Asianet Suvarna News Asianet Suvarna News

Viನಿಂದ ಬಂಪರ್ ಆಫರ್, ಕೇವಲ 99 ರೂಪಾಯಿಗೆ ಕಾಲ್ ಹಾಗೂ ಡೇಟಾ ಪ್ಲಾನ್!

ಕೇವಲ 99 ರೂಪಾಯಿ ರಿಚಾರ್ಜ್ ಮಾಡಿದರೆ ಸಾಕು, ಕಾಲ್ಸ್ ಹಾಗೂ ಡೇಟಾ ಸರ್ವೀಸ್ ಲಭ್ಯವಾಗಲಿದೆ. ವಿಐ ಗ್ರಾಹಕರಿಗೆ ಅತ್ಯುತ್ತಮ ಹಾಗೂ ಅತೀ ಕಡಿಮೆ ಬೆಲೆಯ ಪ್ಲಾನ್ ಪರಿಚಯಿಸಿದೆ.
 

Vi introduce Rs 99 pack to drive Digital India growth for customer voice and data services ckm
Author
First Published Jan 29, 2023, 6:14 PM IST

ಬೆಂಗಳೂರು(ಜ.29) : ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಗ್ರಾಹಕರನ್ನು ಉಳಿಸಿಕೊಳ್ಳುವ ಜೊತೆಗೆ ಹೊಸ ಗ್ರಾಹಕರನ್ನು ಸೆಳೆಯಲು ವಿವಿಧ ಆಫರ್ ನೀಡಲಾಗುತ್ತಿದೆ. ಇದೀಗ ವಿಐ (Vi) ಹೊಸ ಪ್ಲಾನ್ ಪರಿಚಯಿಸಿದೆ.   Vi ದೇಶದಾದ್ಯಂತ ಬಳಕೆದಾರರಿಗೆ ಕೇವಲ  99 ರೂಪಾಯಿಗೆ ಪ್ರವೇಶ ಮಟ್ಟದ ರೀಚಾರ್ಜ್ ಪರಿಚಯಿಸಿದೆ. ಈ ಬೆಲೆಯಲ್ಲಿ ಗ್ರಾಹಕರಿಗೆ ಧ್ವನಿ ಮತ್ತು ಡೇಟಾ ಸೇವೆಗಳೊಂದಿಗೆ ದೇಶದಾದ್ಯಂತ ಅಗತ್ಯ ಮೊಬೈಲ್ ಸಂಪರ್ಕ ನೀಡುತ್ತಿರುವ ಗರಿಷ್ಠ ವೇಗದ ಡೇಟಾ ನೀಡುತ್ತಿರುವ ದೂರಸಂಪರ್ಕ ಸೇವಾ ಸಂಸ್ಥೆ ವಿಐ (Vi) ಆಗಿದೆ. ಈ ಪ್ಲಾನ್ 28 ದಿನದ ವ್ಯಾಲಿಟಿಡಿ ಕೂಡ ನೀಡಲಾಗುತ್ತಿದೆ. ಸಂಕ್ಷಿಪ್ತವಾಗಿ ಹೇಳಬೇಕು ಅಂದರೆ ಒಂದು ತಿಂಗಳ ಪ್ಲಾನ್ ಕೇವಲ 99 ರೂಪಾಯಿಗೆ ಇದೀಗ ಲಭ್ಯವಾಗಿದೆಯ.

ಬಳಕೆದಾರರ ಪಿರ‍್ಯಾಮಿಡ್‌ನ ಕೆಳಭಾಗದಲ್ಲಿ ಇರುವವರು ಪರಸ್ಪರ  ಸಂಪರ್ಕದಲ್ಲಿ ಇರುವುದನ್ನು ಸಕ್ರಿಯಗೊಳಿಸಲು, Vi  99 ರೂಪಾಯಿ ರೀಚಾರ್ಚ್ ಸಂಪೂರ್ಣ ಕರೆ ಅವಧಿ ಮತ್ತು 200 ಎಂಬಿ ಡೇಟಾವನ್ನು 28 ದಿನಗಳ ಮಾನ್ಯತೆಯ ಅವಧಿಯೊಂದಿಗೆ ನೀಡುತ್ತದೆ.

ವಿಶ್ವದ ಮೊದಲ SMS ಯಾವ್ದು? ಅದ್ರ ಇತಿಹಾಸ ಏನು?

ವೊಡಾಫೋನ್ ಐಡಿಯಾದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಕ್ಲಸ್ಟರ್ ಬಿಸಿನೆಸ್ ಹೆಡ್ ಸಿದ್ಧಾರ್ಥ ಜೈನ್ ಅವರು ಈ ಬಗ್ಗೆ ಮಾಹಿತಿ ನೀಡಿ, ‘ಗ್ರಾಹಕರ ಕೈಗೆಟುಕುವಿಕೆಯನ್ನು ಪೂರೈಸುವ ಮೂಲಕ, ಅತ್ಯಂತ ಆಕರ್ಷಕ ಬೆಲೆಯಲ್ಲಿ ಅತ್ಯುತ್ತಮವಾದ ಮೊಬೈಲ್ ಸೇವೆಗಳನ್ನು ನೀಡಲು Vi ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರೆಸಿದೆ. ಮೊಬೈಲ್ ಬಳಕೆದಾರರು ಮತ್ತು ಬಳಕೆದಾರರಲ್ಲದವರನ್ನು ಕೇವಲ ₹ 99ಕ್ಕೆ ಗರಿಷ್ಠ ವೇಗದ Vi ನೆಟ್‌ವರ್ಕ್‌ಗೆ ಸೇರಲು ನಾವು ಆಹ್ವಾನಿಸುತ್ತೇವೆ. ಡಿಜಿಟಲ್ ಯುಗದಲ್ಲಿ ಮೊಬೈಲ್ ಸಂಪರ್ಕದ ಗರಿಷ್ಠ ಪ್ರಯೋಜನಗಳನ್ನು ಆನಂದಿಸುವುದನ್ನು ಮುಂದುವರಿಸಿ. ಇದು ಕೇವಲ ಗ್ರಾಹಕರ ಒಳಗೊಳ್ಳುವಿಕೆಯನ್ನು ಹೆಚ್ಚಿಸುವುದಿಲ್ಲ. ಜೊತೆಗೆ ಹೆಚ್ಚಿನ ಬಳಕೆದಾರರು ಡಿಜಿಟಲ್ ಜಗತ್ತಿಗೆ ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ’ ಎಂದು ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಗ್ರಾಮೀಣ ಪ್ರದೇಶದ ಪೂರ್ವಪಾವತಿ (ಪ್ರಿಪೇಯ್ಡ್) ಗ್ರಾಹಕರಿಗೆ ಸೇವೆ ನೀಡಲು Vi ಹೊಸ ಸ್ವರೂಪದ Vi ಮಳಿಗೆಗಳನ್ನು ಸಹ ತೆರೆದಿದೆ. ಇದು ಗ್ರಾಮೀಣ ಪ್ರದೇಶದ  ಯುವಕರಿಗೆ ಉದ್ಯೋಗ ಮತ್ತು ಕೌಶಲ, ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳಿಗೆ ಸಿದ್ಧತೆ, ಇಂಗ್ಲಿಷ್ ಭಾಷಾ ಕೌಶಲ  ಮುಂತಾದ ವಲಯಗಳಲ್ಲಿ  ವಿಶೇಷವಾಗಿ ರೂಪಿಸಿರುವ ಕೊಡುಗೆಗಳ ವ್ಯಾಪಕ ಅನುಕೂಲತೆ ಒದಗಿಸುತ್ತದೆ. 

ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ Vi ₹151 ಪ್ರಿಪೇಯ್ಡ್ ಆಡ್-ಆನ್ ಪ್ಯಾಕ್‌ ಲಾಂಚ್‌

·         ಮೊಬೈಲ್‌ ಬಳಕೆದಾರರು ಪರಸ್ಪರ ಸಂಪರ್ಕದಲ್ಲಿರಲು ಮತ್ತು ಡಿಜಿಟಲ್ ಭಾರತದ ಬೆಳವಣಿಗೆಯಲ್ಲಿ ಭಾಗವಹಿಸುವುದಕ್ಕೆ ನೆರವಾಗಲು  ವಿಐ (Vi) ಕೇವಲ ₹ 99ಕ್ಕೆ, ಬಳದಾರರ ಪಿರ‍್ಯಾಮಿಡ್‌ನ ದೊಡ್ಡ ತಳಭಾಗ ಸಕ್ರೀಯಗೊಳಿಸಿದೆ
·         Vi ಮಾತ್ರ, ದೇಶದಾದ್ಯಂತ ಗರಿಷ್ಠ ವೇಗದ ಸಂಪರ್ಕ ಜಾಲಕ್ಕೆ  99ರೂಪಾಯಿ ಪ್ರವೇಶ ಮಟ್ಟದ ರೀಚಾರ್ಜ್ ನೀಡುತ್ತದೆ.
·         ಬಳಕೆದಾರರು ಪೂರ್ಣ ಪ್ರಮಾಣದ ಮಾತನಾಡುವ ಅವಧಿ ಮತ್ತು 28 ದಿನಗಳ ಮಾನ್ಯತೆಯ ಜೊತೆಗೆ 200 ಎಂಬಿ ಡೇಟಾ ಪಡೆಯುತ್ತಾರೆ,

Follow Us:
Download App:
  • android
  • ios