ.
ದುಬಾರಿ ವಸ್ತುಗಳಿಗೆ ಹಣವನ್ನು ಪಾವತಿಸಿ : ಉದಾಹರಣೆಗೆ 65-ಇಂಚಿನ ಟಿವಿಯನ್ನು ಇಎಂಐನಲ್ಲಿ ಖರೀದಿಸಲು ಹೋಗ್ಬೇಡಿ. ನಗದು ನೀಡಿ ಖರೀದಿ ಮಾಡಿದ್ರೆ ನಿಮ್ಮ ಬಡ್ಡಿ ಉಳಿಯುತ್ತದೆ.
ಕ್ರೆಡಿಟ್ ಕಾರ್ಡ್‌ಗಳನ್ನು ಬುದ್ಧಿವಂತಿಕೆಯಿಂದ ಬಳಸಿ : ಕ್ರೆಡಿಟ್ ಕಾರ್ಡ್ ಇದೆ ಎಂಬ ಕಾರಣಕ್ಕೆ ಅನಗತ್ಯ ವಸ್ತು ಖರೀದಿಸ್ಬೇಡಿ. ಜೊತೆಗೆ ಅದರ ಬಿಲ್ ಸಮಯಕ್ಕೆ ಸರಿಯಾಗಿ ಪಾವತಿ ಮಾಡಿದ್ದೀರಾ ಎಂಬುದನ್ನು ಪರಿಶೀಲಿಸಿ.
ನಿಮ್ಮ ಉಳಿತಾಯವನ್ನು ವೈವಿಧ್ಯಗೊಳಿಸಿ : ಹಣದುಬ್ಬರ ಮತ್ತು ಇತರ ನಕಾರಾತ್ಮಕ ಮಾರುಕಟ್ಟೆ ಅಂಶಗಳಿಂದ ನಿಮ್ಮ ಉಳಿತಾಯವನ್ನು ರಕ್ಷಿಸಲು ನೀವು ಬೇರೆ ಬೇರೆ ಕಡೆ ಉಳಿತಾಯ ಮಾಡ್ಬೇಕು. ಒಂದು ಕಡೆ ನಷ್ಟವಾದ್ರೂ ಇನ್ನೊಂದು ಕಡೆಯ ಉಳಿತಾಯ ನಿಮ್ಮ ಕೈ ಹಿಡಿಯಬೇಕು.
ನಿವೃತ್ತಿಗಾಗಿ ಉಳಿತಾಯ : ನಿಮ್ಮ ವಯಸ್ಸು ಏನೇ ಇರಲಿ, ವೃದ್ಧಾಪ್ಯಕ್ಕಾಗಿ ಹಣ ಉಳಿಸಲು ಪ್ರಾರಂಭಿಸುವುದು ಬಹಳ ಮುಖ್ಯ.
Business Idea: ಬಹುಬೇಡಿಕೆಯ ಈ ಬ್ಯುಸಿನೆಸ್ ಮಾಡಿ, ತಿಂಗಳಿಗೆ 10 ಲಕ್ಷ ಗಳಿಸಿ
ಹೂಡಿಕೆ ತಂತ್ರವನ್ನು ರಚಿಸಿ : ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಹೂಡಿಕೆಯಲ್ಲಿ ಹಲವು ವಿಧಗಳಿವೆ. ಸರಿಯಾಗಿ ತಿಳಿದು ಹೂಡಿಕೆ ಮಾಡಿ.
