ಚೆನ್ನೈ(ಫೆ.17): ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ತಮಿಳುನಾಡಿನ ಪೆಟ್ರೋಲ್‌ ಪಂಪ್‌ವೊಂದು 1-12ನೇ ತರಗತಿ ಮಕ್ಕಳಿಗೆ ಟಾಸ್ಕ್‌ವೊಂದನ್ನು ನೀಡಿ, ಗೆದ್ದವರಿಗೆ 1 ಲೀಟರ್‌ ವರೆಗೆ ಪೆಟ್ರೋಲ್‌ ಅನ್ನು ಕೊಡುಗೆಯಾಗಿ ನೀಡುವ ಆಫರ್‌ ನೀಡಿದೆ.

ತಮಿಳುನಾಡಿನ ಖ್ಯಾತ ಸಾಹಿತಿ ತಿರುವಳ್ಳುವರ್‌ ಅವರ ತಿರುಕ್ಕುರಲ್‌ನಲ್ಲಿರುವ (ಸಣ್ಣ ಪದ್ಯ) 10 ಜೋಡಿ ಪದಗಳನ್ನು ಕಂಠಪಾಠ ಮಾಡಿ ವಾಚಿಸಿದರೆ ಅರ್ಧ ಲೀಟರ್‌ ಪೆಟ್ರೋಲ್‌, 20 ಪದ್ಯಗಳನ್ನು ವಾಚಿಸಿದರೆ 1 ಲೀಟರ್‌ ಪೆಟ್ರೋಲ್‌ ಅನ್ನು ಬಹುಮಾನವಾಗಿ ನೀಡುವುದಾಗಿ ವಳ್ಳುವರ್‌ ಏಜೆನ್ಸಿಯ ನಾಗಂಪಲ್ಲಿಯಲ್ಲಿರುವ ಪೆಟ್ರೋಲ್‌ ಪಂಪ್‌ ಘೋಷಿಸಿದೆ.

ಸಚ್ಚಾರಿತ್ರ್ಯ, ಸಂಪತ್ತು, ಪ್ರೀತಿಯ ಕುರಿತ ತಿರುಕ್ಕುರಲ್‌ನಲ್ಲಿ 7 ಅಕ್ಷರಗಳ 1330 ಜೋಡಿ ಪದಗಳಿವೆ. ತಿರುಕ್ಕುರಲ್‌ ಓದನ್ನು ಉತ್ತೇಜಿಸುವ ಸಲುವಾಗಿ ಈ ಆಫರ್‌ ನೀಡಿದೆ. ತಮಿಳುನಾಡಿನಲ್ಲಿ ಲೀ. ಪೆಟ್ರೋಲ್‌ ಬೆಲೆ 91 ರು. ಮತ್ತು ಡೀಸೆಲ್‌ ಬೆಲೆ 85 ರು.ಗೆ ಏರಿಕೆಯಾಗಿದೆ.

100ರೂ. ಗಡಿಗೆ ಪೆಟ್ರೋಲ್‌, 90 ರೂ ದಾಟಿದ ಡೀಸೆಲ್‌!

ಈ ಒಂದು ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ 5 ರು.ನಷ್ಟು ಇಳಿಕೆ!

ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯಿಂದ ಕಂಗೆಟ್ಟಜನರಿಗೆ ಮೇಘಾಲಯ ಸರ್ಕಾರ ಭರ್ಜರಿ ನೆರವು ನೀಡಿದೆ. ಎರಡೂ ತೈಲಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ರಾಜ್ಯ ಸರ್ಕಾರ ಕ್ರಮವಾಗಿ ಶೇ.12ರಷ್ಟುಕಡಿತ ಮಾಡಿದೆ.

ಹೀಗಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಕ್ರಮವಾಗಿ ಲೀ.ಗೆ 5 ರು. ನಷ್ಟುಇಳಿಕೆಯಾಗಿದೆ. ಪರಿಣಾಮ ಪೆಟ್ರೋಲ್‌ ದರ 91.26 ರು.ನಿಂದ 85.86 ರು.ಗೆ ಮತ್ತು ಡೀಸೆಲ್‌ ಬೆಲೆ 86.23 ರು.ನಿಂದ 79.13 ರು.ಗೆ ಇಳಿಕೆಯಾಗಿದೆ. ಕೆಲ ದಿನಗಳ ಹಿಂದೆ ಕೂಡಾ ಇದೇ ರೀತಿ ತೆರಿಗೆ ಕಡಿತ ಮಾಡಿ ದರವನ್ನು ತಲಾ 2 ರು.ನಷ್ಟುಇಳಿಕೆ ಮಾಡಿತ್ತು.