Business Idea : ಮೂರು ಲಕ್ಷ ಹೂಡಿಕೆ ಮಾಡಿ, ಪ್ರತಿ ತಿಂಗಳು 60 ಸಾವಿರ ಗಳಿಸಿ

ಹೆಚ್ಚು ಹಣ ಹೂಡಿಕೆ ಮಾಡದ, ಮನೆಯಲ್ಲೇ ಮಾಡಬಹುದಾದ ಬ್ಯುಸಿನೆಸ್ ಬಗ್ಗೆ ಎಲ್ಲರೂ ಹುಡುಕಾಟ ನಡೆಸ್ತಿರ್ತಾರೆ. ಹೆಚ್ಚು ಬೇಡಿಕೆಯಿರುವ ಹಾಗೂ ಕಡಿಮೆ ಬಂಡವಾಳದ ಬ್ಯುಸಿನೆಸ್ ಬಗ್ಗೆ ನಾವು ಹೇಳ್ತೇವೆ. ಇದ್ರಲ್ಲಿ ತಿಂಗಳಿಗೆ 50 ಸಾವಿರಕ್ಕಿಂತ ಹೆಚ್ಚಿನ ಹಣ ಗಳಿಸಬಹುದು.
 

Business Idea Start Honey Jam manufacturing unit investing 3 lakhs

ಸ್ವಂತ ವ್ಯವಹಾರವನ್ನು ಪ್ರಾರಂಭಿಸುವ ಯೋಜನೆಯನ್ನು ನೀವು ಹೊಂದಿದ್ದರೆ ಕೆಲವೊಂದು ವ್ಯವಹಾರ್ವನ್ನು ಪ್ರಾರಂಭಿಸಿ ದೊಡಡ ಲಾಭವನ್ನು ಪಡೆಯಬಹುದು. ಈ ವ್ಯವಹಾರದ ಪ್ರಮುಖ ವಿಷಯವೆಂದರೆ ನೀವು ಅದನ್ನು ನಿಮ್ಮ ಮನೆಯಿಂದಲೇ ಪ್ರಾರಂಭಿಸಬಹುದು ಮತ್ತು ಇದಕ್ಕೆ ಹೆಚ್ಚಿನ ಹೂಡಿಕೆಯ ಅಗತ್ಯವಿರುವುದಿಲ್ಲ. ಕಡಿಮೆ ಹೂಡಿಕೆ ಮಾಡಿ ನೀವು ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಇಂದು ನಾವು ಯಾವ ವ್ಯವಹಾರವನ್ನು ಮನೆಯಲ್ಲೇ ಮಾಡಿ ಹೆಚ್ಚು ಲಾಭ ಗಳಿಸಬಹುದು ಎಂಬುದನ್ನು ನಿಮಗೆ ಹೇಳ್ತೇವೆ. ನೀವು ಮನೆಯಲ್ಲಿಯೇ ಶುರು ಮಾಡಬಹುದಾದ ವ್ಯವಹಾರಗಳಲ್ಲಿ ಜೇನಿನ ಜಾಮ್ ಒಂದು. ಖಾದಿ ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಈ ವ್ಯವಹಾರದ ಬಗ್ಗೆ ಸಂಪೂರ್ಣ ವರದಿಯನ್ನು ಸಿದ್ಧಪಡಿಸಿದೆ. ಇದರ ಆಧಾರದ ಮೇಲೆ  ನೀವು ವ್ಯವಹಾರವನ್ನು ಪ್ರಾರಂಭಿಸಬಹುದು. 

ಜೇನು ಜಾಮ್ (Honey Jam) ಮಾಡುವ ವ್ಯವಹಾರ : ಜೇನುತುಪ್ಪ ಪೌಷ್ಟಿಕಾಂಶ (Nutrition) ವನ್ನು ಹೊಂದಿದೆ.  ಇದನ್ನು ವಿವಿಧ ಆಹಾರ ಮತ್ತು ಔಷಧಿ (Medicine)ಗೆ ಬಳಸಲಾಗುತ್ತದೆ. ಜೇನುತುಪ್ಪಕ್ಕೆ ಹೆಚ್ಚಿನ ಬೇಡಿಕೆಯಿದೆ. ಜೇನುತುಪ್ಪ ಮಾತ್ರವಲ್ಲ ಜೇನುತುಪ್ಪ ಬಳಸಿ ಮಾಡುವ ಆಹಾರ (Food) ಕ್ಕೂ ಹೆಚ್ಚಿನ ಬೇಡಿಕೆಯಿದೆ. ಜೇನು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಜನರು ಅದನ್ನು ಬೇರೆ ಬೇರೆ ವಿಧದಲ್ಲಿ ಸೇವನೆ ಮಾಡಲು ಬಯಸ್ತಾರೆ. ಹೆಚ್ಚು ಲಾಭ ತರಬಲ್ಲ ಜೇನತುಪ್ಪ ಜಾಮನ್ನು ನೀವು ಮನೆಯಲ್ಲಿಯೇ ಸಿದ್ಧಪಡಿಸಬಹುದು.

ಜೇನು ಜಾಮ್ ಮಾಡುವ ವಿಧಾನ : ಜೇನು ತುಪ್ಪದ ಜಾಮ್ ಮಾಡುವ ಪ್ರಕ್ರಿಯೆ ತುಂಬಾ ಸುಲಭ. 3 ಮಾವಿನ ಹಣ್ಣು, 1 ಮಧ್ಯಮ ಗಾತ್ರದ ಪಪ್ಪಾಯಿ, ಒಂದು ಅನಾನಸ್, 5 ಪೇರಲೆ ಹಣ್ಣನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಮತ್ತು 10 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ. ಮಿಕ್ಸರ್ ಅಥವಾ ಗ್ರ್ಯಾಂಡರ್ ಸಹಾಯದಿಂದ  ಹಣ್ಣುಗಳನ್ನು ಮಿಕ್ಸಿ ಮಾಡಿ. ನಂತ್ರ  ಸ್ಟೀಲ್ ಪಾತ್ರೆಯಲ್ಲಿ ಸಕ್ಕರೆ ಮತ್ತು ಸಿಟ್ರಿಕ್ ಆಮ್ಲ ಹಾಕಿ 5 ನಿಮಿಷ ಕುದಿಸಿ. ಇದಕ್ಕೆ 25 ಮಿಲಿ ಪೆಕ್ಟಿನ್ ಸೇರಿಸಿ ಮತ್ತು ನಿರಂತರವಾಗಿ ಬೆರೆಸಿ 2 ನಿಮಿಷಗಳ ಕಾಲ ಕುದಿಸಿ. ಈಗ ಕುದಿಸುವುದನ್ನು ನಿಲ್ಲಿಸಿ ಮತ್ತು ಅದಕ್ಕೆ 2 ಗ್ರಾಂ ಪೊಟ್ಯಾಸಿಯಮ್ ಮೆಟಾಬಿಸಲ್ಫೈಟ್ ಸಂರಕ್ಷಕಗಳನ್ನು ಸೇರಿಸಿ. ಸ್ವಲ್ಪ ಪ್ರಮಾಣದ ನೀರನ್ನು ಸೇರಿಸಿದ ನಂತರ, ಧಾರಕವನ್ನು ಬಿಗಿಯಾಗಿ ಮುಚ್ಚಿ. ಇದು 65 ಡಿಗ್ರಿ ಸೆಲ್ಸಿಯಸ್‌ಗೆ ತಣ್ಣಗಾದ ನಂತ್ರ  ಜೇನುತುಪ್ಪವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ. ಇದರ ನಂತರ  ಅದನ್ನು 500 ಮಿಲಿ ಗಾಜಿನ ಬಾಟಲಿಗಳಲ್ಲಿ ತುಂಬಿಸಿ ಮತ್ತು ಅದನ್ನು ಸೀಲ್ ಮಾಡಿ.

Business Idea: ಬಹುಬೇಡಿಕೆಯ ಈ ಬ್ಯುಸಿನೆಸ್ ಮಾಡಿ, ತಿಂಗಳಿಗೆ 10 ಲಕ್ಷ ಗಳಿಸಿ

ಜೇನುತುಪ್ಪದ ಜಾಮ್‌ಗೆ ಹೂಡಿಕೆ ಎಷ್ಟು ? : ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಸಿದ್ಧಪಡಿಸಿದ ಪ್ರಾಜೆಕ್ಟ್ ಪ್ರೊಫೈಲ್ ವರದಿಯ ಪ್ರಕಾರ, ಜೇನು ಜಾಮ್ ಮಾಡುವ ವ್ಯವಹಾರವನ್ನು ಪ್ರಾರಂಭಿಸಲು ನಿಮ್ಮ ಸ್ವಂತ ಜಾಗವನ್ನು ನೀವು ಹೊಂದಿರಬೇಕು. ನಿಮಗೆ ಸ್ಥಳವಿಲ್ಲದಿದ್ದರೆ, ನೀವು ಬಾಡಿಗೆಗೆ ಪಡೆಯಬಹುದು. ಉಪಕರಣಗಳ ಖರೀದಿಗೆ 1.50 ಲಕ್ಷ ರೂಪಾಯಿ ಖರ್ಚಾಗುತ್ತದೆ.  ಅಲ್ಲದೆ 1.65 ಲಕ್ಷ ರೂಪಾಯಿ ಉಳಿದ ಖರ್ಚಿಗೆ ಅಗತ್ಯ. ಹೀಗಾಗಿ ಒಟ್ಟು ಯೋಜನಾ ವೆಚ್ಚ 3,15,000 ರೂಪಾಯಿಯಾಗುತ್ತದೆ.

Earn Money: ದಿನದಲ್ಲಿ ಗಂಟೆ ಕೆಲಸ ಮಾಡಿ, ಹಣ ಗಳಿಸಿ 

ಎಷ್ಟು ಆದಾಯ ? : ಪ್ರಾಜೆಕ್ಟ್ ರಿಪೋರ್ಟ್ ಪ್ರಕಾರ ಶೇ.100 ರಷ್ಟು ಸಾಮರ್ಥ್ಯ ಬಳಸಿ ಉತ್ಪಾದನೆ ಮಾಡಿದರೆ ವಾರ್ಷಿಕ 7 ಲಕ್ಷ ರೂಪಾಯಿ ಮೌಲ್ಯದ ಜಾಮ್ ಉತ್ಪಾದಿಸಲು ಸಾಧ್ಯವಾಗುತ್ತದೆ. ಎಲ್ಲ ಖರ್ಚುಗಳನ್ನು ಕಳೆದು ನೀವು ಪ್ರತಿ ತಿಂಗಳು ಸುಮಾರು 60,000 ರೂಪಾಯಿ ಆದಾಯ ಗಳಿಸಬಹುದು. 
 

Latest Videos
Follow Us:
Download App:
  • android
  • ios