ಏರ್ ಟೆಲ್, ಜಿಯೋಗೆ BSNL ಟಕ್ಕರ್; 150 ದಿನಗಳ ಪ್ಲ್ಯಾನ್ ಕೇವಲ 397ರೂ.ಗೆ!

ಖಾಸಗಿ ಟೆಲಿಕಾಮ್ ಸಂಸ್ಥೆಗಳಾದ ಜಿಯೋ ಹಾಗೂ ಏರ್ ಟೆಲ್ ಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆ ಬಿಎಸ್ ಎನ್ ಎಲ್ ಸ್ಪರ್ಧೆ ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬಿಎಸ್ ಎನ್ ಎಲ್ PV_397 ಪ್ಲ್ಯಾನ್ ಪರಿಚಯಿಸಿದೆ. 397ರೂ.ಮ ಈ ಪ್ಲ್ಯಾನ್ ವ್ಯಾಲಿಡಿಟಿ ಅವಧಿ 150 ದಿನಗಳು ಅಂದ್ರೆ 5 ತಿಂಗಳು. 
 

This plan of BSNL saved the sixes of Airtel Jio The plan will run for 150 days for only Rs 397 anu

ನವದೆಹಲಿ (ಮಾ.13): ಕಡಿಮೆ ಮೊತ್ತಕ್ಕೆ ಅಧಿಕ ಅವಧಿಯ ಪ್ಲ್ಯಾನ್ ನೀಡುವ ಟೆಲಿಕಾಮ್ ಸಂಸ್ಥೆಯತ್ತ ಜನರು ಆಕರ್ಷಿತರಾಗೋದು ಸಾಮಾನ್ಯ. ಸಾಮಾನ್ಯವಾಗಿ ಖಾಸಗಿ ಟೆಲಿಕಾಮ್ ಕಂಪನಿಗಳು ಅತ್ಯಾಕರ್ಷಕ ಆಫರ್ ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುವ ಕೆಲಸ ಮಾಡುತ್ತವೆ. ಜಿಯೋ ಹಾಗೂ ಏರ್ ಟೆಲ್ ಆಗಾಗ ಕರೆ ಹಾಗೂ ಇಂಟರ್ನೆಟ್ ವಿಶೇಷ ಪ್ಲ್ಯಾನ್ ಗಳನ್ನು ಪರಿಚಯಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ತಮ್ಮತ್ತ ಸೆಳೆದುಕೊಳ್ಳೋದು ತಿಳಿದೇ ಇದೆ.  ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಮಾತ್ರ ಈ ಸ್ಪರ್ಧೆಗಳ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿದ್ದು ಕಡಿಮೆ. ಆದರೆ, ಈಗ ಬಿಎಸ್ ಎನ್ ಎಲ್  ಸಂಸ್ಥೆ ಜಿಯೋ, ಏರ್ ಟೆಲ್ ಸೇರಿದಂತೆ ಖಾಸಗಿ ಕಂಪನಿಗಳಿಗೆ ಟಕ್ಕರ್ ನೀಡಲು ಅನೇಕ ವಿನೂತನ ಪ್ಲ್ಯಾನ್ ಗಳನ್ನು ಪರಿಚಯಿಸುತ್ತಲಿದೆ. ಕಡಿಮೆ ಮೊತ್ತಕ್ಕೆ ಹೆಚ್ಚಿನ ಅವಧಿಯ ವ್ಯಾಲಿಡಿಟಿ ಹೊಂದಿರುವ ಪ್ಲ್ಯಾನ್ ಗಳನ್ನು ಬಿಎಸ್ ಎನ್ ಎಲ್ ಹೊರತಂದಿದೆ. ಇದರಲ್ಲಿ 397ರೂ. ಪ್ಲ್ಯಾನ್ ಕೂಡ ಒಂದು. ಈ ಪ್ಲ್ಯಾನ್ ವ್ಯಾಲಿಡಿಟಿ ಅವಧಿ 150 ದಿನಗಳು ಅಂದ್ರೆ 5 ತಿಂಗಳು. ಹಾಗಾದ್ರೆ ಬಿಎಸ್ ಎನ್ ಎಲ್ ಈ ವಿಶೇಷ ಪ್ಲ್ಯಾನ್ ಬಗ್ಗೆ ತಿಳಿಯೋಣ.

ಬಿಎಸ್ ಎನ್ ಎಲ್ PV_397 ಪ್ಲ್ಯಾನ್
ಇದು 150 ದಿನಗಳ ಅವಧಿಯ ಪ್ಲ್ಯಾನ್ ಆಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಅನಿಯಮಿತ ವಾಯ್ಸ್ ಕಾಲಿಂಗ್ ಸೌಲಭ್ಯ ಸಿಗಲಿದೆ. ಇದನ್ನು ಬಳಸಿಕೊಂಡು ಸ್ಥಳೀಯ, ಎಸ್ ಟಿಡಿಹಾಗೂ ರೋಮಿಂಗ್ ಕರೆಗಳನ್ನು ಮಾಡಬಹುದು. ಇನ್ನು ಅನಿಯಮಿತ ಕರೆ ಅವಕಾಶ ಕೂಡ ಇದೆ. ಪ್ರತಿದಿನ 2ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ. ಇನ್ನು ಪ್ರತಿದಿನ 100 ಉಚಿತ ಎಸ್ ಎಂಎಸ್ ಸೌಲಭ್ಯವಿದೆ. ಈ ಎಲ್ಲ ಸೌಲಭ್ಯ ಗಳನ್ನು 30 ದಿನಗಳ ಅವಧಿಗೆ ನೀಡಲಾಗುತ್ತದೆ. 

ಟೆಲಿಕಾಂ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು, ಭಾರತದ 238 ನಗರದಲ್ಲಿ 5G ಸೇವೆ ಲಭ್ಯ!

ಏರ್ ಟೆಲ್-ಜಿಯೋಗೆ ಹೊಡೆತ
ಜಿಯೋ 395 ರೂಪಾಯಿ ಪ್ಲ್ಯಾನ್ ಲಭ್ಯವಿದ್ದು, ಇದರ ಅವಧಿ 84 ದಿನಗಳು. ಈ ಪ್ಲ್ಯಾನ್ ನಲ್ಲಿ ಅನಿಯಮಿತ ಕರೆ ಹಾಗೂ ಪ್ರತಿದಿನ 1000 ಎಸ್ ಎಂಎಸ್ ಕಳುಹಿಸುವ ವ್ಯವಸ್ಥೆಯಿದೆ. ಇದರೊಂದಿಗೆ 6 ಜಿಬಿ ಡೇಟಾ ಕೂಡ ನೀಡಲಾಗುತ್ತಿದೆ. ಇದರೊಂದಿಗೆ ಜಿಯೋ ಏಪ್ಸ್ ಸೌಲಭ್ಯ ಕೂಡ ಸಿಗಲಿದೆ. ಇನ್ನು ಏರ್ ಟೆಲ್ ಈ ದರ ಅಥವಾ ಇದರ ಆಸುಪಾಸಿನ ದರದಲ್ಲಿ ಯಾವುದೇ ಪ್ಲ್ಯಾನ್ ಹೊಂದಿಲ್ಲ. ಏರ್ ಟೆಲ್ 455 ರೂ. ಪ್ಲ್ಯಾನ್ ಇದ್ದು, ಇದರ ಅವಧಿ 84 ದಿನಗಳಾಗಿವೆ. ಇದರಲ್ಲಿ 6 ಜಿಬಿ ಡೇಟಾ ನೀಡಲಾಗುತ್ತಿದೆ. ಇನ್ನೂ ಕೆಲವು ಸೌಲಭ್ಯಗಳನ್ನು ಈ ಪ್ಲ್ಯಾನ್ ಹೊಂದಿದೆ.

Viನಿಂದ ಬಂಪರ್ ಆಫರ್, ಕೇವಲ 99 ರೂಪಾಯಿಗೆ ಕಾಲ್ ಹಾಗೂ ಡೇಟಾ ಪ್ಲಾನ್!

265 ನಗರಗಳಲ್ಲಿ ಏರ್ ಟೆಲ್ 5ಜಿ ಸೇವೆ 
ಅತೀವೇಗದ 5ಜಿ ಸೇವೆಗಳನ್ನು ಭಾರ್ತಿ ಏರ್ ಟೆಲ್ ಇತ್ತೀಚೆಗೆ  125 ನಗರಗಳಲ್ಲಿ ಬಿಡುಗಡೆಗೊಳಿಸಿದೆ. ಇದರಿಂದ ದೇಶಾದ್ಯಂತ ಒಟ್ಟು 265 ನಗರಗಳಲ್ಲಿ ಏರ್ ಟೆಲ್ 5ಜಿ ಸೇವೆ ಲಭಿಸಲಿದೆ. ಟೆಲಿಕಾಮ್ ಸೇವೆಗಳ ಪೂರೈಕೆದಾರ ಏರ್ ಟೆಲ್ ಕಳೆದ ವಾರವಷ್ಟೇ ತನ್ನ 5ಜಿ ಬಳಕೆದಾರರ ಸಂಖ್ಯೆ 10 ಮಿಲಿಯನ್ ಗಡಿದಾಟಿದೆ ಎಂಬ ಮಾಹಿತಿ ನೀಡಿತ್ತು. 2022ರ ಅಕ್ಟೋಬರ್ ನಿಂದ ಏರ್ ಟೆಲ್ ದೇಶದಲ್ಲಿ ಹೈಸ್ಪೀಡ್ 5ಜಿ ಸೇವೆಗಳನ್ನು ಪ್ರಾರಂಭಿಸಿತ್ತು. ಇನ್ನು ಸರ್ಕಾರ ಏರ್ ಟೆಲ್ ಗೆ ಹೈಸ್ಪೀಡ್ 5ಜಿ ಸ್ಪೆಕ್ಟ್ರಂ ಹಂಚಿಕೆ ಪತ್ರವನ್ನು 2022ರ ಆಗಸ್ಟ್ ನಲ್ಲಿ ನೀಡಿತ್ತು. ಈ ಮೂಲಕ ದೇಶದಲ್ಲಿ 5ಜಿ ಸೇವೆಗಳನ್ನು ಒದಗಿಸಲು ಸಿದ್ಧಗೊಳ್ಳುವಂತೆ ತಿಳಿಸಿತ್ತು. 
 

Latest Videos
Follow Us:
Download App:
  • android
  • ios